- 6-7 ಜನರಿದ್ದ ಅಪರಿಚಿತ ಹಂತಕರ ತಂಡದಿಂದ ಕೃತ್ಯ
- ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯ ಹೊಗಳಗೆರೆ ವೃತ್ತದಲ್ಲಿ
- ಶ್ರೀನಿವಾಸನ್ ಅವರ ರೆಸ್ಟೋರೆಂಟ್ ಕಟ್ಟಡದ ಬಳಿ ಘಟನೆ
ಶ್ರೀನಿವಾಸಪುರ:ಶ್ರೀನಿವಾಸಪುರದ ಪ್ರಭಾವಿ ರಾಜಕಾರಣಿ ಕಾಂಗ್ರೆಸ್ ಮುಖಂಡ,ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತವಲಯದ ಎಂ.ಶ್ರೀನಿವಾಸನ್@ಕೌನ್ಸಿಲರ್ ಸೀನಪ್ಪ(63) ನವರ ಮೇಲೆ ಇಂದು ಹಾಡಹಗಲು ನಡು ಮಧ್ಯಾನಃ ಅಪರಿಚಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಶ್ರೀನಿವಾಸನ್ ಅವರನ್ನು ತಕ್ಷಣ ಶ್ರೀನಿವಾಸಪುರದ ಆಸ್ಪತ್ರೆಗೆ ಸಾಗಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸಾಗಿಸಿರುತ್ತಾರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಶ್ರೀನಿವಾಸನ್ ಅವರು ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯ ಹೊಗಳಗೆರೆ ವೃತ್ತದಲ್ಲಿ ತಮ್ಮ ಜಮೀನಿನಲ್ಲಿ ನಿರ್ಮಾಣ ಹಂತದಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್ ಕಟ್ಟಡದ ಬಳಿ ಕಟ್ಟಡ ಕಾಮಗಾರಿ ವಿಚಾರವಾಗಿ ಗಾರೆ ಮೇಸ್ತ್ರಿ ಅಮರ್ ಮತ್ತು ಕೃಷ್ಣ ಅವರೊಂದಿಗೆ ಮಾತನಾಡುತ್ತಿರುವಾಗ ಸುಮಾರು 6-7 ಜನರಿದ್ದ ಯುವಕರ ತಂಡವೊಂದು ಬಂದು ಅಂಕಲ್ ಎಂದು ಸಂಬೊದಿಸಿ ಹಬ್ಬದ ಶುಭಾಶಯ ತಿಳಿಸಿದ್ದಾರೆ ಇದಕ್ಕೆ ಪ್ರತಿಯಾಗಿ ಶ್ರೀನಿವಾಸನ್ ಅವರು ಅಪರಿಚಿತರನ್ನು ಅಲ್ಲಿದ್ದ ಚೆರ್ ನಲ್ಲಿ ಕುಳಿತುಕೊಳ್ಳಲು ಹೇಳಿದ್ದಾರೆ ಅಪರಿಚಿತರು ಶ್ರೀನಿವಾಸನ್ ಅವರಿಗೆ ಹಸ್ತಲಾಘವ(ಶೇಕೆಂಡ್) ಮಾಡಿದ್ದಾರೆ ನಂತರ ಕೈ ಹಿಡಿದುಕೊಂಡು ಕುತ್ತಿಗೆ ಲಾಕ್ ಮಾಡಿದ್ದು ಮತ್ತೊಬ್ಬ ಮುಖಕ್ಕೆ ಸ್ಪ್ರೇ ಸಿಂಪಡಿದ್ದಾರೆ ಎನಾಗುತ್ತಿದೆ ಎನ್ನುವಷ್ಟರಲ್ಲಿ ಅಪಚಿತರು ತಾವು ತಂದಿದ್ದ ಚಾಕು, ಲಾಂಗ್ ಗಳಿಂದ ಶ್ರೀನಿವಾಸನ್ ದೇಹಕ್ಕೆ ತಿವಿದಿದ್ದಾರೆ ತಲೆ ಹೊಟ್ಟೆ ಎದೆ ಸೊಂಟ ಬೆನ್ನು ಸೇರಿದಂತೆ ದೇಹದ ಮೇಲೆ ಸ್ಥಳಾವಕಾಶ ಇಲ್ಲದಂತೆ ಚಾಕುವಿನಿಂದ ಎರ್ರಾಬಿರ್ರಿ ಇರಿದಿದ್ದಾರೆ ಲಾಂಗ್ ಗಳಿಂದ ತಿವಿದಿದ್ದಾರೆ.ಅಲ್ಲಿದ್ದ ಅಮರ್ ಹಾಗು ಇನ್ನಿತರರನ್ನು ಹೆದರಿಸಿ ಅಟ್ಟಾಡಿಸಿದ್ದಾರೆ ಅಪರಿಚಿತರ ಕ್ರೌರ್ಯ ನೋಡಿದ ಅಮರ್ ಮತ್ತು ಇತರರು ಭೀತಿಯಿಂದ ಪಕ್ಕದಲ್ಲಿನ ಮಾವಿನ ತೋಪಿಗೆ ಓಡಿ ಹೋಗಿ ಅಲ್ಲಿಂದ ಕೆ.ಎನ್.ಎಸ್ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಅವಿತಿಕೊಂಡು ಜೀವ ಉಳಿಸಿಕೊಂಡಿದ್ದು ಹಂತಕರು ತಾವು ತಂದಿದ್ದ ಮೂರು ಬೈಕ್ ಗಳಲ್ಲಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳುತ್ತಾರೆ.
ಶ್ರೀನಿವಾಸನ್ ಕಾರ್ ಫಾಲೋ ಮಾಡಿದ್ದ ಹಂತಕರು
ಬಾರ್ ಆಂಡ್ ರೆಸ್ಟೋರೆಂಟ್ ಕಟ್ಟಡದ ಬಳಿ ಬರುವ ಮೊದಲು ಅಮರ್ ಜೊತೆ ತೋಟದ ಬಳಿಗೆ ಹೋಗಿದ್ದ ಶ್ರೀನಿವಾಸನ್ ಅವರ ಕಾರನ್ನು ಅಪರಿಚಿತ ಯುವಕರು ತಮ್ಮ ದ್ವಿಚಕ್ರ ವಾಹನಗಳೊಂದಿಗೆ ಕಾರನ್ನು ಫಾಲೋ ಮಾಡಿದ್ದು ಇದನ್ನು ಶ್ರೀನಿವಾಸನ್ ಅವರ ಗಮನಕ್ಕೆ ತಂದಿದ್ದೆ ಅದಕ್ಕೆ ಅವರು ಹಬ್ಬದ ಖುಷಿಯಲ್ಲಿ ಯುವಕರು ಒಡಾಡುತ್ತಿದ್ದಾರೆ ಎಂದು ನಿರ್ಲಕ್ಷಿಸಿದರು ಎಂದು ಅಮರ ಹೇಳುತ್ತಾರೆ
ಘಟನಾ ಸ್ಥಳಕ್ಕೆ ಪೋಲಿಸ್ ಶ್ವಾನಗಳನ್ನು ಕರೆಯಿಸಿದ್ದು ಶ್ವಾನಗಳು ಕಟ್ಟಡದ ಆವರಣದಲ್ಲಿ ಸುತ್ತಾಡಿವೆ,ಕೋಲಾರ ಜಿಲ್ಲಾ ಎಸ್.ಪಿ ನಾರಯಣ್ ಮುಳಬಾಗಿಲು ಡಿ.ವೈಎಸ್.ಪಿ ನಂದಕುಮಾರ್ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ,ಪ್ರತ್ಯಕ್ಷದರ್ಶಿಗಳನ್ನು ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.
ಎಂ.ಶ್ರೀನಿವಾಸನ್ ಅವರ ಪತ್ನಿ ಡಾ.ಚಂದ್ರಕಲಾ ಹಾಗು ಮಗಳು ಡಾ.ನಿಕಿತಾ ಮತ್ತು ಅಳಿಯ ಪುರಸಭೆ ಸದಸ್ಯ ಭಾಸ್ಕರ್ ಮಗ ಡಾ.ಕಿಶನ್ ಮೂರು ದಿನಗಳ ರಜಾ ಹಿನ್ನಲೆ ನಿನ್ನೆಯಷ್ಟೆ ಪ್ರವಾಸಕ್ಕೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಕಣ್ಣಿರಿಟ್ಟ ಮಾಜಿ ಸ್ಪೀಕರ್ ರಮೇಶ್ ಕುಮಾರ್
ಕೋಲಾರದ ಜಾಲಪ್ಪ ಆಸ್ಪತ್ರೆಗೆ ಬೇಟಿ ನೀಡಿದ್ದ ಮಾಜಿ ಸ್ಪಿಕರ್ ರಮೇಶ್ ಕುಮಾರ್ ಅಲ್ಲಿದ್ದ ಎಂ.ಶ್ರೀನಿವಾಸನ್ ಮೃತ ದೇಹವನ್ನು ಕಂಡೋಡನೆ ಮೂಕ ವಿಸ್ಮಿತರಾಗಿ ಕಣ್ಣಿರಿಟ್ಟಿದ್ದಾರೆ.