- ನಟಸಿಂಹ ನಂದಮೂರಿ ಬಾಲಕೃಷ್ಣ ನಟನೆಯ ಸಿನಿಮಾ
- ನಾಯಕಿಯಾಗಿ ಕಾಜಲ್ ಅಗರ್ವಾಲ್,ಪ್ರಮುಖ ಪಾತ್ರದಲ್ಲಿ ಶ್ರೀ ಲಿಲಾ
- ಅನಿಲ್ ರಾವಿಪುಡಿ ನಿರ್ದೇಶನ,ಅರ್ಜುನ್ ರಾಂಪಾಲ್ ವಿಲನ್
ನ್ಯೂಜ್ ಡೆಸ್ಕ್:ಭಗವಂತ ಕೇಸರಿ ತೆಲಗು ಸಿನಿಮಾ ಕ್ಷೇತ್ರದಲ್ಲಿ ಹಾಟ್ ಟಾಪಿಕ್ ಆಗಿದೆ ತೆಲಗು ಸಿನಿಮಾ ರಂಗದ ಹಿರಿಯ ನಾಯಕ ನಟಸಿಂಹ ನಂದಮೂರಿ ಬಾಲಕೃಷ್ಣ ತಮ್ಮ ಹಿಂದಿನ ಫಿಲ್ಮ್ ಕೇರಿಯರ್ ಗಿಂತ ಈಗಿನ ಟ್ರೆಂಡ್ ನಲ್ಲಿ ರಾಕೆಟ್ ವೇಗದಲ್ಲಿ ಸಾಗುತ್ತಿದ್ದಾರೆ. ಅವರ ತೀರಾ ಇತ್ತಿಚಿಗಿನ ಸಿನಿಮಾಗಳಾದ ‘ಅಖಂಡ’ ಮತ್ತು ‘ವೀರ ಸಿಂಹ ರೆಡ್ಡಿ’ ಅವರ ವೃತ್ತಿಜೀವನದಲ್ಲಿ ದೊಡ್ಡ ಬ್ಲಾಕ್ಬಸ್ಟರ್ ಹಿಟ್ ಹೊಡದಿವೆ ಇದರಿಂದಾಗಿ ಈಗ ಬಿಡುಗಡೆಯಾಗುತ್ತಿರುವ ‘ಭಗವಂತ ಕೇಸರಿ’ ಸಿನಿಮಾ ಬಗ್ಗೆ ಅವರ ಅಭಿಮಾನಿಗಳು ಹೆಚ್ಚು ಕುತುಹಲದಿಂದ ಕಾಯುತ್ತಿದ್ದಾರೆ ಈ ಹಿನ್ನಲೆಯಲ್ಲಿ ಬಾಲಯ್ಯ ‘ಭಗವಂತ ಕೇಸರಿ’ ಸಿನಿಮಾದ ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ನಟಸಿಂಹ ನಂದಮೂರಿ ಬಾಲಕೃಷ್ಣ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಲಿದ್ದು ತುಂಬಾ ಪವರ್ ಫುಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ದೃಶ್ಯವೆ ಸಿನಿಮಾಗೆ ಜೀವಾಳವಾಗಿ ನಿಲ್ಲುತ್ತದೆ ಎಂಬ ಮಾತು ಕೇಳಿ ಬರುತ್ತಿದೆ ಇದರಿಂದಾಗಿ ಚಿತ್ರದ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ.ಭಗವಂತಕೇಸರಿ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಯುಎ ಪ್ರಮಾಣ ಪತ್ರ ನೀಡಿದೆ ಚಿತ್ರವು 2.44 ಗಂಟೆಗಳ ಸಮಯ ಇದ್ದು ಸಿನಿಮಾ ನೋಡಿದ ಸೆನ್ಸಾರ್ ಕಡೆಯಿಂದ ಪಾಸಿಟಿವ್ ವರದಿ ನೀಡಿದಿಯಂತೆ,ನಂದಮೂರಿ ಬಾಲಕೃಷ್ಣ ಅಭಿಮಾನಿಗಳು ಹಬ್ಬ ಮಾಡಿ ಸಂಭ್ರಮಿಸುವಷ್ಟು ಅದ್ಭತವಾಗಿದೆ ಎನ್ನುತ್ತಿದ್ದಾರೆ,
ಮೊದಲಾರ್ಧದಲ್ಲಿ ಬಾಲಯ್ಯ ಮತ್ತು ಶ್ರೀಲಿಲ ನಡುವಿನ ದೃಶ್ಯಗಳು ಭಾವುಕತೆ ಮತ್ತು ಒಂದಿಷ್ಟು ಕಾಮೀಡಿ ಪ್ರೆಕ್ಷಕರನ್ನು ರಿಫ್ರೆಷ್ ಮಾಡಿದರೆ. ಬಾಲಯ್ಯ ಅಭಿಮಾನಿಗಳು ನೀರಿಕ್ಷೆಯ ಮಾಸ್ ಸ್ಟಫ್ ಅನ್ನು ಥ್ರಿಲ್ ಆಗುವಂತೆ ಅನಿಲ್ ರಾವಿಪುಡಿ ಡಿಸೈನ್ ಮಾಡಿದ್ದಾರಂತೆ. ಇನ್ನು ಮಧ್ಯಂತರ ದೃಶ್ಯಗಳು ಬೇರೆಯದೆ ಹಂತದಲ್ಲಿದ್ದು.ಬಾಲಯ್ಯ ನಟನ ಎನರ್ಜಿ ಪ್ರೇಕ್ಷಕರನ್ನು ಕುರ್ಚಿಯ ಅಂಚಿಗೆ ತಂದು ಕುರಿಸುವಷ್ಟು ಕುತುಹಲಕಾರಿಯಾಗಿದೆ ಎನ್ನಲಾಗುತ್ತಿದೆ. ನಾಯಕ ಮತ್ತು ವಿಲನ್ ನಡುವಿನ ದೃಶ್ಯಗಳು ಬಾಲಯ್ಯ ಕ್ರೇಜ್ ಹೆಚ್ಚಿಸುವುದಂತು ಖಂಡಿತ ಎನ್ನಲಾಗುತ್ತಿದೆ.
ಬೋಯಪಾಟಿ ಶ್ರೀನು ಬಾಲಯ್ಯ ಅವರಿಗೆ ಒಂದು ರೀತಿಯ ಕ್ರೇಜ್ ತಂದುಕೊಟ್ಟಿದ್ದರೆ, ಅನಿಲ್ ರಾವಿಪುಡಿ ಮಾಸ್ ಮತ್ತು ಎಮೋಷನ್ ಹಾಗು ಸ್ಟೈಲಿಶ್ ಆಗಿ ಬಾಲಯ್ಯ ನನ್ನು ಪ್ರೆಸೆಂಟ್ ಮಾಡಿರುವುದು ವಿಶೇಷ
ನಂದಮೂರಿ ಬಾಲಕೃಷ್ಣ ನಾಯಕನಾಗಿರುವ ಭಗವಂತ್ ಕೇಸರಿ ಸಿನಿಮಾವನ್ನು ಅನಿಲ್ ರಾವಿಪುಡಿ ನಿರ್ದೇಶಿಸಿರುವ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ನಾಯಕಿಯಾಗಿ , ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಅರ್ಜುನ್ ರಾಂಪಾಲ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ತಮನ್ ಸಂಗೀತ ಸಂಯೋಜನೆ,ಶೈನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪತಿ ಮತ್ತು ಹರೀಶ್ ಪೆದ್ದಿ ಚಿತ್ರವನ್ನು ನಿರ್ಮಿಸಿದ್ದಾರೆ. ಕ್ರೇಜಿ ಕಾಂಬಿನೇಷನ್ನಲ್ಲಿ ತಯಾರಾದ ‘ಭಗವಂತ ಕೇಸರಿ’ ಸಿನಿಮಾ ಅಪ್ಪ-ಮಗಳ ಸೆಂಟಿಮೆಂಟ್ ಕಥೆಯೊಂದಿಗೆ ಬರಲಿದೆ ಎಂಬ ಸುದ್ದಿ ಈಗಾಗಲೇ ಹೊರಬಿದ್ದಿದೆ ಬಾಲಯ್ಯ ಅವರ ಮಗಳಾಗಿ ಶ್ರೀಲೀಲಾ ನಟಿಸಿದ್ದು ನಟಸಿಂಹ ಬಾಲಕೃಷ್ಣ ವಿಶೇಷವಾಗಿ ನಟಿಸಿದ್ದಾರೆ ಎನ್ನುವ ಟಾಕ್ ಇದೆ ಹೀಗಾಗಿ ಈ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಭಿಮಾನಿಗಳ ಸಂಭ್ರಮಕ್ಕೆ ‘ಭಗವಂತ ಕೇಸರಿ’ ಸಿನಿಮಾ ದಸರಾ ಹಬ್ಬದ ಉಡುಗೊರೆಯಾಗಿ ಅಕ್ಟೋಬರ್ 19ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.