ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನ ದೊಡ್ಡ ಮತ್ತು ಪ್ರತಿಷ್ಠಿತ ಪಂಚಾಯಿತಿಯಾಗಿ ಹಾಗು ವಾಣಿಜ್ಯ ಕೇಂದ್ರವಾಗಿ ಖ್ಯಾತಿ ಪಡೆದಿರುವ ಗೌವನಪಲ್ಲಿ ಯನ್ನು ಪಟ್ಟಣಪಂಚಾಯಿತಿಯನ್ನಾಗಿಸುವಂತೆ ಒತ್ತಾಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ ಹಲವಾರು ವರ್ಷಗಳಿಂದ ಗೌವನಪಲ್ಲಿ ಹಾಗು ಯಲ್ದೂರು ಎರಡು ಗ್ರಾಮಗಳನ್ನು ಪಟ್ಟಣ ಪಂಚಾಯನ್ನಾಗಿಸುವಂತೆ ಒತ್ತಾಯಿಸುವಂತ ಕಾರ್ಯ ಹಲವಾರು ವರ್ಷಗಳಿಂದ ಕೇಳಿ ಬಂದಿತ್ತಾದರು ಸ್ಥಳೀಯವಾಗಿ ರಾಜಕೀಯ ಬದ್ದತೆ ಇಲ್ಲದ ಕಾರಣ ನೆನೆಗುದಿಗೆ ಬಿದ್ದಿತ್ತು ರಾಯಲ್ಪಾಡು ಹೋಬಳಿಯ ಗೌವನಪಲ್ಲಿ ಗ್ರಾಮ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ ದಿನದಿನಕ್ಕೆ ದೊಡ್ಡ ಊರಾಗುತ್ತ ಅಕ್ಕಪಕ್ಕದ ಗ್ರಾಮಗಳನ್ನು ಸೇರಿಸಿಕೊಂಡು ಊರು ಬೆಳೆಯುತ್ತಿದೆ ಜೊತೆಗೆ ಭೂ ಲೇವಾದೇವಿ ವ್ಯವಾಹರ ಯಾವುದೆ ಪಟ್ಟಣ ನಗರ ಪ್ರದೇಶಗಳಿಗೂ ಕಡಿಮೆ ಇಲ್ಲದಂತೆ ಬೆಳೆದು ನಿಂತಿದೆ ಗ್ರಾಮದ ಸುತ್ತಲೂ ಮನೆ ನೀವೇಶನಗಳ ಲೇಔಟ್ ಗಳದೆ ಕಾರುಬಾರು ಇಲ್ಲಿನ ರಿಯಲ್ ಎಸ್ಟೇಟ್ ವ್ಯಾಪರವೂ ಜೋರು, ಊರ ತುಂಬಾ ವ್ಯಾಪಾರ ವ್ಯವಹಾರ ವಾಣಿಜ್ಯ ಚಟುವಟಿಕೆಗಳು ಮಂಗಳವಾರದ ಸಂತೆ ಗಡಿಯಾಚಗಿನ ಆಂಧ್ರಪ್ರದೇಶದಲ್ಲೂ ಖ್ಯಾತಿ ಪಡೆದಿದೆ ಇಲ್ಲಿನ ಸಿನಿಮಾ ಮಂದಿರದ ಕಲೆಕ್ಷನ್ ಯಾವ ಪಟ್ಟಣದ ಸಿನಿಮಾ ಮಂದಿರಕ್ಕೂ ಕಡಿಮೆ ಇಲ್ಲ ಈ ಎಲ್ಲಾ ಬೆಳವಣಿಗೆಯಲ್ಲಿ ಜನ ಸ್ವಾಭಾವಿಕವಾಗಿಯೇ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮಾರ್ಪಾಟು ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ. ಯಲ್ದೂರು ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ ಭೌಗೋಳಿಕವಾಗಿ ಸಾಕಷ್ಟು ದೊಡ್ದದಾಗಿರುವ ಗ್ರಾಮವಾಗಿದ್ದು ಶೀತರೆಡ್ದಿಹಳ್ಳಿ ಶೀಗಳ್ಳಿ ಸೇರಿದಂತೆ ಹಲವು ಗ್ರಾಮಗಳು ಯಲ್ದೂರಿಗೆ ಹೊಂದಿಕೊಂಡಿದೆ ಹೀಗಾಗಿ ಪಟ್ಟಣ ಪಂಚಾಯಿತಿಯಾಗುವ ಎಲ್ಲಾ ಅರ್ಹತೆಗಳನ್ನು ಪಡೆದಿದೆ ಎಂದು ಹೇಳುತ್ತಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಗೌವನಪಲ್ಲಿ ಜೆಡಿಎಸ್ ಮುಖಂಡ ಸ್ಥಳೀಯ ಉದ್ಯಮಿ ಅಮ್ಜಾದ್ ಖಾನ್ ಬೆಳಗಾವಿ ಸುವರ್ಣಸೌಧಕ್ಕೆ ಗಾಂಧಿ ಟೋಪಿ ಧರಿಸಿ ಪಾದಯಾತ್ರೆ ಮೂಲಕ ತೆರಳಿ ಗೌವನಪಲ್ಲಿ ಗ್ರಾಮವನ್ನು ಪಟ್ಟಣ ಪಂಚಾಯನ್ನಾಗಿಸುವಂತೆ ಸರ್ಕಾರವನ್ನು ಅಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಅವರು ಗೌವನಪಲ್ಲಿಯಿಂದ ಹೊರಟು 14 ದಿನಗಳ ಕಾಲ ಪಾದಯಾತ್ರೆ ಮೂಲಕ ತೆರಳಿ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವಂತ ಅಧಿವೇಶನದಲ್ಲಿ ಮುಖ್ಯಮಂತ್ರಿಯಾದಿಯಾಗಿ ಮಂತ್ರಿಗಳನ್ನು ಭೇಟಿಯಾಗಿ ವಾಣಿಜ್ಯ ಕೇಂದ್ರವಾಗಿ ಹೊರಹೊಮ್ಮಿರುವ ಗೌವನಪಲ್ಲಿಯನ್ನು ಪಟ್ಟಣಪಂಚಾಯಿತಿಯಾಗಿ ಘೋಷಿಸಬೇಕು ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಅಭಿವೃದ್ಧಿಗೆ ಒತ್ತುಕೊಡುವಂತೆ ಒತ್ತಾಯಿಸುವುದಾಗಿ ಹೇಳಿದ ಅವರು ಚೇಳೂರು ಅನ್ನು ತಾಲೂಕು ಕೇಂದ್ರವಾಗಿ ಮಾಡಿರುವ ಸರ್ಕಾರ ಗೌವನಪಲ್ಲಿಯನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡಬೇಕು ಎನ್ನುತ್ತಾರೆ.
ಈ ಸಂದರ್ಭದಲ್ಲಿ ಗೌವನಪಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶೇಷಾದ್ರಿ ಮುಖಂಡ ರಾಮಮೋಹನ್, ರಾಜೇಂದ್ರಪ್ರಸಾದ್, ಟಿಎಪಿಸಿಎಂ.ಎಸ್ ನಿರ್ದೇಶಕ ಬಕ್ಷುಸಾಬ್, ನಾಗೇಶ್ ಸೇರಿದಂತೆ ಹಲವಾರು ಮುಖಂಡರು ಅಮ್ಜಾದ್ ಖಾನ್ ಪಾದಯಾತ್ರೆಯಲ್ಲಿ ಸುಮಾರು 10 ಕೀ.ಮಿ ಪಾಲ್ಗೋಂಡು ಬೆಂಬಲ ವ್ಯಕ್ತಪಡಿಸಿ ಶುಭಕೋರಿದರು.