ಶ್ರೀನಿವಾಸಪುರ:ಬರ ಅದ್ಯಯನಕ್ಕೆ ಹಾಗು ತಾಲೂಕಿನಲ್ಲಿ ಅರಣ್ಯ ಭೂಮಿ ತೆರವು ಕಾರ್ಯಚರಣೆಯಿಂದ ಜಮೀನು ಕಳೆದುಕೊಂಡ ರೈತರನ್ನು ಸಂತೈಸಲು ರಾಜ್ಯ ಬಿಜೆಪಿ ಮುಖಂಡರು ಇಂದು ಶ್ರೀನಿವಾಸಪುರಕ್ಕೆ ಆಗಮಿಸಿ ಬರ ವೀಕ್ಷಣೆ ಮಾಡಿ ಭೂಮಿ ಕಳೆದುಕೊಂಡ ರೈತರ ಸಮಸ್ಯೆ ಆಲಿಸಿದರು.
ಶ್ರೀನಿವಾಸಪುರ ತಾಲ್ಲೂಕಿನ ಪಾತಪಲ್ಲಿಗೆ ಆಗಮಿಸಿದ ಬಿಜೆಪಿ ಮುಖಂಡರ ತಂಡ ಪಾತಪಲ್ಲಿ ಗ್ರಾಮದ ರೈತರ ತೋಟಗಳಿಗೆ ಅಧ್ಯನ ತಂಡ ಭೇಟಿ ನೀಡಿ ಪರಿಶೀಲಿಸಿತು.ಸುರಿವ ಮಳೆಯಲ್ಲೆ ರೈತರೊಂದಿಗೆ ಹೊಲಗಳಲ್ಲಿ ಓಡಾಡಿದ ಬಿಜೆಪಿ ಮುಖಂಡ ಚಿ.ಟಿ.ರವಿ ಸಂಸದ ಮುನಿಸ್ವಾಮಿ ರೈತರಿಂದ ಮಾಹಿತಿ ಪಡೆದರು.
ಸ್ವಾತಂತ್ರ್ಯ ಪೂರ್ವದಲ್ಲಿ ಜಮೀನು ಮಂಜೂರು ಆಗಿದ್ದು ಅರಣ್ಯ ಇಲಾಖೆಯವರು ರಾತ್ರೋರಾತ್ರಿ ದೌರ್ಜನ್ಯದಿಂದ ಜಮೀನಿನೊಳಗೆ ಪ್ರವೇಶ ಮಾಡಿ ಬಹು ಗಾತ್ರದ ಮಾವಿನ ಮರಗಳನ್ನು ನಾಶಪಡಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಮಯದಲ್ಲಿ ರೈತರನ್ನು ಹೀನಾಯವಾಗಿ ಹೊರ ತಳ್ಳಿದರು ಎಂದು ರೈತ ಚೌಡರೆಡ್ಡಿ ಅಳಲು ತೋಡಿಕೊಂಡರು.ನಮಗೆ ಕಂದಾಯ ಇಲಾಖೆಯಿಂದ ಮಂಜೂರು ಆಗಿರುವುದಕ್ಕೆ ಸಮರ್ಪಕವಾದ ದಾಖಲೆಗಳು ಸಹ ಇವೆ, ಒತ್ತುವರಿ ತೆರವಿಗೂ ಮುನ್ನ ಕಾನೂನಿನ ಪ್ರಕಾರ ಪೂರ್ವ ನೋಟೀಸ್ ನೀಡಿಲ್ಲ, ಇಲಾಖಾ ಅಧಿಕಾರಿಗಳ ವರ್ತನೆಗೆ ರೈತರು ಬೀದಿಪಾಲಾಗಬೇಕಾಗಿದೆ ಎಂದು ಕಣ್ಣೀರಿಟ್ಟು ತಮ್ಮ ನೋವು ಹೇಳಿಕೊಂಡರು.
ರೈತರ ಮನವಿಗೆ ಸ್ಪಂದಿಸಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ಕಟುಕರು ಮಾಡುವಂತ ಕೆಲಸ ಅಧಿಕಾರಿಗಳು ಮಾಡಿದ್ದಾರೆ,
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ಶ್ರೀನಿವಾಸಪುರ ತಾಲೂಕಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಜಿಲ್ಲಾಡಳಿತ,ಅರಣ್ಯ ಇಲಾಖೆ ಓಗ್ಗೂಡಿ ಮಾಡುತ್ತಿರುವುದನ್ನು ನೋಡಿದರೆ ಅಧಿಕಾರಿಗಳಿಗೆ ಮಾನವೀಯತೆಯೆ ಇಲ್ಲ ಎಂದು ಸರ್ಕಾರ,ಜಿಲ್ಲಾಡಳಿತ, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರವಾದ ಧಾಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಸ್ವಾತಂತ್ರ್ಯ ಪೂರ್ವದಲ್ಲಿ ನಿಯಮಾವಳಿಗಳಂತೆ ಕಾನೂನಾತ್ಮಕವಾಗಿ ಸರ್ಕಾರವೇ ಜಮೀನು ಮಂಜೂರು ಮಾಡಿದೆ. ಇಂತಹ ಜಮೀನಿನಲ್ಲಿ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯವರು ಯಾರು ರೈತರು ಅರಣ್ಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು ಸ್ವೀಕರಿಸದೆ ಪೊಲೀಸರು ಸಹ ಈ ವಿಚಾರದಲ್ಲಿ ತಪ್ಪು ನಿರ್ಧಾರ ಮಾಡಿದ್ದಾರೆ,ನಿಮ್ಮ ಬಳಿಯಿರುವ ದಾಖಲೆಗಳನ್ನು ನೀಡಿ ನ್ಯಾಯ ಸಿಗುವ ತನಕ ಹೋರಾಟ ಮಾಡುವ ಮೂಲಕ ರೈತರಿಗೆ ನ್ಯಾಯದೊರಕಿಸುತ್ತೇವೆ ಎಂದು ಭರವಸೆ ನೀಡಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, 1942-43 ರಲ್ಲಿ ರೈತರಿಗೆ ಜಮೀನು ಮಂಜೂರಾಗಿದೆ. ಆ ಭೂಮಿ ಅರಣ್ಯ ಇಲಾಖೆಯವರದು ಎನ್ನುವುದಾದರೆ ಬೆಸ್ಕಾಂ ಇಲಾಖೆಯ ಕಂಬಗಳನ್ನು ನಡೆಲು ಒಪ್ಪಿಗೆ ಕೊಟ್ಟವರು ಯಾರು ಜಮೀನುಗಳಲ್ಲಿ ವಿದ್ಯತ್ ಕಂಬಗಳನ್ನು ನಟ್ಟಿರುವುದಕ್ಕೆ ಜಮೀನು ಮಾಲಿಕನಿಗೆ ಕೇಂದ್ರ ಸರ್ಕಾರದ ಪವರ್ ಗ್ರಿಡ್ ವತಿಯಿಂದ ಪರಿಹಾರ ನೀಡಲಾಗಿದೆ ಎಂದರು.ಆಗ ಅರಣ್ಯ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಕುರಿತಾಗು ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಂ.ಎಲ್.ಸಿ ಚಲವಾದಿನಾರಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ರೈತ ಹೋರಾಟಗಾರ ಮುಳಬಾಗಿಲುಗೋಪಾಲ್, ಮಾಜಿ ಶಾಸಕ ವೈ.ಸಂಪಂಗಿ, ಮುಖಂಡರಾದ ಕೃಷ್ಣಮೂರ್ತಿ,ವಕೀಲ ನಾರಯಣಸ್ವಾಮಿ, ಇತರರು ಇದ್ದರು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Saturday, November 23