ನ್ಯೂಜ್ ಡೆಸ್ಕ್:ಸೈಬರ್ ಅಪರಾಧಿಗಳು ದಿನೆ-ದಿನೆ ಹೊಸ ಹೊಸ ಮಾರ್ಗಗಳಲ್ಲಿ ಜನರನ್ನು ವಂಚಿಸಿ ಹಣ ಎಗರಿಸುವುದು ಸಾಮಾನ್ಯವಾಗುತ್ತಿದೆ ಇದು ಪೊಲೀಸ್ ವ್ಯವಸ್ಥೆಗೆ ಸವಾಲಾಗಿದೆ, ಸಾಮಜಿಕ ಜಾಲತಾಣಗಳ ಮೂಲಕ ಸೈಬರ್ ಕ್ರಿಮಿನಲ್ಗಳು ಯಾಮರಿಸಿ ಜನರಿಂದ ನಾಜೂಕಾಗಿ ದುಡ್ಡು ಎಗರಿಸುತ್ತಾರೆ ಹಣ ಕಳೆದುಕೊಂಡವರು ಸಮಾಜದಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತೆವೆ ಎಂದು ಯಾರಿಗೆ ಹೇಳಿಕೊಳ್ಳದೆ ನಲಗುತ್ತಿದ್ದಾರೆ.
ಸೈಬರ್ ವಂಚನೆ ಅಪರಾಧಗಳ ಕುರಿತಾಗಿ ಪೋಲಿಸ್ ಇಲಾಖೆ ಜನರನ್ನು ಜಾಗೃತಿ ಗೊಳಿಸುತ್ತಿದ್ದರು ಸದ್ದಿಲ್ಲದೆ ಸಾವುಕಾರರಾಗಲು ಹೋರಟಿರುವ ಜನ ನಿತ್ಯ ನಿರಂತರವಾಗಿ ಸೈಬರ್ ಅಪರಾಧಿಗಳ ತಂತ್ರಗಳಿಗೆ ಒಳಗಾಗಿ ಹಣ ಕಳೆದುಕೊಳ್ಳುವುದು ನಿಂತಿಲ್ಲ, ಸಾಮಾಜಿಕ ಜಾಲ ತಾಣಗಳಲ್ಲಿ ಯಾರೆ ಆಗಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ ಪರಿಚಯ ಇಲ್ಲದವರೊಂದಿಗೆ ಜಾಲ ತಾಣಗಳಲ್ಲಿ ಚಾಟಿಂಗ್ ಹಾಗು ಸಂಭಾಷಣೆ ನಡೆಸಬೇಡಿ ಹಣದ ವ್ಯವಹಾರ ಮಾಡಬೇಡಿ ಸಾಮಾಜಿಕ ಜಾಲತಾಣಗಳಲ್ಲಿ ಆದಷ್ಟು ಜಾಗರೂಕರಾಗಿರಿ ಎಂದೆಲ್ಲ ಪೋಲಿಸ್ ಇಲಾಖೆ ಹೆಚ್ಚರಿಕೆಯ ಗಂಟೆ ಬಾರಿಸುತ್ತಿದ್ದರು ಸೈಬರ್ ವಂಚನೆಗೆ ಒಳಗಾಗುವ ಆಸೆ ಬುರಕ ಜನರ ಕಾರ್ಯಚರಣೆ ನಿಲ್ಲದಾಗಿದೆ.ವಂಚನಗೆ ಜನಸಾಮನ್ಯರೆ ಅಲ್ಲ ಸರ್ಕಾರಿ ಅಧಿಕಾರಿಗಳು ನೌಕರರು ಒಳಗಾಗುತ್ತಿದ್ದಾರೆ, ಕೋಲಾರದಲ್ಲೂ ಆನ್ ಲೈನ್ ನಲ್ಲಿ ವಂಚನೆಗೆ ಒಳಗಾಗಿ ದೊಡ್ಡ ಮಟ್ಟದಲ್ಲಿ ದುಡ್ಡು ಕಳೆದುಕೊಂಡ ಸರ್ಕಾರಿ ಅಧಿಕಾರಿಗಳ ಹಾಗು ನೌಕರರ ದೊಡ್ಡ ಪಟ್ಟಿಯೆ ಇದೆ.ಕೋಲಾರ ಜಿಲ್ಲೆಯ ಕೆಲ ಸರ್ಕಾರಿ ಅಧಿಕಾರಿಗಳು ನೌಕರರು ಆನ್ ಲೈನ್ ನ ಮೂಲಕ ದುಪ್ಪಟ್ಟು ಹಣ ಗಳಿಸಬಹುದು ಎಂದು ಬಂಡವಾಳ ಹೂಡಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ ಅಧಿಕಾರಿಗಳನ್ನು ಅನುಸರಿಸಿದ ಕೆಳ ಹಂತದ ಗುಮಾಸ್ತರು, ಡಿ ದರ್ಜೆ ನೌಕರರೂ ಸಹ ಆನ್ ಲೈನ್ ವಂಚನೆಗೆ ಒಳಗಾಗಿದ್ದಾರೆ.ಹಣ ದ್ವಿಗುಣಗೊಳಿಸುವ ಆನ್ಲೈನ್ ವಂಚನೆಗೆ ಸಿಕ್ಕ ಸುಮಾರು ನಲವತ್ತು ಅಧಿಕಾರಿ ಮತ್ತು ನೌಕರರು ಮೋಸ ಹೋಗಿ ಉಂಡೇ ನಾಮ ತಿಕ್ಕಿಸಿಕೊಂಡಿದ್ದಾರೆ.ಹಣ ಕಳೆದುಕೊಂಡ ಘಟನೆ ಕೆಲ ತಿಂಗಳುಗಳ ಹಿಂದೆ ನಡೆದಿದ್ದು ಇದೀಗ ಬೆಳೆಕಿಗೆ ಬಂದಿದೆ. ತಾವು ಕೆಲಸ ನಿರ್ವಹಿಸುವ ನೌಕರಿಯನ್ನು ಮರೆಮಾಚಿ ಅಧಿಕಾರಿಗಳು ಮತ್ತು ನೌಕರರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಕೆಜಿಎಫ್ನ ಸೈಬರ್ ಪೊಲೀಸರು ವಂಚಕರ ಪತ್ತೆ ಕಾರ್ಯಚರಣೆಯಲ್ಲಿದ್ದಾರೆ.ಆನ್ಲೈನ್ ವಂಚನೆಯಲ್ಲಿ ಮತ್ತಷ್ಟು ನೌಕರರು ಹಣ ಕಳೆದುಕೊಂಡಿರುವ
ಹಣ ಕಳೆದುಕೊಂಡಿದ್ದು ಹೇಗೆ
ವಾಟ್ಸಾಪ್ ಚಾಟ್ ಮಾಡುವಾಗ ಮೊಬೈಲ್ಗೆ ಸಂದೇಶ ಬಂದು ಅಲ್ಲಿನ ಸಂದೇಶದಂತೆ ಆರಂಭದಲ್ಲಿ ಸಣ್ಣ ಮೊತ್ತದ ಹಣ ವರ್ಗಾವಣೆ ಮಾಡಿದಾಗ ಡಬಲ್ ಆಗಿದೆ ನಂತರ ಲಕ್ಷಗಟ್ಟಲೆ ಹಣ ಡಿಪಾಸಿಟ್ ಮಾಡಿದರೆ ಅದು ದ್ವಿಗುಣವಾಗುತ್ತದೆ ಎಂದು ವಂಚಕರು ಯಾಮಾರಿಸಿದ್ದಾರೆ ಇದನ್ನು ನಂಬಿದ ಅಧಿಕಾರಿ ವರ್ಗ ಸಹೋದ್ಯೋಗಿಗಳೊಂದಿಗೆ ಮಾಹಿತಿ ಹಂಚಿಕೊಂಡಾಗ ಅವರು ನಂಬಿ ಲಿಂಕ್ ಬಳಸಿ ಹಣ ಹೂಡಿಕೆ ಮಾಡಿದ್ದಾರೆ. ಇದನ್ನು ಬಳಸಿಕೊಂಡ ವಂಚಕರು ಹಣ ಎಗರಿಸಿದ್ದಾರಂತೆ.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Monday, November 25