ಶ್ರೀನಿವಾಸಪುರ:ತಾಲೂಕಿನಲ್ಲಿ ಅರಣ್ಯ ಇಲಾಖೆ ನಡೆಸಿರುವ ಒತ್ತುವರಿ ತೆರವು ಕಾರ್ಯಾಚರಣೆ ಪ್ರದೇಶಗಳಲ್ಲಿ ಕೋಲಾರ ಜಿಲ್ಲಾ ರೈತ ಸಂಘಟನೆಗಳ ಮುಖಂಡರಾದ ಸೂರ್ಯನಾರಾಯಣ, ಗಣೇಶ ಗೌಡ, ಅಬ್ಬಿಣಿ ಶಿವಪ್ಪ, ಕೂಟೇರಿ ನಾಗರಾಜ್, ವಕೀಲರಾದ ಸತೀಶ್,ಪಾತಕೋಟೆ ನವೀನ್, ಬಗರ್ ಹುಕುಂ ಸಾಗುವಳಿ ಹೋರಾಟ ಸಮಿತಿ ಮುಖಂಡರಾದ ಸೈಯದ್ ಫಾರೂಖ್,ಯಳಗಪ್ಪ, ಶಿವರಾಜ್ ಕುಮಾರ್, ವೆಂಕಟೇಶ್,ಮುಳಬಾಗಿಲು ಗಣೇಶ, ಬೇತಮಂಗಲ ನಾರಾಯಣಸ್ವಾಮಿ, ಕೋಲಾರ ವೆಂಕಟ್ರಾಮಪ್ಪ, ಮುಂತಾದವರು ಬೇಟಿ ನೀಡಿ ರೈತರು ಬೆಳೆದಿರುವಂತ ಬೆಳೆ ನಾಶವಾಗಿದ್ದ ಪಾಳ್ಯ, ಕೇತಗಾನಹಳ್ಳಿ, ಚಿಂತಕುಂಟೆ, ಶ್ರೀನಿವಾಸಪುರ ಗ್ರಾಮೀಣ, ದೊಡಮಲದೊಡ್ಡಿ, ನಾರಮಾಕಲಹಳ್ಳಿ, ಉಪ್ಪರಪಲ್ಲಿ, ಮೊಲ್ಲಂಪಲ್ಲಿ ಗ್ರಾಮಗಳ ರೈತರೊಂದಿಗೆ ಬೆಳೆ ಮತ್ತು ಭೂಮಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲಾಧ್ಯಕ್ಷ ಪಿ.ಆರ್.ಸೂರಿ ಮಾತನಾಡಿ ತಾಲೂಕಿನಲ್ಲಿ ರೈತರಿಗೆ ಆಗಿರುವ ಆನ್ಯಾಯವನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ವಸ್ತು ಸ್ಥಿತಿ ಅಧ್ಯಯನಕ್ಕಾಗಿ ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳ ಮುಖಂಡರೊಂದಿಗೆ ಇಲ್ಲಿಗೆ ಆಗಮಿಸಿದ್ದು,ಯಾವುದೆ ರೈತರು ಭೂಗಳ್ಳರಲ್ಲ,ನೂರಾರು ಎಕರೆ ಭೂಮಿ ಕಬಳಿಸಿಲ್ಲ ಬದುಕಲು ಸರ್ಕಾರದಿಂದ ಮಂಜೂರಾಗಿರುವ 2-3 ಎಕರೆ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಇದ್ದಾರೆ ಇಲ್ಲಿ ರೈತರ್ಯಾರು ಅಧೈರ್ಯ ಪಡುವ ಅವಶ್ಯಕತೆ ಇಲ್ಲ ರೈತರ ಭೂಮಿಯನ್ನು ಅರಣ್ಯ ಭೂಮಿ ಎಂದು ಇಂಡೀಕರಿಸಿರುವ ರೆವಿನ್ಯೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಸರ್ಕಾರದ ಗಮನಕ್ಕೆ ತರಲಾಗುವುದು.ಇಲ್ಲಿ ಯಾರೆ ತಪ್ಪು ಮಾಡಿರಲಿ ಅವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದರು.ಅನ್ಯಾಯಕ್ಕೆ ಒಳಗಾಗಿರುವ ಸಾಮನ್ಯ ರೈತರಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.