ಶ್ರೀನಿವಾಸಪುರ:ಕಾನೂನಿಗಿಂತ ಯಾರು ದೊಡ್ಡವರಲ್ಲ ಜನರು ಕಾನೂನನ್ನು ಮೀರಿ ವರ್ತಿಸಬಾರದು ಎಂದು ಮುಳಬಾಗಿಲು ಡಿ.ವೈ.ಎಸ್.ಪಿ ನಂದಕುಮಾರ್ ತಿಳಿಸಿದರು. ಅವರು ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಶ್ರೀನಿವಾಸಪುರ ಪೋಲಿಸ್ ಠಾಣೆ ವತಿಯಿಂದ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾನೂನು ಚೌಕಟ್ಟು ಮೀರಿ ನಡೆದುಕೊಳ್ಳಬಾರದು ಹಾಗೆ ಯಾರೆ ತಪ್ಪು ಮಾಡಿದರು ಸ್ಥಳೀಯ ಪೋಲಿಸರು ಸ್ಪಂದಿಸಿ ನ್ಯಾಯ ಕೊಡಿಸುತ್ತಾರೆ.ಯಾವುದೆ ಕಾರಣಕ್ಕೂ ಜನರು ಕಾನೂನು ವಿಚಾರವಾಗಿ ಸೌಹಾರ್ದತೆಯಿಂದ ವರ್ತಿಸಲು ಸೂಚಿಸಿದರು.ಪೋಲಿಸ್ ಇನ್ಸಪೇಕ್ಟರ್ ದಯಾನಂದ್ ಮಾತನಾಡಿ ಗ್ರಾಮಸ್ಥರು ಪೋಲಿಸರೊಂದಿಗೆ ಸೌಜನ್ಯಯುಕ್ತವಾಗಿ ನಡೆದುಕೊಂಡಿದ್ದರೆ ಇಂದು ಗ್ರಾಮದಲ್ಲಿ ಯಾರು ಆತಂಕ ಪಡುವ ಅಗತ್ಯ ಇರುತ್ತಿರಲಿಲ್ಲ ಇಲ್ಲಿ ಯಾರು ಕಾನೂನಿಗಿಂತ ದೊಡ್ಡವರಲ್ಲ ಎಲ್ಲರೂ ಬದ್ದರಾಗಿ ನಡೆದುಕೊಳ್ಳಬೇಕು ಎಂದರು.
ಕಳೆದ ಹತ್ತು ಹದಿನೈದು ದಿನಗಳ ಹಿಂದೆ ವ್ಯಕ್ತಿಯೊಬ್ಬ ತನ್ನ ಮೊದಲ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಹಿನ್ನಲೆಯಲ್ಲಿ ಹತ್ಯೆ ಆರೋಪಿಯ ವಿರುದ್ದ ನಂಬಿಹಳ್ಳಿ ಗ್ರಾಮಸ್ಥರು ತಿರುಗಿ ಬಿದ್ದು ಪೋಲಿಸರನ್ನು ಲೆಕ್ಕಿಸದೆ ಉದ್ವೇಗಕ್ಕೆ ಒಳಗಾಗಿ ಪೋಲಿಸರೊಂದಿಗೆ ವಾಗ್ವಾದಕ್ಕೆ ನಿಂತು ಅರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ನಂಬಿಹಳ್ಳಿ ಗ್ರಾಮಸ್ಥರು ಒತ್ತಾಯಿಸಿ ಆರೋಪಿ ಅವಿತಿದ್ದ ಕಟ್ಟಡಕ್ಕೆ ನುಗ್ಗಲು ಯತ್ನಿಸಿದಾಗ ಪೋಲಿಸರು ಹರ ಸಾಹಸ ಪಟ್ಟು ತಿಳಿಹೇಳಿದರು ಸುಮ್ಮನಾಗದ ಗ್ರಾಮಸ್ಥರರು ಯುದ್ದಕ್ಕೆ ನಿಂತವರಂತೆ ವರ್ತಿಸಿದ ಪರಿಣಾಮ ಗ್ರಾಮಸ್ಥರನ್ನು ಚದುರಿಸಲು ಗಾಳಿಯಲ್ಲಿ ಗುಂಡುಹಾರಿಸಿ ಪರಿಸ್ಥಿತಿ ತಹಬದಿಗೆ ತರಲಾಗಿತ್ತು.
ಈ ಕಾರಣಕ್ಕಾಗಿ ಇಡಿ ಗ್ರಾಮಸ್ಥರ ವಿರುದ್ದ ಪೋಲಿಸ್ ಕೇಸ್ ಜಡಿಯಲಾಗಿದ್ದು ಇದಕ್ಕೆ ಹೆದರಿದ್ದ ಬಹುತೇಕ ಗ್ರಾಮಸ್ಥರು ಭಿತಿಯಿಂದ ಊರು ಕಾಲಿ ಮಾಡಿದ್ದರು ಇದಕ್ಕಾಗಿ ಗ್ರಾಮಸ್ಥರು ರಾಜಕೀಯ ಮುಖಂಡರ ಮೊರೆ ಹೊಗಿ ಪೋಲಿಸರ ಉಳಪಟ ತಪ್ಪಿಸಲು ದುಂಬಾಲು ಬಿದ್ದಿದ್ದರು, ಈ ಹಿನ್ನಲೆಯಲ್ಲಿ ಕಳೆದವಾರ ಶಾಸಕ ವೆಂಕಟಶಿವಾರೆಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದರು ನಂತರದಲ್ಲಿ ಹಲವಾರು ಮುಖಂಡರು ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಲ್ಲದೆ ಪೋಲಿಸರ ಮೇಲೆ ಒತ್ತಡ ತಂದ ಹಿನ್ನಲೆಯಲ್ಲಿ ಭಯಗ್ರಸ್ತ ಗ್ರಾಮದಲ್ಲಿ ಧೈರ್ಯ ತುಂಬಲು ಸ್ವತಹಃ ಪೋಲಿಸರೆ ಫೀಲ್ಡಿಗೀಳಿದು ಶನಿವಾರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ನೆರೆದಿದ್ದ ಜನಕ್ಕೆ ಕಾನೂನು ಪಾಠ ಮಾಡಿದರು.
ಈ ಸಂದರ್ಭದಲ್ಲಿ ಪ್ರೌಢಶಾಲೆ ಮುಖ್ಯೋಪಾದ್ಯಾಯ ಐಮಾರೆಡ್ಡಿ,ಯುವ ಮುಖಂಡ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಲ್ಲೂರುಮಂಜು,ಗ್ರಾಮದವರೆ ಆದ ರೈತ ಮುಖಂಡ ಶ್ರೀರಾಮರೆಡ್ಡಿ,ಕನ್ನಡ ಜನಪರ ವೇದಿಕೆ ಅಧ್ಯಕ್ಷ ಮೊಗಿಲಹಳ್ಳಿಮಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.