ಶ್ರೀನಿವಾಸಪುರ:ಪ್ರಿಯಕರನ ಜೊತೆ ಸುತ್ತಾಡಲು ಸುಣ್ಣಕಲ್ಲು ಅರಣ್ಯ ಪ್ರದೇಶಕ್ಕೆ ಬಂದಿದ್ದ ಆಂಧ್ರದ ಯುವತಿ ಅನುಮಾಸ್ಪದ ರೀತಿಯಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಮೃತ ಪಟ್ಟಿರುವ ಘಟನೆ ಇಂದು ಶುಕ್ರವಾರ ಸಂಜೆ ನಡೆದಿದೆ.ಅನುಮಾನಸ್ಪದವಾಗಿ ಮೃತ ಪಟ್ಟ ಯುವತಿಯನ್ನು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆ ಪೀಲೇರು ಪಟ್ಟಣದ ಹರ್ಷಿತ(20) ಎಂದು ಗುರುತಿಸಲಾಗಿದೆ.
ಆಂಧ್ರದ ಪೀಲೇರು ಪಟ್ಟಣದ ನಿವಾಸಿಯಾದ ಹರ್ಷಿತ ಹಾಗು ಅಕೆಯ ಪ್ರಿಯಕರ ಕಲಿಕಿರಿಯ ವಾಡೆವಾಂಡ್ಲಪಲ್ಲೆಯ ಹೇಮಂತ್ ಇಬ್ಬರು ಸಂಬಂದಿಗಳು ಹಾಗೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ವಿಷಯ ಇಬ್ಬರ ಮನೆಯಲ್ಲಿ ಗೊತ್ತಾಗಿ ಇಬ್ಬರನ್ನು ಕೂರಿಸಿ ಮದುವೆ ಮಾಡುವ ಆಲೋಚನೆ ಮಾಡಿ ಇಬ್ಬರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ಮಾಡಿರುತ್ತಾರೆ.ಹರ್ಷಿತ ಮದನಪಲ್ಲಿ ನಗರದಲ್ಲಿ ಹಾಸ್ಟಲ್ ನಲ್ಲಿ ಇದ್ದುಕೊಂಡು ಪದವಿ ವ್ಯಾಸಾಂಗ ಮಾಡುತ್ತಿದ್ದು ಹೇಮಂತ್ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುತ್ತಾನೆ ಇವರು ಮೊದಲಿನಿಂದಲೂ ವಿಕೇಂಡ್ ನಲ್ಲಿ ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿ ಶ್ರೀನಿವಾಸಪುರ ತಾಲೂಕಿನ ಸುಣ್ಣಕಲ್ಲು ಅರಣ್ಯ ಪ್ರದೇಶದಲ್ಲಿ ಸುತ್ತಾಡುವುದು ಸಾಮನ್ಯವಾಗಿತ್ತಂತೆ ಅದರಂತೆ ಇಂದು ಸಹ ಇಬ್ಬರು ಸುಣ್ಣಕಲ್ಲು ಅರಣ್ಯ ಪ್ರದೇಶಕ್ಕೆ ದ್ವಿಚಕ್ರ ವಾಹನದಲ್ಲಿ ಬಂದು ಸುತ್ತಾಡಿದ್ದಾರೆ ಮದುವೆ ನಿಶ್ಚಿತಾರ್ಥ ಆಗಿರುವ ಇಬ್ಬರ ನಡುವೆ ಏನಾಯಿತೊ ಏನೊ ಯುವತಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದು ಈ ಬಗ್ಗೆ ಹರ್ಷಿತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವಕ ಹೆಮೆಂತ್ ಕುಟುಂಬಸ್ಥರಿಗೆ ಫೋನ್ ಮಾಡಿ ತಿಳಿಸಿದ್ದಾನೆ ಪೋಲಿಸರು ಬಳಿ ಹೆಮೆಂತ್ ತಿಳಿಸಿರುವಂತೆ ಮದುವೆ ವಿಚಾರದಲ್ಲಿ ಮಾತಿನ ಚಕಮುಕಿ ನಡೆಯಿತು ಕೋಪಿಸಿಕೊಂಡು ಸ್ವಲ್ಪ ದೂರ ಹೋದೆನಾದರು ಆಕೆ ನನ್ನ ಹಿಂದೆ ಬಾರದನ್ನು ನೋಡಿ ಅನುಮಾನಗೊಂಡು ನಾವಿಬ್ಬರು ಕುಳಿತು ಮಾತನಾಡಿದ ಜಾಗದಲ್ಲಿ ಹೋಗಿ ನೋಡಿದಾಗ ಮರಕ್ಕೆ ನೇಣು ಹಾಕಿಕೊಂಡಿದ್ದಾಳೆ ಎಂದು ಹೇಳಿರುತ್ತಾನೆ,ಇದನ್ನೆ ಕುಟುಂಬಸ್ಥರಿಗೂ ಹೇಳಿದ್ದು ನಿಜಾಂಶ ಏನು ಎಂಬು ಯಾರಿಗೂ ತಿಳಿಯದು ಪೋಲಿಸ್ ತನಿಖೆಯಿಂದ ಹೊರಬರಬೇಕಿದೆ.
ಈ ಬಗ್ಗೆ ಮಗಳು ಸಾವಿನ ಬಗ್ಗೆ ತನಿಖೆಯಾಗಲಿ ಎಂದು ಮೃತ ಹರ್ಷಿತ ಪೋಷಕರು ರಾಯಲ್ಪಾಡು ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. ರಾಯಲ್ಪಾಡು ಪೊಲೀಸರು ಪ್ರಿಯಕರ, ಹೇಮಂತ್ ನನ್ನು ವಶಕ್ಕೆ ಪಡೆದಿರುತ್ತಾರೆ.ಸ್ಥಳಕ್ಕೆ ಮುಳಬಾಗಿಲು ಡಿ.ವೈ.ಎಸ್.ಪಿ ನಂದಕುಮಾರ್,ಗ್ರಾಮಾಂತರ ಸರ್ಕಲ್ ಇನ್ಸಪೇಕ್ಟರ್ ಜಯಾನಂದ್ ಭೇಟಿ ನೀಡಿ ಪರಶಿಲನೆ ನಡೆಸಿರುತ್ತಾರೆ.
ಅರಣ್ಯ ಪ್ರದೇಶದಲ್ಲಿ ಪ್ರೇಮಿಗಳು ಸುತ್ತಾಡುವುದು ಹೊಸತಲ್ಲ
ತಾಲೂಕಿನ ಸುಣ್ಣಕಲ್ ಹಾಗು ರಾಯಲ್ಪಾಡು ಅರಣ್ಯ ಪ್ರದೇಶದಲ್ಲಿ ಆಂಧ್ರದಿಂದ ಬರುವಂತ ಪ್ರೇಮಿಗಳು ಸುತ್ತಾಟ ನಡೆಸುವುದು ಹೊಸತಲ್ಲ ಆಂಧ್ರದ ಮದನಪಲ್ಲಿ ಇತರಡೆಗಳಿಂದ ಆಗಮಿಸಿಸುವ ಪ್ರೇಮಿಗಳ ಕಲರವ ಈ ಭಾಗದ ಅರಣ್ಯ ಪ್ರದೇಸಗಳಲ್ಲಿ ಸಾಮಾನ್ಯ ಇಲ್ಲಿ ಪ್ರೇಮಿಗಳ ಕಲರ ಅಷ್ಟೆ ಅಲ್ಲ ಎಣ್ಣೆ ಆಸಾಮಿಗಳ ಗದ್ದಲವೂ ಸಾಮನ್ಯ ದೂರದ ಬೆಂಗಳೂರಿನಿಂದ ಕಾರುಗಳಲ್ಲಿ ಎಣ್ಣೆ ಮದ್ಯವನ್ನು ತಂದು ಇಲ್ಲಿ ಕುಡಿದು ಕುಪ್ಪಳಿ ಮದ್ಯದ ಬಾಟಿಲ್ ಗಳನ್ನು ಹಸಿರು ಅರಣ್ಯದಲ್ಲಿ ಒಡೆದು ಬಿಸಾಕುವುದು ಮಾಮೂಲಾಗಿಬಿಟ್ಟಿದೆ,ರಾಯಲ್ಪಾಡು ಅರಣ್ಯ ಪ್ರದೇಶ ಹಚ್ಚ ಹಸುರಿನ ಅಪರೂಪದ ಔಷಧೀಯ ಗಿಡಮೂಲಿಕೆಗಳ ಕಾನನ,ಅರಣ್ಯ ಇಲಾಖೆ ನಿರ್ಲಕ್ಷ್ಯದ ಪರಿಣಾಮ ಪುಡಾರಿಗಳ ಪುಂಡು ಪೋಕರಿಗಳ ಆಶ್ರಯ ತಾಣ ಆಗಿದೆ.
ಸಣ್ಣ ಮಳೆಯಾದರೆ ಸಾಕು ಸ್ವಾಭಾವಿಕವಾಗಿ ಸುತ್ತಮುತ್ತಲಿನ ಬೆಟ್ಟದ ಬಂಡೆಗಳ ಮೇಲಿಂದ ಚಿಮ್ಮಿಕೊಂಡು ಕೆಳಗೆ ಹರಿದು ಬರುವ ಸಣ್ಣ ಸಣ್ಣ ಜರಿಗಳು,ಹಚ್ಚ ಹಸುರಿನ ವನಸಿರಿ,ಹಕ್ಕಿಗಳ ಚಿಲಿಪಿಲಿ ಕಲರವ,ಕಣ್ಣಿಗೆ ಮಲೆನಾಡನ್ನು ಜ್ಞಾಪಿಸುವಂತೆ ಮುದಕೊಡುತ್ತದೆ. ಹಾಗಾಗಿ ಇದು ಒಂದು ರೀತಿಯಲ್ಲಿ ಪ್ರೇಮಿಗಳ ತಾಣ ಆಗಿ ಬಿಟ್ಟಿದೆ.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Monday, November 25