- ತಡರಾತ್ರಿ ವಿಧಾನಸೌಧ ಬಳಿ ಧರಣಿ ಕುಳಿತ ಸಂಸದ ಮುನಿಸ್ವಾಮಿ
- ಸ್ಥಳಕ್ಕೆ ಬಂದು ಮನವಿ ಆಲಿಸಿದ ಅರಣ್ಯ ಮಂತ್ರಿ ಖಂಡ್ರೆ
- ಸಣ್ಣ ರೈತರಿಗೆ ನ್ಯಾಯ ಸಿಗುವರಿಗೂ ಹೋರಾಟ ಸಂಸದ
ಶ್ರೀನಿವಾಸಪುರ:ತಾಲೂಕಿನಲ್ಲಿ ಅರಣ್ಯ ಇಲಾಖೆ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ಅರಣ್ಯ ಮಂತ್ರಿ ಘೋಷಣೆ ಮಾಡಿದ್ದಾರೆ. ಗುರುವಾರ ಅಲಂಬಗಿರಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ತೆರವು ಕಾರ್ಯಚರಣೆ ನಡೆಸುತ್ತುತಬೇಕಾದರೆ ಸ್ಥಳಕ್ಕೆ ಆಗಮಿಸಿದ ಸಂಸದ ಮುನಿಸ್ವಾಮಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡು ಈಗಾಗಲೆ ಈ ವಿಷಯ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು ಜಂಟಿ ಸರ್ವೆ ಆಗುವ ವರಿಗೂ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಸಂಸದ ಮುನಿಸ್ವಾಮಿ ಅಗ್ರಹಿಸಿ ಕಾರ್ಯಚರಣೆ ಸ್ಥಳಕ್ಕೆ ನುಗ್ಗಲು ಪ್ರಯತ್ನಿಸಿದಾಗ ಅರಣ್ಯ ಇಲಾಖೆ ಹಾಗು ಪೊಲೀಸ್ ಸಿಬ್ಬಂದಿ ಸಂಸದರನ್ನು ಸುತ್ತುವರಿದು ಸ್ಥಳದಿಂದ ಕದಲದಂತೆ ಸನ್ನಿವೇಶ ನಿರ್ಮಾಣಮಾಡಿದಾಗ ಸಂಸದ ಮುನಿಸ್ವಾಮಿ ತಹಶೀಲ್ದಾರ್ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಕಂದಾಯ ಇಲಾಖೆ ನೀಡಿರುವ ದಾಖಲೆಗಳನ್ನು ಇಟ್ಟುಕೊಂಡು ಎಪ್ಪತ್ತು-ಎಂಬತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರು ರೈತರ ಜಮೀನುಗಳನ್ನು ಅರಣ್ಯ ಇಲಾಖೆಯವರು ಕಿತ್ತುಕೊಳ್ಳುತ್ತಿದ್ದಾರೆ ನೀವು ಯಾಕೆ ಸುಮ್ಮನಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು
ನಂತರ ಸಂಸದ ಮುನಿಸ್ವಾಮಿ ಜಮೀನು ಕಳೆದುಕೊಂಡ ರೈತರನ್ನು ಕರೆದುಕೊಂಡು ನೇರವಾಗಿ ಬೆಂಗಳೂರಿಗೆ ಹೋದವರೆ ರಾತ್ರಿ ವಿಧಾನಸೌಧದ-ವಿಕಾಸ ಸೌಧ ನಡುವಿನ ಮಹಾತ್ಮಾಗಾಂಧಿ ಪ್ರತಿಮೆ ಬಳಿ ರೈತ ವಿರೋಧಿ ರಾಜ್ಯ ಸರ್ಕಾರ ಎಂದು ಧರಣಿ ಕುಳಿತಿದ್ದಾರೆ ಇವರಿಗೆ ಬಿಜೆಪಿ ರೈತ ಮೊರ್ಚಾ ರಾಜ್ಯಾಧ್ಯಕ್ಷ ಹಾಗು ರಾಜ್ಯಸಭಾ ಸದಸ್ಯ ಈರಣ್ಣಕಡಾಡಿ ಸಾತ್ ನೀಡಿದ್ದರು ಇದರ ಫಲ ರಾತ್ರಿ ಆದರೂ ಪ್ರತಿಭಟನಾ ಸ್ಥಳಕ್ಕೆ ಅರಣ್ಯ ಖಾತೆ ಸಚಿವ ಈಶ್ವರಖಂಡ್ರೆ ಆಗಮಿಸಿ ಸಂಸದ ಮುನಿಸ್ವಾಮಿ ಅವರಿಂದ ಮನವಿ ಪತ್ರ ಸ್ವೀಕರಿಸಿದರು ಈ ಸಂದರ್ಭದಲ್ಲಿ ಸಂಸದ ಮಾತನಾಡಿ ಎಲ್ಲಾ ದಾಖಲೆಗಳು ಇದ್ದರು ಕೋಲಾರ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಕ್ರಮದಿಂದ ಭೂಮಿ ಕಳೆದುಕೊಳ್ಳುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಈ ತಕ್ಷಣ ರೈತರ ಜಮೀನು ವಶ ಮಾಡಿಕೊಳ್ಳುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು ಇದಕ್ಕೆ ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವರು
ಭೂಗಳ್ಳರನ್ನು ಯಾವುದೆ ಕಾರಣಕ್ಕೂ ಬೀಡುವಿದಿಲ್ಲ ಹಾಗೆ ಸಣ್ಣ ರೈತರಿಗೆ ಅನ್ಯಾಯ ಆಗದಂತೆ ಕ್ರಮ ಜರುಗಿಸುವುದಾಗಿ ಜಂಟಿ ಸರ್ವೆ ಆಗುವವರಿಗೂ ಅರಣ್ಯ ಇಲಾಖೆ ಕಾರ್ಯಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್,ಮುಖಂಡರಾದ ರೋಣುರುಚಂದ್ರಶೇಖರ್,ಕೆ.ಎಂ.ಎಫ್ ಮಾಜಿ ನಿರ್ದೇಶಕ ದ್ವಾರಸಂದ್ರ ಮುನಿವೆಂಕಟಪ್ಪ,ಪಾತಪಲ್ಲಿ ಶ್ರೀನಾಥ್,ರಘುನಾಥಗೌಡ,ಗಂಜೂರುಬಾಲಾಜಿ,ರೈತಮುಖಂಡ ಮುಳಬಾಗಿಲು ಗೋಪಾಲ್ ಮುಂತಾದವರು ಇದ್ದರು