ಶ್ರೀನಿವಾಸಪುರ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ,ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಹತ್ಯೆ ವಿರೋಧಿಸಿ ಮಂಗಳವಾರ ಶ್ರೀನಿವಾಸಪುರ ತಾಲೂಕು ಬಂದ್ ಮಾಡುವಂತೆ ವಿವಿಧ ಸಂಘಟನೆಗಳು ಕರೆ ಕೊಟ್ಟಿದ್ದಾರೆ.
ಕಳೆದವಾರ ತಮ್ಮ ತೋಟದ ಬಳಿ ಬರ್ಬರವಾಗಿ ಹತ್ಯೆಯಾದ ಶ್ರೀನಿವಾಸನ್ ಅವರನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣವಾದ ಶಿಕ್ಷೆ ವಿಧಿಸಬೇಕು ಎಂದು ಅಗ್ರಹಿಸಿ ತಾಲೂಕಿನ ದಲಿತ ಸಂಘಟನೆಗಳು,ಪ್ರಗತಿಪರ ಸಂಘಟನೆಗಳು,ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳು ತಾಲೂಕು ಬಂದ್ ಮಾಡುವಂತೆ ಕರೆ ಕೊಟ್ಟಿದೆ.ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರಿಗೆ ಎಲ್ಲರು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವಂತೆ ಕೋರಿದ್ದಾರೆ.
ಬಂದ್ ಗೆ ರಿಪಬ್ಲಿಕ್ ಪಾರ್ಟಿ ಬೆಂಬಲ
ದಲಿತ ಸಮುದಾಯದ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ದಲಿತ ಸಮುದಾಯದಲ್ಲಿ ಬಹುದೊಡ್ಡ ಶಕ್ತಿಯಾಗಿ ಬೆಳೆದಿದ್ದರು ದಲಿತ ಸಮುದಾಯಕ್ಕೆ ಭರವಸೆಯ ಮುಖಂಡರಾಗಿದ್ದರು ಅವರ ಹತ್ಯೆ ದಲಿತ ಸಮುದಾಯಕ್ಕೆ ಬಹು ದೊಡ್ಡ ನಷ್ಟ ಎಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಮುಖಂಡ ಎಂ.ವೆಂಕಟಸ್ವಾಮಿ ಹೇಳಿದರು.
ಗೃಹ ಮಂತ್ರಿಗಳ ಆಪ್ತರಾಗಿದ್ದ ಶ್ರೀನಿವಾಸನ್ ಹತ್ಯೆ ಹಿಂದೆ ಬಹುದೊಡ್ಡ ಕಾಣದ ಕೈಗಳು ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿದರು ಈ ಬಗ್ಗೆ ರಾಜ್ಯ ಸರ್ಕಾರ ಪ್ರತಿಷ್ಠೆಯಾಗಿ ತಗೆದುಕೊಂಡು ಕಾರ್ಯನಿರ್ವಹಿಸಬೇಕು ಎಂದ ಅವರು ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದ ಅವರು ರಾಜ್ಯ ಸರ್ಕಾರದ ಕ್ಯಾಬಿನಟ್ ಸವಿವ ಸ್ಥಾನದ ಸಮಾನ ಪದವಿಯಾಗಿದ್ದು ಅವರ ಶ್ರೀನಿವಾಸನ್ ಹತ್ಯೆ ಕುರಿತಾಗಿ ಪ್ರಮಾಣಿಕವಾದ ತನಿಖೆಯಾಗಬೇಕಿದೆ ನಾಳಿನ ಶ್ರೀನಿವಾಸಪುರ ಬಂದ್ ಗೆ ರಿಪಬ್ಲಿಕ್ ಪಾರ್ಟಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲೂ ಶ್ರೀನಿವಾಸನ್ ಹತ್ಯೆ ಕುರಿತು ಹೋರಾಟ ನಡೆಸುವುದಾಗಿ ಹೇಳಿದರು.