- ಹತ್ಯೆಯಾದ ಕೆಲವೆ ಗಂಟೆಗಳ ಅವಧಿಯಲ್ಲಿ ಆರೋಪಿಗಳ ಬಂಧನ
- ವೇಮಗಲ್ ಠಾಣಾ ವ್ಯಾಪ್ತಿಯ ಲಕ್ಷ್ಮಿಸಾಗರ ಅರಣ್ಯದಲ್ಲಿ ಹಂತಕರು
- ಆರೋಪಿಗಳೆಲ್ಲಾ ಕೋಲಾರ ಜಿಲ್ಲೆಯವರು
ಶ್ರೀನಿವಾಸಪುರ:ವೈಯುಕ್ತಿಕ ದ್ವೇಷಕ್ಕೆ ಶ್ರೀನಿವಾಸಪುರದ ಪ್ರಭಾವಿ ರಾಜಕಾರಣಿ ಕೌನ್ಸಿಲರ್ ಸೀನಪ್ಪ ಹತ್ಯೆಯಾದರ? ಇಂತಹದೊಂದು ಮಾತನ್ನು ಪೋಲಿಸರು ಹೇಳಿದ್ದಾರೆ ಹಾಡಹಗಲೆ ಹತ್ಯೆಮಾಡಿದ ಆರೋಪಿಗಳನ್ನು ಪೋಲಿಸರು ಕೆಲವೆ ಗಂಟೆಗಳ ಅವಧಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಕೋಲಾರ ಜಿಲ್ಲಾ ಎಸ್.ಪಿ ನಾರಯಣ್ ತಿಳಿಸಿದ್ದಾರೆ.
ಕೋಲಾರ ತಾಲೂಕು ವೆಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಅರಣ್ಯದ ಬಳಿ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿಸುವ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಪರಿಣಾಮ ಇಬ್ಬರಿಗೆ ಗುಂಡು ಹಾರಿಸಿದ್ದು ಆರೋಪಿಗಳು ಗಾಯಗೊಂಡಿದ್ದಾರೆ.ಗಾಯಗೊಂಡ ಆರೋಪಿಗಳನ್ನು ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ,ಆರೋಪಿಗಳಾದ ವೇಣುಗೋಪಾಲ್ ಶ್ರೀನಿವಾಸಪುರದವನಾದರೆ,ಹರ್ಷಿತ್ ಮತ್ತು ಮುನೇಂದ್ರ ಮುಳಬಾಗಿಲು ತಾಲೂಕು ಕೊಳತೂರು ಗ್ರಾಮದವರು,ಸಂತೋಷ್ ಬಂಗಾರಪೇಟೆಯ ಅಜ್ಜಪ್ಪನಹಳ್ಳಿ ಗ್ರಾಮದವನು,ನಾಗೇಂದ್ರ ಮುಳಬಾಗಿಲು ನಿವಾಸಿ,ಅರುಣ್ ಕುಮಾರ್ ವೇಮಗಲ್ ನಿವಾಸಿಯಾಗಿದ್ದಾನೆ, ಶ್ರೀನಿವಾಸನ್
ಕೊಲೆ ಹಿಂದೆ ಯಾವುದೇ ರಾಜಕೀಯ ಇಲ್ಲ ಇದೊಂದು ಹಳೆ ವೈಷಮ್ಯದ ಹತ್ಯೆ ಎಂದು ಪ್ರಾಥಮಿಕ ತನಿಖೆಯಿಂದ ಬಯಲಾಗಿರುವುದಾಗಿ ಸೆಂಟ್ರಲ್ ರೇಂಜ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಬಿ ಆರ್ ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ. ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ನೇತೃತ್ವದ ತಂಡ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಹತ್ಯೆ ಹಿಂದೆ ಇನ್ನು ಬೆರೆಯವರ ಕೈವಾಡ ಇದೀಯಾ ಎಂಬುದಾಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಶ್ರೀನಿವಾಸ್ ಅವರ ಹತ್ಯೆಯ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೊಂದಿಗೆ ಆಸ್ಪತ್ರೆಗೆ ಧಾವಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದರು.ಘಟನಾ ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಸಹ ಭೇಟಿ ನೀಡಿ ಪರಿಶೀಲಿಸಿದ್ದರು. ಶ್ರೀನಿವಾಸನ್ ಅವರನ್ನು ಪರಿಚಿತರಂತೆ ಮಾತನಾಡಿದ ಹಂತಕರು ಶ್ರೀನಿವಾಸ್ ಅವರು ನೀಡಿದ ಸಲಿಗೆಯನ್ನೆ ಅಸ್ತ್ರವಾಗಿ ಬಳಸಿಕೊಂಡು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾರೆ.
ವೈಷಮ್ಯದ ಹಿಂದಿನ ಅಸಲಿಯತ್ತೇನು?
ಪೋಲಿಸರು ಹೇಳುವಂತೆ ಶ್ರೀನಿವಾಸನ್ ಹತ್ಯೆ ಮಾಡಿದ ಆರೋಪಿಗಳ ಪೈಕಿ ಪ್ರಮುಖ ವೇಣುಗೋಪಾಲ್ ಮೂಲತಃ ಶ್ರೀನಿವಾಸಪುರ ಪಟ್ಟಣದ ವ್ಯಕ್ತಿಯಾಗಿದ್ದು ಇತನಿಗೂ ಶ್ರೀನಿವಾಸ್ ನಡುವೆ ವೈಯುಕ್ತಿಕ ದ್ವೇಷದ ಕಿಡಿ ಕಳೆದ 8-10 ವರ್ಷಗಳಷ್ಟು ಹಳೆಯದು, ಹುಡುಗಿಯೊಬ್ಬಳ ವಿಚಾರವಾಗಿ ವೇಣುಗೋಪಾಲ್ ಅನ್ನು ಕರೆದು ಶ್ರೀನಿವಾಸನ್ ಬುದ್ದಿ ಹೇಳಿದ್ದೆ ಇವರಿಬ್ಬರ ಮದ್ಯೆ ದೊಡ್ದ ಕಂದಕವೆ ಸೃಷ್ಠಿಯಾಗಿ ಆಗಾಗ ಗಲಾಟೆಯಾಗುತಿತ್ತು, ಶ್ರೀನಿವಾಸನ್ ಅವರನ್ನು ಟಾರ್ಗೆಟ್ ಮಾಡಿ ಸಾರ್ವಜನಿಕವಾಗಿ ಮಾತನಾಡುತ್ತಿದ್ದ ಜೊತೆಗೆ ಸಾಮಾಜಿಕ ಜಾಲ ತಾಣಗಳನ್ನು ಸಹ ವೇಣುಗೋಪಾಲ್ ಬಳಸಿಕೊಳ್ಳುತ್ತಿದ್ದ. ನಾಲ್ಕೈದು ವರ್ಷಗಳ ಹಿಂದೆ ವೇಣುಗೋಪಾಲ್ ಸಂಬಂದಿ ಪವನ್ ವಿಚಾರದಲ್ಲಿ ಗಲಾಟೆ ನಡೆದು ವೇಣು ಮನೆಗೆ ಬೆಂಕಿ ಹಾಕಲಾಗಿತ್ತು ಇದು ಇಬ್ಬರ ನಡುವೆ ಮತ್ತಷ್ಟು ವೈಷಮ್ಯ ಬೆಳೆಯಲು ಕಾರಣವಾಗಿತ್ತು ಎನ್ನಲಾಗುತ್ತಿದೆ.