- ರಾಜ್ಯ ಕಾಂಗ್ರೆಸ್ ಆಫೀಸ್ ನಲ್ಲಿ ನಡೆದ ರಹಸ್ಯ ಸಭೆ
- ಕಾಂಗ್ರೆಸ್ ಹೈಕಮಾಂಡ್ ಮುಖಂಡರು ಸಭೆಯಲ್ಲಿ ಭಾಗಿ
- ಸಿ.ಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಟಾಕ್ ಫೈಟ್.
ನ್ಯೂಜ್ ಡೆಸ್ಕ್: ತನ್ನ ಶಾಸಕರನ್ನು ನಿಯಂತ್ರಿಸುವಲ್ಲಿ ರಾಜ್ಯ ಕಾಂಗ್ರೆಸ್ ವಿಫಲವಾಗಿದೀಯಾ! ಕಾಕಾತಾಳಿಯ ಎನ್ನುವಂತೆ ಕಳೆದ ಒಂದು ವಾರದಿಂದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣದ ಮುಖಂಡರು ನೀಡುತ್ತಿರುವ ಪರ ವಿರೋಧಿ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದು ಇದರ ಗಂಭೀರತೆ ಅರಿತ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ರಾಜ್ಯ ಕಾಂಗ್ರೆಸ್ ವಿಚಾರದಲ್ಲಿ ಎಂಟ್ರಿ ಕೊಟ್ಟಿದೆ.ಕಾಂಗ್ರೆಸ್ ಹೈಕಮಾಂಡ್ ಮುಖಂಡರಾದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಬ್ಬರನ್ನು ಕೂರಿಸಿಕೊಂಡು ಬೆಂಗಳೂರಿನ ಕಾಂಗ್ರೆಸ್ ಆಫಿಸ್ ನಲ್ಲಿ ಹೈವೋಲ್ಟೇಜ್ ಮೀಟಿಂಗ್ ಮಾಡಿದ್ದಾರೆ ಸಭೆಯಲ್ಲಿ ನಾಲ್ಕು ಜನ ಮಾತ್ರ ಭಾಗವಹಿಸಿದ್ದು ಇದೊಂದು ಮಹತ್ವದ ಸಭೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹತ್ತರ ಸಭೆಯಲ್ಲಿ ಆಸಕ್ತಿಕರ ಘಟನೆಗಳು ನಡೆದಿದ್ದು ಮೂಲಗಳ ಪ್ರಕಾರ, ನಿಗಮ ಮಂಡಳಿಗಳಿಗೆ ನೇಮಕ ವಿಚಾರದಲ್ಲಿ ಸಿಎಂ-ಡಿಸಿಎಂ ನಡುವೆ ಟಾಕ್ ವಾರ್ ನಡೆದಿಯಂತೆ ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾಗಿ ಹೇಳಲಾಗುತ್ತಿದೆ.
ಸಭೆಯಲ್ಲಿ ಬಣ ಕಚ್ಚಾಟ ಬಿಡುವಂತೆ ಸಲಹೆ ನೀಡುವ ಮೂಲಕ ಬಣ ಸಂಘರ್ಷಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಯಾರೆ ಆಗಲಿ ಪಕ್ಷದ ಚೌಕಟ್ಟು ಮೀರಿ ಹೇಳಿಕೆ ಕೊಡಬಾರದು ಪಕ್ಷಕ್ಕೆ ಡ್ಯಾಮೆಜ್ ಅಗುವಂತ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪ ಮಾಡಬಾರದು.ಇದನ್ನು ಮೀರಿ ನಡೆದುಕೊಂಡರೆ ಶಿಸ್ತುಕ್ರಮ ಜರಗಿಸುವ ಕುರಿತಾಗಿ ಖಡಕ್ ಎಚ್ಚರಿಕೆ ನೀಡಿದ್ದಾರಂತೆ. ಬರುವ ಲೋಕಸಭೆ ಚುನಾವಣೆ, ಬೆಳಗಾವಿ ಪಾಲಿಟಿಕ್ಸ್, ಪಕ್ಷ ಸಂಘಟನೆ, ನಿಗಮಮಂಡಳಿ ನೇಮಕ ಸೇರಿ ಇನ್ನಿತರೆ ವಿಚಾರಗಳ ಬಗ್ಗೆಯೂ ಸುಧೀರ್ಘವಾದ ಚರ್ಚೆ ನಡೆದಿದ್ದು ಸಭೆಯ ವಿವರಗಳನ್ನು ಸಿಎಂ-ಡಿಸಿಎಂ ಬಿಟ್ಟುಕೊಡಲಿಲ್ಲ.
ಶಾಸಕರ-ಕಾರ್ಯಕರ್ತರಾ ಸಭೆಯಲ್ಲಿ ನಡೆದಿದ್ದಾರು ಏನು?
ನಿಗಮ ಮಂಡಳಿಗಳಲ್ಲಿ 30-35 ಶಾಸಕರಿಗೆ ಅವಕಾಶ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಪಟ್ಟು ಹೀಡದಿದ್ದರೆ ಇದನ್ನು ಒಪ್ಪದ ಡಿಕೆಶಿ, 25 ಶಾಸಕರಿಗೆ ಮಾತ್ರ ಕೊಡಿ. ಉಳಿದದ್ದನ್ನು ಕಾರ್ಯಕರ್ತರಿಗೆ ನೀಡೋಣ ಎಂದಿರುತ್ತಾರಂತೆ ಇದಕ್ಕೆ ಸಿಎಂ,ಆಗಲ್ಲ ಗ್ಯಾರಂಟಿಗಳಿಂದಾಗಿ ಶಾಸಕರಿಗೆ ಹೆಚ್ಚಿನ ಅನುದಾನ ಕೊಡಲು ಅಗುತ್ತಿಲ್ಲ ಹೀಗಾಗಿ ನಿಗಮ ಮಂಡಳಿಯಲ್ಲಿ ಶಾಸಕರಿಗೆ ಆದ್ಯತೆ ನೀಡಬೇಕು ಎಂದು ಶಾಸಕರ ಪರವಾಗಿ ಸಿಎಂ ವಕಾಲತ್ತು ಹಾಕಿದ್ದಾರೆ. ಇದಕ್ಕೆ ಡಿಸಿಎಂ ಒಪ್ಪದೆ ಕಾರ್ಯಕರ್ತರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ಲೋಕಸಭೆ ಚುನಾವಣೆ ಗೆಲ್ಲಬೇಕಾದರೆ ಕಾರ್ಯಕರ್ತರಿಗೆ ಮಣೆ ಹಾಕಬೇಕು ಎಂದು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಸಿಎಂ, ಲೋಕಸಭೆ ಹೆಚ್ಚಿನ ಸೀಟ್ ಗೆಲ್ಲಬೇಕಾದರೆ ನಿಗಮ ಮಂಡಳಿಗಳಲ್ಲಿ ಶಾಸಕರಿಗೆ ಆದ್ಯತೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.ಕಾರ್ಯಕರ್ತರೆ ಮುಖ್ಯ ಅವರೆ ಶಾಸಕರನ್ನು ಗೆಲ್ಲಿಸಿರುವುದು ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕಾರ್ಯಕರ್ತರಿಗೆ ಏನು ಸಿಕ್ಕಿದೆ ಎಂದು ಡಿಕೆಶಿ ಪ್ರಶ್ನಿಸಿದ್ದಾರಂತೆ ಇದಕ್ಕೆ ಉತ್ತರ ನೀಡಿದ ಸಿಎಂ,ಶಾಸಕರನ್ನು ಸಂಭಾಳಿಸಿ ಸರ್ಕಾರ ನಡೆಸುವುದು ತುಂಬಾ ಕಷ್ಟ ಎಂದಿದ್ದಾರೆ ಇದಕ್ಕೆ ಡಿಕೆಶಿ, ಕಾರ್ಯಕರ್ತರನ್ನು ಕಡೆಗಣಿಸಿದರೆ ಪಕ್ಷ ನಡೆಸುವುದು ಇನ್ನೂ ಕಷ್ಟ ಗೊತ್ತಾ ಎಂದರಂತೆ
ಇಬ್ಬರ ಟಫ್ ಟಾಕ್ ಫೈಟ್ ಗಮನಿಸಿದ ವೇಣುಗೋಪಾಲ್, ಈಗ ನೀವಿಬ್ಬರು ಸುಮ್ಮನಿರಿ. ಪಂಚರಾಜ್ಯ ಚುನಾವಣೆಯ ನಂತರ ನಿರ್ಧಾರ ಮಾಡೋಣ.ಅಷ್ಟರಲ್ಲಿ ನೀವಿಬ್ಬರು ಒಮ್ಮತಾಭಿಪ್ರಾಯಕ್ಕೆ ಬನ್ನಿ. ಇಲ್ಲಾಂದ್ರೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. 2013 ರಲ್ಲಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದವರಿಗೆ ಈ ಬಾರಿ ಅವಕಾಶ ಬೇಡ. ನಿಗಮಕ್ಕೆ ಹಠ ಹಿಡಿದರೆ ಸಂಪುಟ ಪುನಾರಚನೆಯಲ್ಲಿ ಅವಕಾಶವಿಲ್ಲ ಎಂದು ತಿಳಿಸಿ. ಒಂದಷ್ಟು ಕಂಡೀಶನ್ ಹಾಕಿ. ಕಾಂಪಿಟೇಷನ್ ಕಡಿಮೆ ಆಗುವಂತೆ ಮಾಡಿ ಎಂದು ಇಬ್ಬರಿಗೆ ಸೂಚಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.