- ದಕ್ಷಿಣ ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿದೆ
- ರಾಮಯಣ ಕಾಲದ ಗುಹಾಂತರ ದೇವಾಲಯ
- ದಟ್ಟಕಾಡಿನಲ್ಲಿ ಸುಣ್ಣದ ಗುಹೆಯಲ್ಲಿ ಬೃಹದ್ ಲಿಂಗ
ನ್ಯೂಜ್ ಡೆಸ್ಕ್:ಹಲವಾರು ವರ್ಷಗಳಿಂದ ವಾಸಿಯಾಗದ ಕಾಯಿಲೆಗಳಿಂದ ಬಳಲುತ್ತಿರುವ ಜನರು ಇಲ್ಲಿನ ದೇವರನ್ನು ಪೂಜಿಸುಸುತ್ತಾರೆ ಮತ್ತು ಗುಹೆಯಲ್ಲಿ ಶಿವಲಿಂಗದ ಸಮೀಪ ಗುಣಮುಖರಾಗುವ ಭರವಸೆಯಲ್ಲಿ ತಿಂಗಳುಗಟ್ಟಲೆ ಉಳಿದುಕೊಂಡು ಗುಣಮುಖರಾಗಿ ವಾಪಸ್ಸು ತೆರಳುತ್ತಾರೆ ವೈದ್ಯಕೀಯ ಲೋಕದ ಅನೇಕ ಕಾಯಿಲೆಗಳನ್ನು ಗುಣಮುಖವಾಗಿಸುವಂತಹ ಭರವಸೆ ಇರುವ ದೇವಾಲಯ ಶ್ರೀ ಗುಪ್ತೇಶ್ವರ ಗುಹಾಂತರ ದೇವಾಲಯ, ದಕ್ಷಿಣ ಒರಿಸ್ಸಾದಲ್ಲಿರುವ ಕೊರಾಪುಟ್ ಬಳಿ ಇದೆ. ಪ್ರಾಕೃತಿಕ ಸೌಂದರ್ಯಗಳ ರಾಶಿ ಸುಂದರವಾದ ಹಚ್ಚ ಹಸಿರು ಬೆಟ್ಟಸಾಲುಗಳ ನಡುವೆ ಹಲವಾರು ಗುಹೆಗಳಿವೆ ಇದರಲ್ಲಿ ಖನಿಜ ಸಂಪತ್ತು ಇರುವ ಸುಣ್ಣದಕಲ್ಲಿನ ಬೆಟ್ಟದಲ್ಲಿ ರಮಣೀಯ ಅರಣ್ಯದ ಕಾನನದ ನಡುವೆ ಕೊಲಾಬ್ ನದಿಯ ಬಳಿ ಸ್ವಯಂಭೂ ನೆಲೆ ನಿಂತಿರುವ ಶಿವಲಿಂಗವನ್ನು ಗುಪ್ತೇಶ್ವರ ಎಂದು ಪೂಜಿಸುತ್ತಾರೆ. ಕಾಳಿದಾಸನ ಮೆಘದೂತ ಮಹಾಕಾವ್ಯದಲ್ಲೂ ಗುಹಾಂತರ ಗುಪ್ತೇಶ್ವರ ಕುರಿತಾಗಿ ಉಲ್ಲಿಖಿಸಲಾಗಿದೆ ಎನ್ನುತ್ತಾರೆ.
ಭಗವಾನ್ ಶಿವನ ಅವತಾರವಾದ ಗುಪ್ತೇಶ್ವರ ಸದಾ ನೀರು ತೊಟ್ಟಿಕ್ಕುವ ಗುಹೆಯಲ್ಲಿ ಬೃಹದಕಾರವಾದ ಶಿವಲಿಂಗದ ರೂಪದಲ್ಲಿ ದರ್ಶನ ನೀಡುತ್ತಾನೆ.ನೀರು ತೊಟ್ಟಿಕ್ಕುವುದಕ್ಕೆ ಜನರು ಇದನ್ನು ಕಾಮಧೇನುವಿನ ಕೆಚ್ಚಲು ಎಂದು ನಂಬಿದ್ದಾರೆ ಮತ್ತು ನಿಧಾನವಾಗಿ ಬೀಳುವ ನೀರಿನ ಹನಿಗಳನ್ನು ಸಂಗ್ರಹಿಸಲು ಅಂಗೈಯನ್ನು ಚಾಚಿಕೊಂಡು ಕಾಯುತ್ತ ನೀರಿನ ಹನಿಗಳನ್ನು ಶೇಖರಿಸುತ್ತಾರೆ.
ಶಿವನ ಲಿಂಗವು ರಹಸ್ಯ ಸ್ಥಳದಲ್ಲಿರುವುದರಿಂದ (ಒಡಿಯಾ ಭಾಷೆಯಲ್ಲಿ ರಹಸ್ಯ ಎಂದರೆ ಗುಪ್ತ) ಭಗವಂತನನ್ನು ಗುಪ್ತೇಶ್ವರ ಎಂದು ಕರೆಯಲಾಗುತ್ತದೆ ಶಿವಲಿಂಗ ಪ್ರತಿ ವರ್ಷ ಗಾತ್ರದಲ್ಲಿ ಬೆಳೆಯುತ್ತಿದೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ರಾಮಯಣ ಕಾಲ ಘಟ್ಟದಲ್ಲಿ ಶ್ರೀ ರಾಮಚಂದ್ರಮೂರ್ತಿ ತನ್ನ ಹದಿನಾಲ್ಕು ವರ್ಷಗಳ ಅರಣ್ಯವಾಸದಲ್ಲಿ ಸೀತಾ ಮಾತೆ ಮತ್ತು ಲಕ್ಷ್ಮಣರೊಂದಿಗೆ ದಂಡಕಾರಣ್ಯದಲ್ಲಿ ಸಂಚರಿಸುವಾಗ ಸ್ವತಃ ಭಗವಾನ್ ರಾಮಚಂದ್ರನೆ ಈ ಶಿವಲಿಂಗವನ್ನು ಕಂಡಿದ್ದಾಗಿ ಹೇಳುತ್ತಾರೆ ನಂತರದಲ್ಲಿ ಕಲಿಯುಗದಲ್ಲಿ ಮೊದಲು ಇದನ್ನು 19 ನೇ ಶತಮಾನದಲ್ಲಿ ಬುಡಕಟ್ಟು ಜನಾಂಗದ ಬೇಟೆಗಾರರು ಗುರುತಿಸಿದ ಗುಹಾಂತರ ದೇವಾಲವಾಗಿದ್ದು ಬುಡಕಟ್ಟು ಜನರು ಭಗವಾನ್ ಗುಪ್ತೇಶ್ವರನನ್ನು ಪೂಜಿಸಲು ಪ್ರಾರಂಭಿಸಿ ನಂತರ ಆಭಾಗದ ಅಂದಿನ ಮಹಾರಜ ವಿಕ್ರಮ್ ದೇವ್ ಅವರಿಗೆ ವಿಷಯ ತಿಳಿದು ಕ್ರಮಬದ್ದ ಪೂಜೆಗೆ ಅನವು ಮಾಡಿಕೊಟ್ಟ ಬಗ್ಗೆ ಹೇಳುತ್ತಾರೆ. ಪವಿತ್ರ ಶ್ರಾವಣ ಮಾಸವಾದಲ್ಲಿ ಭಗವಾನ್ ಗುಪ್ತೇಶ್ವರನ ಗುಹೆಗೆ ಪಾದಯಾತ್ರೆ ಮೂಲಕ ಲಕ್ಷಾಂತರ ಭಕ್ತರು ಬರುತ್ತಾರೆ.ಶಿವರಾತ್ರಿ ಇಲ್ಲಿ ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ ಈ ಸಂದರ್ಭದಲ್ಲಿ ಗುಪ್ತೇಶ್ವರ ದೇವಾಲಯಕ್ಕೆ ಒಡಿಶಾ,ಆಂಧ್ರಪ್ರದೇಶ ಮತ್ತು ಛತ್ತೀಸ್ಗಢದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಛತ್ತೀಸ್ಗಢದ ಜನತೆ ಗುಪ್ತೇಶ್ವರನನ್ನು ಗುಪ್ತಕೇದಾರ ಎಂದು ಆರಾಧಿಸುತ್ತಾರೆ.ಗುಪ್ತೇಶ್ವರ ಒಂದು ವಿಶಿಷ್ಟ ಪ್ರವಾಸಿ ತಾಣವಾಗಿದ್ದು ಇದರ ಅನುಭವ ಗುಹೆಯೊಳಗೆ ಪ್ರವೇಶಿಸಿದಾಗ ಮಾತ್ರ ಸಿಗುತ್ತದೆ ಎನ್ನುತ್ತಾರೆ.
ಗುಪ್ತೇಶ್ವರ ಲಿಂಗವು ಆರು ಅಡಿ ಎತ್ತರ ಇದ್ದು ಸುಮಾರು 10 ಅಡಿ ಸುತ್ತಳತೆ ಹೊಂದಿದೆ.ಗುಪ್ತೇಶ್ವರನನ್ನು ಪೂಜಿಸುವ ಮೊದಲು ಮಹಾಕುಂಡದಲ್ಲಿ ಸ್ನಾನ ಮಾಡುತ್ತಾರೆ.ಗುಹೆಯು ರಾಮಗಿರಿ ಅರಣ್ಯ ವ್ಯಾಪ್ತಿಯಲ್ಲಿದ್ದು ಪ್ರಾಕೃತಿಕವಾದ ಗುಹೆಯಾಗಿದೆ. ಈ ದೇವಾಲಯವನ್ನು 200 ಮೆಟ್ಟಿಲುಗಳನ್ನು ಹತ್ತಿ ಲಿಂಗವನ್ನು ತಲುಪಬಹುದಾಗಿದ್ದು ಇದರ ಪ್ರವೇಶದ್ವಾರವು ಸುಮಾರು 3 ಮೀಟರ್ (9.8 ಅಡಿ) ಅಗಲ ಮತ್ತು 2 ಮೀಟರ್ (6.6 ಅಡಿ) ಎತ್ತರವಿದೆ.ಸಾಲುಗಟ್ಟಲೆ ಸಂಪಿಗೆ ಮರಗಳ ಸೌಂದರ್ಯ ಕಾಣಬಹುದಾಗಿದೆ.
ಒಡಿಶಾ ರಾಜ್ಯದ ಕೋರಾಪುಟ್ ಜಿಲ್ಲೆಯ ಹತ್ತಿರದ ಪಟ್ಟಣವಾದ ಜೈಪೊರ್ ಗೆ ಬಂದು ಅಲ್ಲಿಂದ ಸುಮಾರು 55 ಕಿಮೀ ದೂರದ ಪ್ರಯಾಣ ಮಾಡಬೇಕಿದೆ. ರಾಮಗಿರಿ ಬೆಟ್ಟದ ಪೂರ್ವದಿಂದ 19 ಕಿ.ಮೀ ದೂರದವರೆಗಿನ ಅರಣ್ಯ ಪ್ರದೇಶದ ಮೂಲಕ ಗುಪ್ತೇಶ್ವರವನ್ನು ತಲುಪಬಹುದು.ಕೋರಾಪುಟ್ ರೈಲ್ವೆ ಸ್ಟೇಷನ್ ನಿಂದ ಗುಪ್ತೇಶ್ವರ 82 ಕೀ.ಮಿ ಆಗುತ್ತದೆ. ಕರ್ನಾಟಕದಿಂದ ರೈಲಿನಲ್ಲಿ ಹೋಗುವರು ಬೆಂಗಳೂರಿನಿಂದ ಆಂಧ್ರದ ವಿಜಯನಗರಮ್ ರೈಲ್ವೆ ಜಂಕ್ಷನ್ ಗೆ ಹೋಗಿ ಅಲ್ಲಿಂದ ರೈಲಿನಲ್ಲಿ ನೇರವಾಗಿ ಜೈಪೊರ್ ಕ್ಕೆ ಹೋಗಬಹುದಾಗಿದೆ.ಮತ್ತೊಂದು ಆಯ್ಕೆಯಾಗಿ ಆಂಧ್ರದ ವಿಶಾಕಪಟ್ಟಣಮ್ ನಿಂದ ಕೊರಾಪುಟ್ ಗೆ ಸಾಕಷ್ಟು ರೈಲುಗಳು ಇವೆ.ಒಂದು ರೈಲು ಮಾತ್ರ ಜೈಪೊರ್ ದವರಿಗೂ ಹೋಗುತ್ತದೆ.
ಗುಪ್ತೇಶ್ವರ ತಲುಪಲು ಸಾರ್ವಜನಿಕ ಸಾರಿಗೆ ಲಭ್ಯವಿಲ್ಲ. ಜೈಪೊರ್ ದಿಂದ ವಾಹನಗಳನ್ನು ಬಾಡಿಗೆಗೆ ಪಡೆಯಬೇಕು. ಜೈಪೊರ್ ದಿಂದ 12 ಕಿ.ಮೀ ಪ್ರಯಾಣಿಸಿದ ನಂತರ ನೀವು ಪತ್ರಾಪುಟ್ ಸೇತುವೆಯನ್ನು ದಾಟಬೇಕು. ಸೇತುವೆಯನ್ನು ದಾಟಿದ ನಂತರ, ಅಲ್ಲಿಂದ ನೇರ ರಸ್ತೆಯು ನಿಮ್ಮನ್ನು ಗುಪ್ತೇಶ್ವರಕ್ಕೆ ಕರೆದೊಯ್ಯುತ್ತದೆ. ಹತ್ತಿರದಲ್ಲಿ ರಾತ್ರಿ ತಂಗುವ ಸೌಲಭ್ಯವಿಲ್ಲ. ಒರಿಸ್ಸಾ ಪ್ರವಾಸೋದ್ಯಮದ ನಿರ್ಮಿಸಿರುವ ಪ್ರವಾಸಿಗರ ಅತಿಥಿ ಗೃಹ ಇದೆಯಾದರೂ ತುಂಬಾ ಕಾಲದಿಂದ ಬಳಕೆಯಿಲ್ಲದ ಕಾರಣ ಶಿಥಿಲಾವಸ್ಥೆ ತಲುಪಿದೆ ಎಂಬ ಆರೋಪ ಇದೆ.ಆರೋಗ್ಯಕರ ಆಹಾರ ನೀಡುವ ಸಣ್ಣ-ಪುಟ್ಟ ಹೋಟೆಲ್ಗಳಿದ್ದರೂ ಹೈಫೈ ಹೋಟೆಲ್ ಅಥಾವ ಉಪಹಾರ ಗೃಹಗಳು ಇಲ್ಲ.
ಸಂದರ್ಶಕರಿಗೆ ಸಲಹೆಗಳು
ಗುಪ್ತೇಶ್ವರ ಗುಹೆಯು ಸಾಕಷ್ಟು ಉದ್ದವಾಗಿದ್ದು ಗುಹೆಯ ಪ್ರವೇಶದ್ವಾರವನ್ನು ತಲುಪಲು ಸುಮಾರು 170 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕಿದೆ ಪರಿಣಿತ ಮಾರ್ಗದರ್ಶಿಯನ್ನು ನೇಮಿಸಿಕೊಂಡು ಕರೆದುಕೊಂಡು ಹೋಗುವುದು ಉತ್ತಮ ಜೊತೆಗೆ ಶಕ್ತಿಯುತವಾದ ಟಾರ್ಚಲೈಟ್ ಗಳನ್ನು ತಗೆದುಕೊಂಡು ಹೋಗುವುದು ಒಳ್ಳೆಯದು ಇದು ನಿಮ್ಮಗೆ ಗುಹೆಯೊಳಗಿನ ವಿವಿಧ ರಚನೆಗಳನ್ನು ನೋಡಲು ಸಹಕಾರಿಯಾಗುತ್ತದೆ ಹಾಗೆ ಗುಹೆಯೊಳಗಿನ ವೈವಿದ್ಯಮಯವನ್ನು ತೋರಿಸಲು ಸ್ಥಳೀಯ ಸಣ್ಣ ವಯಸ್ಸಿನ ಮಕ್ಕಳು ನಿಮ್ಮನು ಚಿಕ್ಕ ಮೊತ್ತವನ್ನು ಕೇಳುತ್ತಾರೆ
ಗುಹೆಗೆ ತಲುಪುವುದು ಹೇಗೆ
ಈ ಸ್ಥಳವು ದಟ್ಟವಾದ ಕಾಡುಗಳ ನಡುವೆ ಇದ್ದು ತೇತ್ರಾಯುಗದ ಸಂಬಂಧ ಇರುವ ಹಿನ್ನಲೆಯಲ್ಲಿ ಈ ಸ್ಥಳವು ಒರಿಸ್ಸಾ,ಆಂಧ್ರಪ್ರದೇಶ ಮತ್ತು ಛತ್ತೀಸ್ಗಢದ ಭಾಗದಲ್ಲಿ ತೀರ್ಥಕ್ಷೇತ್ರವಾಗಿ ಪ್ರಸಿದ್ದಿ ಪಡೆದಿದೆ.ಯಾವುದೆ ಪುರಾತತ್ವ ಶಾಸ್ತ್ರದ ಅವಶೇಷಗಳು ಎನ್ನುವಮಾತಿದೆ.