ಶ್ರೀನಿವಾಸಪುರ: ರಸ್ತೆ ಅಭಿವೃದ್ಧಿ ಮೂಲಭೂತ ಸೌಕರ್ಯಗಳಲ್ಲಿ ಒಂದು ಜೊತೆಗೆ ಅಭಿವೃದ್ಧಿಯ ಪ್ರತೀಕ ಪ್ರಗತಿಯ ಹೆಜ್ಜೆ ಆದರೆ ಅದನ್ನು ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ ಎನ್ನುವ ಅರಿವು ಯಾರಿಗೂ ಇಲ್ಲದಂತಾಗಿದೆ. ಟ್ರಾಫಿಕ್ ಜಾಮ್, ಬದಲಿ ರಸ್ತೆಗಳ ಕೊರತೆ, ಧೂಳು, ಶಬ್ಧ ಮಾಲಿನ್ಯದಂತಹ ಕಿರಿಕಿರಿ ಇದೆಲ್ಲವನ್ನು ಕೇಳುವವರು ಯಾರು?
ಮಳೆ ಬಂದರೆ ಕೆಸರು ಗದ್ದೆಯಾಗುತ್ತದೆ ಮಳೆ ಕಡಿಮೆಯಾದರೆ ಏದ್ದೇಳುವ ದೂಳಿನಿಂದ ಕಣ್ಣೆ ಕಾಣದಷ್ಟು ಎತ್ತರದಲ್ಲಿ ದೂಳು ಎದ್ದೆಳುತ್ತದೆ ಇದು ಶ್ರೀನಿವಾಸಪುರ ಪಟ್ಟಣದ ಪೊಸ್ಟಾಪೀಸ್ ರಸ್ತೆ ಪರಿಸ್ಥಿತಿ,ಈ ರಸ್ತೆಯಲ್ಲೆ ಆಡಳಿತ ವ್ಯವಸ್ಥೆಗೆ ಶಾಪ ಹಾಕುತ್ತ ಜನ ಹಳ್ಳ-ಕೊಳ್ಳದ ರಸ್ತೆಯಲ್ಲೆ ಒಡಾಡುತ್ತಿದ್ದಾರೆ.ಹದಗೆಟ್ಟ ರಸ್ತೆಯಲ್ಲಿ ವಾಹನ ಒಡಾಡಿದರೆ ಏಳುವ ದೂಳಿನಿಂದ ಇಲ್ಲಿ ಅಂಗಡಿ ಮುಂಗಟ್ಟು ಇಟ್ಟುಕೊಂಡಿರುವ ಮಾಲಿಕರ ಪರಿಸ್ಥಿತಿ ಅಧೋಗತಿಯಾಗಿದೆ ದೂಳಿನಿಂದ ಕೆಮ್ಮು ದಮ್ಮು, ವ್ಯಾಧಿಗಳು ಶುರುವಾಗಿದೆ ಅನ್ನುವ ಆರೋಪ ಕೇಳಿಬರುತ್ತಿದೆ.
ಇಂದಿರಾಭವನ್ ವೃತ್ತದಿಂದ ಪೋಸ್ಟಾಫೀಸ್ ಹಾಗು ರಾಜಾಜಿ ರಸ್ತೆ ಮೂಲಕ ಚಿಂತಾಮಣಿ ವೃತ್ತದ ವರಿಗೂ ರಸ್ತೆ ಕಾಮಗಾರಿ ಪ್ರಾರಂಭವಾಗಿ ಎಂಟು-ಹತ್ತು ತಿಂಗಳಾಯಿತು ಗುತ್ತಿಗೆ ದಾರರು ಚಿಂತಾಮಣಿ ವೃತ್ತದಿಂದ ಕಾಮಗಾರಿ ಪ್ರಾರಂಭಿಸಿ ಪವನ್ ಆಸ್ಪತ್ರೆ ವೃತ್ತದವರಿಗೂ ಡಾಂಬರೀಕರಣ ಮಾಡಿ ಪೂರ್ತಿ ಮಾಡಿರುತ್ತಾರೆ ನಂತರದಲ್ಲಿ ಅಲ್ಲಿಂದ ಇಂದಿರಾಭವನ್ ವೃತ್ತದ ವರಗಿನ ಕಾಮಗಾರಿ ಪೂರ್ಣವಾಗಲೆ ಇಲ್ಲ ವಿಧಾನಸಭಾ ಚುನಾವಣೆಗಳು ಮುಗಿದು ಹೊಸ ಆಡಳಿತ ಬಂದರೂ ಜನ ಮಾತ್ರ ದೂಳು ಕುಡಿದು ಕೊಂಡೆ ಒಡಾಡುವ ಪರಿಸ್ಥಿತಿ ಮುಂದುವರೆದಿದೆ ಇದೊಂದು ರೀತಿ ಜನರ ಜೀವಕ್ಕೆ ಅನಾರೋಗ್ಯ ಉಂಟು ಮಾಡುವ ವ್ಯವಸ್ಥೆ ಎಂಬ ಆರೋಪಗಳು ಇದೆ.ರಸ್ತೆಗೆ ಹೊಂದಿಕೊಂಡಿರುವ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಇದೆ ಅಲ್ಲಿಗೆ ಹೋಗಲು ರಸ್ತೆ ಸುಗಮವಾಗಿಲ್ಲ ದೊಡ್ಡ ಹಳ್ಳದಲ್ಲಿ ಬಸ್ ಇಳಿದು ಸಾಗಬೇಕಿದೆ ಪಟ್ಟಣದ ಹೃದಯಭಾಗದ ರಸ್ತೆಗಳ ಪರಿಸ್ಥಿತಿ ಹೀಗಾದರೆ ಇನ್ನೂ ಪಟ್ಟಣದ ಬಡಾವಣೆ ರಸ್ತೆಗಳು ಹೇಗಿರಬಹುದು ಎಂದು ಪರ ಊರಿನಿಂದ ಬಂದವರು ಅಪಹಾಸ್ಯ ಮಾಡುತ್ತಾರೆ.
ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಅಡ್ಡಿಯಾದರು ಏನು?
ಪೋಸ್ಟಾಫೀಸ್ ರಸ್ತೆ ಆಗಲೀಕರಣ ಕುರಿತಂತೆ ಆರಂಭದಲ್ಲಿ ಜೇಟ್ ವೇಗದ ಸ್ಪೀಡ್ ಇತ್ತು ಅಲ್ಲಿದ್ದ ಪುರಸಭೆ ಮಳಿಗೆಗಳಲ್ಲಿ ಬಾಡಿಗೆ ಇದ್ದವರನ್ನು ಬೀಡಿಸಲು ಮುಂದಾದಾಗ ಬಾಡಿಗೆ ದಾರರು ನ್ಯಾಯಲದ ಮೊರೆ ಹೋಗಿ ಕಾನೂನು ತೊಡಕು ಉಂಟಾಗಿ ಬರಿಗೈಲಿ ವಾಪಸ್ಸಾದರು ಆಗ ಅವರನ್ನು ಡಾಕಿನಿಗಳು ಅಟಾಕಾಯಿಸಿಕೊಂಡು ಹಣಕ್ಕಾಗಿ ಪೀಡಿದ್ದರಂತೆ ಇದರಿಂದ ಬೀತಿಗೊಂಡ ಬಡಪಾಯಿ ಬಾಡಿಗೆ ದಾರರು ರಾಜಕೀಯದ ತಂಟೆ ತಕರಾರು ನಮಗ್ಯಾಕಪ್ಪ ಎಂದು ಪರ್ಯಾಯವಾಗಿ ಖಾಸಗಿ ಬಾಡಿಗೆ ಕಟ್ಟಡಗಳಿಗೆ ತಮ್ಮ ವ್ಯಾಪಾರ ವಹಿವಾಟು ಬದಲಾವಣೆ ಮಾಡಿಕೊಂಡು ಸದ್ದು ಗದ್ದಲವಿಲ್ಲದೆ ಬಿಟ್ಟು ಹೋದರು,ನಂತರದಲ್ಲಿ ಕಟ್ಟಡಗಳನ್ನು ಕೆಡವಲಾಯಿತು ಆನಂತರವೂ ಅದೆ ಹಾಡು ಅದೆ ರಾಗ ಮುಂದುವರಿಯಿತು ಕಾಮಗಾರಿ ಆರಂಭವಾಗಿದೆ ಇನ್ನೇನು ಖಾಸಗಿ ಕಟ್ಟಡಗಳು ತೆರವುಗೊಂಡರೆ ರಸ್ತೆ ಆಗುತ್ತದೆ ಎನ್ನಲಾಗುವ ಭರವಸೆ ಜನಕ್ಕೆ ಸಿಕ್ಕಿತು, ಆದರೆ ಚಿಂತಾಮಣಿ ವೃತ್ತದಿಂದ ಪವನ್ ಆಸ್ಪತ್ರೆವರಿಗೂ ರಸ್ತೆ ಪೂರ್ಣವಾಯಿತು ಪೋಸ್ಟ್ ಆಫೀಸ್ ರಸ್ತೆ ಕಾಮಗಾರಿ ಪ್ರಾರಂಭ ಆಗಲಿಲ್ಲ ತಾಲೂಕು ಆಡಳಿತದ ನಿರ್ಲಕ್ಷ್ಯ ಧೋರಣೆಯ ಪರಿಣಾಮ ಪೋಸ್ಟ್ ಆಫೀಸ್ ರಸ್ತೆಯಲ್ಲಿನ ಕೆಲ ಖಾಸಗಿ ವ್ಯಕ್ತಿಗಳ ಕಟ್ಟಡಗಳು ಸೇರಿದಂತೆ ಸೋಸೈಟಿ ಕಟ್ಟಡದಲ್ಲಿನ ಕೆಲ ಪಟ್ಟಬದ್ರ ವ್ಯಾಪರಸ್ಥರ ಜಡತ್ವ ನೀಲವು ರಸ್ತೆ ಕಾಮಗಾರಿಗೆ ವಿಳಂಬವಾಗುತ್ತಿರುವುದಾಗಿ ಜನರು ಆವೇಶದಿಂದ ಹೇಳುತ್ತಾರೆ.
ಚುನಾವಣೆಗೂ ಮುನ್ನಾ ನೀರು ಈಗಿಲ್ಲ ಯಾಕೆ?
ವಿಧಾನಸಭೆ ಚುನಾವಣೆಗೂ ಮುನ್ನಾರಸ್ತೆ ಕಾಮಗಾರಿ ಪ್ರಾರಂಭವಾದ ಹಿನ್ನಲೆಯಲ್ಲಿ ರಸ್ತೆಯಿಂದ ದೂಳು ಏಳುತ್ತಿದ್ದ ಹಿನ್ನಲೆಯಲ್ಲಿ ಪ್ರತಿದಿನ ದಿನಕ್ಕೆ ಎರಡು ಬಾರಿ ಟ್ಯಾಂಕರ್ ಮೂಲಕ ರಸ್ತೆ ದೂಳಿನ ಮೇಲೆ ನೀರು ಸಿಂಪಡಿಸಲಾಗುತಿತ್ತು ಚುನಾವಣೆ ನಡೆಯಿತು ಹೊಸ ಆಡಳಿತ ಬಂತು ಇನ್ನೇನೂ ರಸ್ತೆ ಕಾಮಗಾರಿ ಆಗೆ ಹೋಯಿತು ಅಂದುಕೊಂಡಿದ್ದ ಇಲ್ಲಿನ ಜನಕ್ಕೆ ಎಲ್ಲವು ಹೊಳು ಎನ್ನುವಂತಾಗಿದೆ ರಸ್ತೆ ಕಾಮಗಾರಿನೂ ಇಲ್ಲ ರಸ್ತೆಯಿಂದ ಏಳುವ ದೂಳನ್ನು ತಡೆಯಲು ನೀರು ಚುಮುಕಿಸುತ್ತಿಲ್ಲ ಇಲ್ಲಿನ ವ್ಯಾಪರಸ್ಥರ ಪರಿಸ್ಥಿತಿ ನರಕಸದೃಶ್ಯವಾಗಿದೆ ಎನ್ನುತ್ತಾರೆ.