ಶ್ರೀನಿವಾಸಪುರ:ಹಿಂದೆ ನನ್ನ ಅಧಿಕಾರವಧಿಯಲ್ಲಿ ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ಮತ್ತು ಉದ್ಯಾನವನ ನಿರ್ಮಾಣ ಮಾಡಿಸಿದ್ದೇನೆ, ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 2 ಎಕರೆ ಜಮೀನು ಮೀಸಲು ಇಡಿಸಿದ್ದೇನೆ ಮುಂದಿನ ದಿನಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಒತ್ತು ನಿಡುತ್ತೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಅವರು ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ನನ್ನ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಎಲ್ಲಾ ಸಮಾಜಗಳನ್ನು ಗೌರವದಿಂದ ನಡೆಸಿಕೊಂಡಿದ್ದೇನೆ ಯಾರಿಗೂ ನೋವಾಗುವಂತೆ ವರ್ತಿಸಿಲ್ಲ ಯಾರನ್ನೂ ನೋಯಿಸಿ ಮಾತನಾಡಿಲ್ಲ ಎಲ್ಲಾ ಸಮಾಜಗಳ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿದ್ದೇನೆ ಎಂದ ಅವರು ವಾಲ್ಮೀಕಿ ಸಮುದಾಯ ಆರ್ಥಿಕವಾಗಿ ಸಾಮಜಿಕವಾಗಿ ಆಭಿವೃದ್ಧಿಯಾಗಬೇಕಿದೆ ಅದಕ್ಕಾಗಿ ಪ್ರಾಮಾಣಿಕವಾಗಿ ಸಹಕಾರ ನೀಡುತ್ತೇನೆ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಇತರೆ ಸರ್ಕಾರದ ಸೌಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದರು. ನಿಮ್ಮ ಎಲ್ಲಾ ವೈಯುಕ್ತಿಕ ಕಷ್ಟ ಸುಖಗಳಿಗೆ ಸ್ಪಂದಿಸಲು ಸಿದ್ದನಿದ್ದೇನೆ ಎಂದರು.
ಸರ್ಕಾರಿ ಅಧಿಕಾರಿ ನೌಕರರ ಗೈರು ಶಾಸಕ ಬೇಸರ
ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಮಹಾತ್ಮರ ಜಯಂತಿ ಕಾರ್ಯಕ್ರಮಗಳಲ್ಲಿ ಕೆಲ ಸರ್ಕಾರಿ ನೌಕರರು ಗೈರು ಹಾಜರಾಗಿರುವುದು ಅತ್ಯಂತ ಬೇಸರದ ಸಂಗತಿಯಾಗಿದ್ದು ಕನ್ನಡ ರಾಜ್ಯೋತ್ಸವ ಸೇರಿದಂತೆ ಇಂತಹ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಸರ್ಕಾರಿ ಅಧಿಕಾರಿ ಮತ್ತು ನೌಕರರು ಪಾಲ್ಗೋಳ್ಳುವ ಮೂಲಕ ಕಾರ್ಯಕ್ರಮದ ಘನತೆ ಹೆಚ್ಚಲು ಸಹಕಾರ ನೀಡುವಂತೆ ತಿಳಿಸಿದರು.
ತಹಶೀಲ್ದಾರ್ ಶಿರೀನ್ತಾಜ್ ಮಾತನಾಡಿ ವಾಲ್ಮೀಕಿ ರಚಿಸಿರುವ ರಾಮಾಯಣ ಮಹಾಕಾವ್ಯ ಮನುಕುಲಕ್ಕೆ ಆದರ್ಶ ಪ್ರಾಯವಾಗಿದೆ ಇಂತಹ ಮಹನೀಯರ ಜಯಂತಿಯಲ್ಲಿ ಪಾಲ್ಗೋಳ್ಳುವುದು ಆದರ್ಶ ಸಾರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ವಾಲ್ಮೀಕಿ ಮಹರ್ಷಿ ಭಾವಚಿತ್ರಗಳನ್ನು ಹೊತ್ತು ಗ್ರಾಮ ಪಂಚಾಯಿತಿಗಳಿಂದ ಬಂದಿದ್ದ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.ಕುದುರೆ ಸಾರೋಟ್ ನಲ್ಲಿ ವಾಲ್ಮೀಕಿ ಮಹರ್ಷಿ ಭಾವಚಿತ್ರ ಇಟ್ಟು ಸಾಗಿದ್ದು ವಿಶೇಷವಾಗಿ ಜನರನ್ನು ಆಕರ್ಷಿಸಿತು,ಈ ಸಂದರ್ಭದಲ್ಲಿ ಹೆಚ್ಚಿನ ಅಂಕ ಗಳಿಸಿದ್ದ ವಾಲ್ಮಿಕಿ ಸಮಾಜದ ವಿಧ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು, ಸಮಾಜ ಸೇವಕಿ ಸಮುದಾಯದ ಮಹಿಳಾ ಮುಖಂಡರಾದ ಗಾಯಿತ್ರಿ ಮುತ್ತಪ್ಪ ವತಿಯಿಂದ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ, ರೇಷ್ಮೆ ಇಲಾಖೆ ನಿರ್ದೇಶಕ ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಕ್ಷೇತ್ರಶಿಕ್ಷಾಣಾಧಿಕಾರಿ ಕೆ.ಭಾಗ್ಯಲಕ್ಷ್ಮೀ,ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್, ಜಿ.ಪ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ,ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ,ತಾ.ಪಂ. ಮಾಜಿ ಸದಸ್ಯರಾದ ಪಾತಪೇಟೆ ಮಂಜುನಾಥರೆಡ್ಡಿ,ಕೊರ್ನಹಳ್ಳಿ ಆಂಜಿನಪ್ಪ,ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಕೃಷ್ಣಪ್ಪ,ಮುಖಂಡರಾದ ಗೌನಿಪಲ್ಲಿ ರಾಮಮೋಹನ್,ಗೊಲ್ಲಪಲ್ಲಿ ಪ್ರಸನ್ನ, ಹರೀಶ್ ನಾಯಕ್,ಶ್ರೀನಾಥ್,ಮಹೇಶ್, ಕಂದಾಯ ಇಲಾಖೆ ಅಧಿಕಾರಿಗಳಾದ ಗುರುರಾಜರಾವ್, ಮುನಿರೆಡ್ಡಿ, ಹಾಗು ಸಮುದಾಯದ ಇತರೆ ಮುಖಂಡರು ಇದ್ದರು.
ಪ್ಲೆಕ್ಸ್ ಹರಿದ ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಒತ್ತಾಯ.
ವಾಲ್ಮೀಕಿ ಸಮಾಜದ ಮಹಿಳಾ ಮುಖಂಡರು ಹಾಗು ಕೋಲಾರ ಜಿಲ್ಲಾ ಜೆ.ಡಿ.ಎಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷರು ಆದ ಗಾಯಿತ್ರಿ ಮುತ್ತಪ್ಪ ವಾಲ್ಮೀಕಿ ಜಯಂತಿಯ ಕಾರ್ಯಕ್ರಮಕ್ಕೆ ತಮ್ಮ ಹಾಗು ಶಾಸಕ ವೆಂಕಟಶಿವಾರೆಡ್ಡಿ ಫೋಟೊ ಇರುವಂತ ಶುಭಾಶಯ ಕೋರಿದ್ದ ಪ್ಲೆಕ್ಸ್ ಗಳನ್ನು ಪಟ್ಟಣಾದಾದ್ಯಂತ ಕಟ್ಟಲಾಗಿತ್ತು ಕಿಡಿಕೇಡಿಗಳು ಪ್ಲೆಕ್ಸ್ ನಲ್ಲಿದ್ದ ಗಾಯಿತ್ರಿ ಮುತ್ತಪ್ಪ ನವರ ಫೋಟೊಗಳನ್ನು ಹರಿದಿರುವುದರ ಬಗ್ಗೆ ಗಾಯಿತ್ರಿ ಮುತ್ತಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಈ ಬಗ್ಗೆ ಪೋಲೀಸ್ ಇಲಾಖೆ ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ಕಿಡಿಗೇಡಿಗನ್ನು ಪತ್ತೆಮಾಡಿ ಅವರ ವಿರುದ್ದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.