- ಪೂರ್ಣಗೊಳ್ಳದ ಜಲಜೀವನ್ ಮೀಷನ್ ಕಾಮಗಾರಿ
- ಗುತ್ತಿಗೆ ದಾರರ ನಿರ್ಲಕ್ಷ್ಯ ಅಧಿಕಾರಿಗಳ ಬೇಜವಾಬ್ದಾರಿ
- ಕೆಲ ಹಳ್ಳಿಗಳಲ್ಲಿ ರಸ್ತೆ ಆಗೆದು ಜನರ ಒಡಾಟಕ್ಕೆ ತೊಂದರೆ
ಶ್ರೀನಿವಾಸಪುರ:ಗ್ರಾಮೀಣ ಜನರ ಮನೆಮನೆಗೂ ನೀರು ಕೊಡುವಂತ ಜಲಜೀವನ್ ಮಿಷನ್ ಯೋಜನೆ ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಮಹತ್ತರ ಕಾರ್ಯಕ್ರಮ,ಆದರೆ ಕೆಲವೊಂದು ಹಳ್ಳಿಗಳಲ್ಲಿ ಕಾಮಗಾರಿ ಪೂರ್ಣ ಆಗದೆ ಗ್ರಾಮಗಳಲ್ಲಿ ಜನತೆ ಇಲ್ಲದ ತೊಂದರೆ ಅನುಭವಿಸುತ್ತಿದ್ದಾರೆ ಈ ಬಗ್ಗೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ನಿಧಾನಗತಿಗೆ ಆಕ್ರೋಶ ವ್ಯಕ್ತಪಡಿಸಿತ್ತಾರೆ.
ಭಾರತ ಸರ್ಕಾರ ಹಾಗು ರಾಜ್ಯ ಸರ್ಕಾರದ ಸಹಬಾಗಿತ್ವದಲ್ಲಿ ಅನುಷ್ಟಾನವಾಗುತ್ತಿರುವ ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆ-ಮನೆಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡುವಂತ ಅದ್ಭುತವಾದ ಕಾರ್ಯಕ್ರಮವಾಗಿದೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತಗೆದುಕೊಂಡು ನಿಲಿ ನಕ್ಷೆ ತಯಾರಿಸಿ ಜನರ ಒಪ್ಪಿಗೆ ಮೇರೆಗೆ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿದೆ ಆದೆರೆ ಇದ್ಯಾವುದನ್ನು ಪರಿಗಣಿಸದ ಗುತ್ತಿಗೆ ದಾರರು ತಮ್ಮ ಇಷ್ಟಾನುಸಾರ ಕಾಮಗಾರಿ ಮಾಡುತ್ತ ರಸ್ತೆಗಳನ್ನು ಆಗೆದು ಹಳ್ಳಿಗಳಲ್ಲಿ ಕಾಮಗಾರಿ ಪೂರ್ಣವಾಗಿಲ್ಲ ಇದರ ಪರಿಣಾಮ ಗ್ರಾಮದ ಜನತೆ ಒಡಾಡಲು ಸಮರ್ಪಕವಾದ ರಸ್ತೆ ಇಲ್ಲದೆ ಇಕ್ಕಟ್ಟಿನಲ್ಲಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಶುರುವಾಗಿ 7-8 ತಿಂಗಳಾಗಿದೆ ಇದುವರಿಗೂ ಕಾಮಗಾರಿ ಪೂರ್ಣಗೊಂಡಿಲ್ಲ ಗ್ರಾಮದ ಸಿಮೆಂಟ್ ರಸ್ತೆಗಳನ್ನು ಎಲ್ಲಂದರಲ್ಲಿ ಅಗೆದು ಹಾಕಿದ್ದಾರೆ,ಅಗೆದಿರುವ ರಸ್ತೆಯಲ್ಲಿ ಜನ ಜಾನುವಾರುಗಳ ಓಡಾಟಕ್ಕೆ ತೊಂದರೆ ಆಗಿದೆ.ಇದು ಅಧಿಕಾರಿಗಳ ನಿರ್ಲಕ್ಷ್ಯ ಧೊರಣೆಗೂ ಕಾರಣ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಗ್ರಾಮಗಳಲ್ಲಿ ರಸ್ತೆಗಳನ್ನು ಅಗೆದು ಹಾಕಿರುವ ಹಿನ್ನಲೆಯಲ್ಲಿ ಜನತೆ ಹಾಗು ಜಾನುವಾರುಗಳು ರಸ್ತೆ ಅಗೆತದಿಂದ ಆಗಿರುವ ಹಳ್ಳದಲ್ಲಿ ಬಿದ್ದು ಗಾಯಗೊಂಡಿವೆ.
ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಹೋಗಿ ಸಮಸ್ಯೆ ಹೇಳಿದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇರುವುದಿಲ್ಲ ಕಚೇರಿಯಲ್ಲಿ ಇರುವರು ಅಧಿಕಾರಿ ಬಂದ ನಂತರ ಬಂದು ಸಮಸ್ಯೆ ಹೇಳಿ ಎನ್ನುತ್ತಾರೆ ಸಮಸ್ಯೆ ಬಗ್ಗೆ ಜನತೆ ಪಂಚಾಯಿತಿ ಅಧಿಕಾರಿಗೆ ಮೊಬೈಲ್ ಮೂಲಕ ಹೇಳಲು ಹೋದರೆ ನಾನು ಹೊರಗಡೆ ಬೇರೆ ಕೆಲಸದಲ್ಲಿ ಇಋವಾಗ ಎರಡನೇ ಶನಿವಾರ ಅಥಾವ ಹಬ್ಬ ಹರಿದಿನದ ಸರ್ಕಾರಿ ರಜೆಯಲ್ಲಿ ಇರುವಾಗ ಸಮಸ್ಯೆ ಕೇಳಲು ಆಗುವುದಿಲ್ಲ ಎಂದು ಕರೆಯನ್ನು ಕಟ್ ಮಾಡುತ್ತಾರೆ ಎಂಬುದು ಸಾರ್ವಜನಿಕ ಆರೋಪ.
ಹಾಗಾದರೆ ಗ್ರಾಮಗಳಲ್ಲಿನ ಪರಿಸ್ಥಿತಿಗೆ ಸ್ಪಂದಿಸುವರು ಯಾರು ಎತ್ತ ಸಾಗುತ್ತಿದೆ ಶ್ರೀನಿವಾಸಪುರ ತಾಲೂಕು ಆಡಳಿತದ ಕಾರ್ಯ ವೈಖರಿ ಎಂಬುದು ಜನತೆಯ ಪ್ರಶ್ನೆ.