ಶ್ರೀನಿವಾಸಪುರ: ಶ್ರೀನಿವಾಸಪುರ ರಾಜ್ಯ ಸಾರಿಗೆ ಸಂಸ್ಥೆ ಘಟಕದ ಉದ್ಯೋಗಿ ಜಿ.ಎಸ್.ಜಗನಾಥ್ ರಾಷ್ಟ್ರ ಮಟ್ಟದ ಅಂತರಾಜ್ಯ ಶೇಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.
ರಾಜ್ಯ ಸಾರಿಗೆ ಸಂಸ್ಥೆ ಚಾಲಕರಾಗಿರುವ ಜಗನಾಥ್ ಅತ್ಯುತ್ತಮ ಶೇಟಲ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದು ರಾಜ್ಯಮಟ್ಟದ ಹಲವಾರು ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ವಿವಿದ ಹಂತದ ಪದಕ ಹಾಗು ಪ್ರಶಸ್ತಿಗಳ ಪುರಸೃತರಾಗಿದ್ದಾರೆ. ಅವರ ಸಾಧನೆಯ ಪಟ್ಟಿಯಲ್ಲಿ ಮತ್ತೊಂದು ಗರಿಯನ್ನು ಪಡೆದಿರುತ್ತಾರೆ.
ಅಖಿಲ ಭಾರತ ರಾಜ್ಯ ಸಾರಿಗೆ ಸಂಸ್ಥೆಗಳ ಒಕ್ಕೂಟವು ದೇಶದಲ್ಲಿನ ಸಾರ್ವಜನಿಕ ಸಾರಿಗೆ ಸಂಸ್ಥೆಯ ನಿಗಮಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗುಜರಾತ್ ರಾಜ್ಯದ ವಡೋದರಾ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ 2023 ಪುರುಷರ ಶೇಟಲ್ ಬ್ಯಾಡ್ಮಿಂಟನ್ ಸ್ಪರ್ದೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಪ್ರತಿನಿಧಿಯಾಗಿ ಭಾಗವಹಿಸಿದ್ದ ಜಗನಾಥ್ ಉತ್ತಮ ಸಾಧನೆ ಮಾಡಿ ಡಬಲ್ಸ್ ನಲ್ಲಿ ದ್ವೀತಿಯ ಸ್ಥಾನ ಹಾಗು ಸಿಂಗಲ್ಸ್ ನಲ್ಲೂ ದ್ವೀತಿಯ ಸ್ಥಾನ ಗಳಿಸಿ ಪ್ರತ್ಯಕವಾಗಿ ಎರಡು ಬೆಳ್ಳಿಪದಕ ಹಾಗು ದ್ವೀತೀಯ ರನ್ನರ್ ಅಪ್ ಪ್ರಶಸ್ತಿ ಗಳಿಸಿದ್ದಾರೆ.
ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಂದ ಅಭಿನಂದನೆ
ರಾಜ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರ ವಿ.ಅನ್ಬುಕುಮಾರ್ ದ್ವೀತಿಯ ಸ್ಥಾನ ಹಾಗು ಸಿಂಗಲ್ಸ್ ನಲ್ಲೂ ದ್ವೀತಿಯ ಸ್ಥಾನ ಗಳಿಸಿ ವಿಜೇತರಾದ ಶೇಟಲ್ ಬ್ಯಾಡ್ಮಿಂಟನ್ ಆಟಗಾರ ಜಗನಾಥ್ ಹಾಗು ಇವರೊಂದಿಗೆ ಭಾಗವಹಿಸಿದ್ದ ರಾಜ್ಯ ಸಾರಿಗೆ ಸಂಸ್ಥೆ ಇತರೆ ನೌಕರರನ್ನು ಬೆಂಗಳೂರಿನ ಕಚೇರಿಯಲ್ಲಿ ಅಭಿನಂದಿಸಿ ವೈಯುಕ್ತಿಕ ನಗದು ಪುರಸ್ಕಾರ ಘೋಷಿಸಿರುತ್ತಾರೆ.
ಸ್ಥಳಿಯ ಶೇಟಲ್ ಬ್ಯಾಡ್ಮಿಂಟನ್ ಆಟಗಾರರ ತಂಡದ ಸದಸ್ಯರಾದ ವಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ,ಶಿಕ್ಷಕ ನಾಗದೇನಹಳ್ಳಿ ಚಂದ್ರು,ಹೋಟೆಲ್ ಉದ್ಯೋಮಿ ಪಟೇಲ್ ಶಫಿ,ರಂಜಿತ್ ಸೇರಿದಂತೆ ಮುಂತಾದವರು ಜಗನಾಥ್ ಅವರನ್ನು ಅಭಿನಂದಿಸಿರುತ್ತಾರೆ.