ಮುಳಬಾಗಿಲು:ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿಸಿದ ನರೇಂದ್ರ ಮೋದಿ ಅವರು ಮೂರನೆ ಅವಧಿಗೆ ಪ್ರಧಾನಿ ಆಗಬೇಕೆಂದು ಕುರುಡುಮಲೆ ಗಣೇಶನಿಗೆ ಪೂಜೆ ಮಾಡಿಸಲು ಬಂದಿರುವುದಾಗಿ ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು ಅವರು ರಾಜ್ಯಾಧ್ಯಕ್ಷ ಪದವಿ ಪಡೆದ ನಂತರ ನಿರಂತರವಾಗಿ ಮಠ ಹಾಗು ದೇವಾಲಯಗಳನ್ನು ಸುತ್ತುತ್ತ ಇದ್ದು ಇಂದು ಮುಳಬಾಗಿಲಿನ ಕುರುಡುಮಲೆ ಶ್ರೀವಿನಾಯಕನ ಸನ್ನಿಧಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದರು.
ಮುಂಬರುವ ಸಂಸತ್ ಚುನಾವಣೆಯಲ್ಲಿ ಬಿಜೆಪಿ ವಿಜಯಭೇರಿ ಬಾರಿಸಲು ಹಾಗು ರಾಜ್ಯದಲ್ಲೂ ಪಕ್ಷದ ಹೆಚ್ಚು ಸಂಸದರನ್ನು ಗೆಲ್ಲಿಸುವಂತೆ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿರುತ್ತೇನೆ ಎಂದ ಅವರು ರಾಜ್ಯದ ಭಾರತೀಯ ಜನತಾ ಪಕ್ಷದಲ್ಲಿ ಇನ್ನೂ ಹೆಚ್ಚು ಹಿರಿಯರು ಇದ್ದರು ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ಚಾಸ ಇಟ್ಟು ಅವಕಾಶ ನೀಡಿದ್ದಾರೆ ಇದಕ್ಕೆ ಮೋದಿ,ಶಾ,ನಡ್ಡಾ, ಹಾಗು ಸಂತೋಷ್ ಜಿ ಬೆಂಬಲ ಇದೆ ಇದಕ್ಕೆ ಯಾರು ಯಾರು ವಿರೋಧ ವ್ಯಕ್ತಪಡಿಸಿಲ್ಲ.ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡಿ ಅವರ ಆಶಿರ್ವಾದ ಪಡೆದು ಪಕ್ಷದ ವರಿಷ್ಠರ ತಿರ್ಮಾನದಂತೆ ಜೆಡಿಎಸ್ ಮೈತ್ರಿಯನ್ನು ಪರಿಗಣಿಸಿ ಅವರಿಂದಿಗೆ ಜೊತೆಗೂಡಿ ಕೆಲಸ ಮಾಡುವೆ ಪಕ್ಷ ಸಂಘಟನೆ ಮಾಡುವುದಾಗಿ ಮತ್ತು ನವೆಂಬರ್ 17 ರಂದು ಪಕ್ಷದ ಶಾಸಕಾಂಗ ಸಭೆ ಕರೆದಿದ್ದು ಇದರಲ್ಲಿ ಕೇಂದ್ರದ ವೀಕ್ಷಕರೂ ಭಾಗವಹಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ,ಸಂಸದ ಪಿ.ಸಿ.ಮೋಹನ್, ಜಿಲ್ಲೆ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್,ಕಾರ್ಯದರ್ಶಿ ಕೃಷ್ಣಮೂರ್ತಿ,ಮಾಜಿ ಸಚಿವ ವರ್ತೂರುಪ್ರಕಾಶ್,ಮುಳಬಾಗಿಲು ನಗರಸಭೆ ಸದಸ್ಯ ಪ್ರಸಾದ್,ಮುಖಂಡರಾದ ರೋಣೂರುಚಂದ್ರು,ಓಂ ಶಕ್ತಿಚಲಪತಿ ಮುಂತಾದವರು ಇದ್ದರು.
ಮುಳಬಾಗಲು ದೋಸೆ ಸವಿದ ವಿಜಯೇಂದ್ರ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕುರುಡುಮಲೆಗೆ ಅಗಮಿಸಿ ಪೂಜೆ ಸಲ್ಲಿಸಿದ ನಂತರ ಕಾರ್ಯಕರ್ತರೊಂದಿಗೆ ಕೂಡಿ ರಸ್ತೆ ಬದಿ ನಿಂತುಕೊಂಡೆ ಮುಳಬಾಗಿಲು ದೋಸೆ ರುಚಿ ಸವಿದರು.
ಅದ್ದೂರಿ ಸ್ವಾಗತ ಕೋರಿದ ಕೋಲಾರ ಜಿಲ್ಲೆ ಕಾರ್ಯಕರ್ತರು
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವುದಕ್ಕೆ ಕೋಲಾರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಂತಿದೆ ಇಂದು ಕುರುಡುಮಲೆ ಗಣಪನಿಗೆ ಪೂಜೆ ಸಲ್ಲಿಸಲು ಜಿಲ್ಲೆಗೆ ಆಗಮಿಸಿದ ವಿಜಯೇಂದ್ರ ಅವರನ್ನು ಕೋಲಾರ ಜಿಲ್ಲೆ ಕಾರ್ಯಕರ್ತರು ಹೋಸಕೋಟೆ ಟೋಲ್ ಬಳಿಂದಲೆ ಆದ್ದೂರಿಯಾಗಿ ಸ್ವಾಗತಿಸಿ ಕರೆತಂದರು ನಂತರ ಕೋಲಾರ ಜಿಲ್ಲೆಯ ಗಡಿಯಲ್ಲಿ ರಾಮಸಂದ್ರ ಗೇಟ್ ಬಳಿ ಅಧಿಕೃತವಾಗಿ ಸ್ವಾಗತಿಸದ ಕಾರ್ಯಕರ್ತರು ಗಜಮಾಲೆಗಳನ್ನು ಹಾಕಿ ದೊಡ್ಡ ಮಟ್ಟದ ಜೈ ಕಾರಗಳ ಘೋಷಣೆಗಳು ಮುಗಿಲು ಮುಟ್ಟಿತ್ತು.ಕುರುಡುಮಲೆ ಗಣಪತಿ ಪೂಜಾ ಕಾರ್ಯಕ್ರಮ ನಂತರ ಅವರು ನೇರವಾಗಿ ಮುಳಬಾಗಿಲು ತಾಲೂಕು ಮಲ್ಲಸಂದ್ರ ಗ್ರಾಮದ ಬೂತ್ ಮಟ್ಟದ ಅಧ್ಯಕ್ಷ ಮೂರ್ತಿ ಅವರ ಮನೆಗೆ ತೆರಳಿ ಭೇಟಿಯಾಗಿ ದೀಪಾವಳಿ ಶುಭಾಶಯ ತಿಳಿಸಿದರು.