ಶ್ರೀನಿವಾಸಪುರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ ಕಾಂಗ್ರೆಸ್ ಪಕ್ಷದ ಯಾವ ಶಾಸಕರು ಸಿಎಂ ಬದಲಾವಣೆ ಬಯಸುತ್ತಿಲ್ಲ ವಿರೋಧ ಪಕ್ಷದ ಶಾಸಕರು ಮಾತ್ರ ವಿನಾಕರಣ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಕರ್ ಹೇಳಿದರು.ಅವರು ಇಂದು ಶ್ರೀನಿವಾಸಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ ಅಧಿಕಾರ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಹತಾಶೆಯಿಂದ ವಿರೋಧ ಪಕ್ಷದವರು ಗೊಂದಲ ಸೃಷ್ಠಿಮಾಡುತ್ತಿದ್ದಾರೆ ಕಾಂಗ್ರೆಸ್ ಪಕ್ಷದ 136 ಶಾಸಕರು ಒಗ್ಗಟ್ಟಾಗಿದ್ದೀವಿ,ಯಾರು ಎನೇ ಹೇಳಲಿ ಸುಭದ್ರ ಸರ್ಕಾರದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದೇವೆ
ರಮೇಶ್ ಕುಮಾರ್ ನಾಯಕತ್ವ ನಮಗೆ ಸ್ಪೂರ್ತಿ
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮಾರ್ಗದರ್ಶನ, ನಾಯಕತ್ವದ ಗುಣಗಳು ನಮಗೆ ಸ್ಪೂರ್ತಿಯಾಗಿದ್ದು ಅವರ ಹಿರಿತನ ಅನುಭವವನ್ನ ಪಕ್ಷ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಿದೆ ಇದರಲ್ಲಿ ಯಾವುದೆ ಮಾತೆ ಇಲ್ಲ ಎಂದರು.
ಮೋದಿ ಅವರ ಹವಾ ಕಡಿಮೆಯಾಗುತ್ತಿದೆ
ದೇಶದಲ್ಲಿ ಮೋದಿ ಆಡಳಿತಕ್ಕೆ ಜನ ಬೆಸೆತ್ತಿದ್ದಾರೆ ಅವರ ಹವಾ ದಿನೆ ದಿನೆಕಡಿಮೆಯಾಗುತ್ತಿದೆ ವಿರೋಧಿ ಅಲೆ ಹೆಚ್ಚಾಗುತ್ತಿದೆ ಎಂದ ಅವರು ಜನ ಮನ್ನಣೆ ಪಡೆದಿರುವ ನಮ್ಮ ಸರ್ಕಾರಕ್ಕೆ ಲೋಕಸಭೆ ಚುನಾವಣೆ ಬಹಳ ಮಹತ್ವದಾಗಿದೆ ರಾಜ್ಯದಲ್ಲಿ ಪ್ರತಿ ಲೋಕಸಭೆ ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗಳನ್ನೆ ಕಣಕ್ಕೆ ಇಳಿಸುತ್ತೇವೆ ಕೋಲಾರ ಲೋಕಸಭೆ ಕ್ಷೇತ್ರದಲ್ಲೂ ಎಂಟು ವಿಧಾನ ಸಭಾ ಕ್ಷೇತ್ರದ ಎಲ್ಲರ ಒಟ್ಟಾರೆ ಅಭಿಪ್ರಾಯ ಪಡೆದು ಉತ್ತಮ ಅಭ್ಯರ್ಥಿಯನ್ನು ಸ್ಪರ್ಧೆ ಮಾಡಿಸುತ್ತೇವೆ.ನಮ್ಮ ಮುಂದಿನ ಗುರಿ ಕೋಲಾರ ಲೋಕಸಭೆ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವುದು ಗುರಿಯಾಗಿದೆ ಎಂದರು
ಅವರು ಇಂದು ಶ್ರೀನಿವಾಸಪುರಕ್ಕೆ ಆಗಮಿಸಿ ಹತ್ಯೆಗಿಡಾದ ಕಾಂಗ್ರೆಸ್ ಮುಖಂಡ ದಲಿತ ನಾಯಕ ಶ್ರೀನಿವಾಸನ್ ಮನೆಗೆ ಭೇಟಿ ಕೊಟ್ಟು ಶ್ರೀನಿವಾಸನ್ ಅವರ ಪತ್ನಿ ಡಾ.ಚಂದ್ರಕಲಾ ಮತ್ತು ಅವರ ಮಕ್ಕಳಿಗೆ ಸಾಂತ್ವಾನ ಹೇಳಿದರು. ಶ್ರೀನಿವಾಸನ್ ಅವರ ಹತ್ಯೆ ನಡೆದಾಗ ನಾನು ಮೈಸೂರು ಸಭೆಯಲ್ಲಿದ್ದೆ ಕಾರಣಾಂತರಗಳಿಂದ ಬರಲು ಸಾದ್ಯವಾಗದ ಹಿನ್ನಲೆಯಲ್ಲಿ ಇಂದು ಆಗಮಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಭಾಸ್ಕರ್, ಉನಿಕಿಲಿ ನಾಗರಾಜ್, ಅಂಬೇಡ್ಕರ್ ಪಾಳ್ಯ ವಿ.ಮುನಿರಾಜು, ಮುಖಂಡರಾದ ಕೆ.ಕೆ.ಮಂಜುನಾಥ್, ಸಂಜಯ್ರೆಡ್ಡಿ,ಚಿಂತಾಮಣಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಡುಂಪಲ್ಲಿಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬುಕ್ಕನಹಳ್ಳಿಶಿವಣ್ಣ ಸಿಮೆಂಟ್ ರಮೇಶ್ ಮುಂತಾದವರು ಇದ್ದರು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Friday, November 22