- ಜಾಲತಾಣಗಳ ಮೂಲಕ ಪೊಲಿಟಿಕಲ್ ಸ್ಟಾರ್
- ತೆಲಂಗಾಣ ಕೊಲ್ಲಾಪುರ್ ವಿಧಾನಸಭೆ ಕ್ಷೇತ್ರ
- ಘಟಾನುಘಟಿ ನಾಯಕರ ವಿರುದ್ದ ಸ್ಪರ್ದೆ
ನ್ಯೂಜ್ ಡೆಸ್ಕ್:ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ ಇದರ ನಡುವೆ ಕೊಲ್ಲಾಪುರ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ದಿಸಿರುವ ಕರ್ನೆಶಿರೀಶ@ ಬರ್ರೆಲಕ್ಕ ಎಂಬ ನಿರುದ್ಯೂಗ ಯುವತಿ ಹೆಸರು ಹಾಟ್ ಟಾಪಿಕ್ ಆಗಿದೆ,ಯುವ ಸಮುದಾಯ ಅಕೆಗೆ ದೊಡ್ದ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದೆ.
ತೆಲಂಗಾಣದ ಚುನಾವಣೆ ಕಣದಲ್ಲಿ ಕೊಲ್ಲಾಪುರ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಸಾಮಾನ್ಯ ಕೃಷಿ ಕುಟುಂಬದ ಯುವತಿ ಕರ್ನೆಶಿರೀಶ@ ಬರ್ರೆಲಕ್ಕ ಹೆಸರು ಈಗ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.
ತೆಲಂಗಾಣದಲ್ಲಿ ಈಗ ಎಲ್ಲೆಡೆ ಬರೆಲಕ್ಕನ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಬಡ ಕುಟುಂಬದಿಂದ ಬಂದಿರುವ 25 ವರ್ಷದ ಬರೆಲಕ್ಕ ಅಲಿಯಾಸ್ ಸಿರಿಶಾ ಚುನಾವಣಾ ಸ್ಟಾರ್ ಆಗಿದ್ದಾರೆ. ಆಕೆ ಸಾಮಾಜಿಕ ಜಾಲತಾಣಗಳ ಮೂಲಕ ಬಹಳ ಫೇಮಸ್ ಆಗಿದ್ದು ಎಷ್ಟೇ ಡಿಗ್ರಿ ಓದಿದರೂ ಕೆಲಸ ಸಿಗದ ಕಾರಣ ಎಮ್ಮೆ(ಬರ್ರೆಲು) ಕಾಯುತ್ತ ಮನೆಯಲ್ಲಿ ಅಡುಗೆ ಮಾಡಿಕೊಂಡು ಬದುಕುತ್ತಿದ್ದೇನೆ ಎಂದು ಅಪ್ಲೋಡ್ ಮಾಡಿದ್ದ ಆಕೆಯ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ಏಕಾಏಕಿ ಅಕೆಯನ್ನು ಸ್ಟಾರ್ ಮಾಡಿದೆ.ಜೊತೆಗೆ ಅಕೆಯನ್ನು ಜಾಲತಾಣಗಳಲ್ಲಿ ಬರೆಲ್ಲಕ್ಕ(ಎಮ್ಮೆಕಾಯೋಳು) ಎಂದು ಕರೆಯಲು ಪ್ರಚಾರ ಮಾಡಿದ ಹಿನ್ನಲೆಯಲ್ಲಿ ಬರೆಲ್ಲಕ್ಕ ಆಗಿದ್ದಾರೆ. ಒಬ್ಬ ಸಾಮಾನ್ಯನಿಗೆ.. ಮತ್ತೊಬ್ಬ ಸಾಮಾನ್ಯನಿಗೆ.ಎಂಬ ನಿನಾದೊಂದಿಗೆ ಅವರವರ ಮನಸ್ಸಿಗೆ ತೋಚಿದಂತೆ ಆಕೆಯನ್ನು ಆರ್ಥಿಕವಾಗಿ ಸೇರಿದಂತೆ ಎಲ್ಲಾ ರೀತಿಯಲ್ಲೂ ಬೆಂಬಲಿಸುತ್ತಿದ್ದಾರೆ.
ಕೊಲ್ಲಾಪುರದಲ್ಲಿ ನಾಮಪತ್ರ ಸಲ್ಲಿಸಿದಾಗ ಬರೆಲಕ್ಕ ಯಾರಿಗೂ ಗೊತ್ತಿರಲಿಲ್ಲ ಆಕೆಯ ಪ್ರಚಾರದ ಮೇಲೆ ದಾಳಿ ಆಕೆಯ ಸಹೋದರ ಮೇಲೆ ರಾಜಕೀಯ ದಾಳಿಗಳಾದ ಹಿನ್ನಲೆಯಲ್ಲಿ ಅಕೆ ನ್ಯಾಯಾಲಯದ ಮೋರೆ ಹೋಗಿ ಭದ್ರತೆ ಪಡೆದುಕೊಂಡು ಪ್ರಚಾರ ಶುರುಮಾಡಿದ ಪರಿಣಾಮ ನಿಜವಾದ ಆಟ ಶುರುವಾಯಿತು ಆಕೆಗೆ ಸಿಗುತ್ತಿರುವ ಜನ ಬೆಂಬಲ ನೋಡಿ ದೊಡ್ಡ ದೊಡ್ದ ನಾಯಕರ ಎದೆ ಬಡಿತ ಶುರುವಾಗಿದೆ. ಎರಡು ಮೂರು ದಿನಗಳ ಹಿಂದೆ ನೂರು ಕಾರುಗಳ ನಡುವೆ ಪ್ರಚಾರ ನಡೆಸಿದ್ದಾರೆ.
ಯಾರು ಈ ಬರೆಲಕ್ಕ
ಕರ್ನೆಶಿರೀಶ@ ಬರ್ರೆಲಕ್ಕ ತೆಲಂಗಾಣ ರಾಜ್ಯದ ನಾಗರ್ಕರ್ನೂಲ್ ಜಿಲ್ಲೆಯ ಪೆದ್ದಕೊತ್ತಪಲ್ಲಿ ಮಂಡಲ ಮಾರಿಕಲ್ ಗ್ರಾಮದ ನಿವಾಸಿ ಶಿರೀಶಳ ತಂದೆ ಕುಟುಂಬವನ್ನು ತೊರೆದಿದ್ದು ತಾಯಿಯೊಂದಿಗೆ ವಾಸಮಾಡುತ್ತ ಡಾ.ಬಿ.ಆರ್.ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ. ಪದವಿ ಪೂರ್ಣಗೊಳಿಸಿ ಸರ್ಕಾರಿ ಉದ್ಯೋಗ ಪಡೆಯಲು ತಯಾರಿ ನಡೆಸುತ್ತಿದ್ದ ಆಕೆ ತನ್ನ ಇನ್ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಹಾಯ್ ಫ್ರೆಂಡ್ಸ್ ಉನ್ನತ ಶಿಕ್ಷಣ ಓದಿದರೆ ಡಿಗ್ರಿ ಬರುವುದಿಲ್ಲ.. ಉದ್ಯೋಗವೂ ಸಿಗುವುದಿಲ್ಲ ಎಂದು ಹಾಕಿದ್ದ ವಿಡಿಯೋ ವೈರಲ್ ಆಗಿದ್ದು ಅಂದಿನಿಂದ ಜಾಲತಾಣದಲ್ಲಿ ಅಕೆಯನ್ನು ಫಾಲೊ ಮಾಡುತ್ತಿದ್ದವರ ಪಾಲಿಗೆ ಬರೆಲಕ್ಕ ಆಗಿದ್ದಾಳೆ.
ಹೀಗೆ ಪ್ರತಿ ದಿನ ಒಂದು ಹೊಸ ವಿಡೀಯೋ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುತಿದ್ದ ಶೀರಿಶ ಹೆಸರು ಮಾಡುತ್ತ ಜಾಲತಾಣಗಳಲ್ಲಿ ಖ್ಯಾತಳಾಗಿದ್ದಾಳೆ ಇದರ ನಡುವೆ ಚುನಾವಣೆಗೆ ಸ್ಪರ್ದಿಸಿದರೆ ಹೇಗೆ ಎಂದು ಜನರನ್ನು ‘ಹಾಯ್ ಫ್ರೆಂಡ್ಸ್ ಐ ಆಮ್ ಯುವರ್ ಬರೆಲಕ್ಕನೂ ಎಂದು ಯೂಟ್ಯೂಬ್ ವೀಡಿಯೋಗಳಿಂದ ಶುರು ಮಾಡಿ ವ್ಯವಸ್ಥೆ ಕುರಿತಾಗಿ ಒಂದೆಡೆ ಕಾಮಿಡಿ,ಇನ್ನೊಂದೆಡೆ ವಿಡಂಬನೆ ಮಾಡುತ್ತಾ ಜನಪ್ರಿಯತೆ ಗಳಿಸಿದ್ದ ಯುವತಿಗೆ ಕಷ್ಟಗಳನ್ನು ಎದುರಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು ಇದನ್ನು ಸಮರ್ಥವಾಗಿ ಎದುರಿಸಿ ನಿಂತ ಆಕೆ ಅದೆ ಸಮಯಕ್ಕೆ ಬಂದ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದಾಳೆ.ಕೈಯಲ್ಲಿಯೇ ರೂ. 5,000 ಹಣ ಮತ್ತು ಬ್ಯಾಂಕ್ ಖಾತೆಯಲ್ಲಿ ರೂ.1500 ಮೊತ್ತ ಇದೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿರುವ ಅಕೆ ನಿರುದ್ಯೋಗಿಗಳ ದನಿಯಾಗಲು ನಾಮಿನೇಟ್ ಮಾಡಿದ್ದೇನೆ,ಗೆದ್ದರೆ ವಿಧಾನಸಭೆ ಪ್ರವೇಶಿಸಿ ನಿರುದ್ಯೋಗಿಗಳ ಸಮಸ್ಯೆಗಳ ಪರವಾಗಿ ಹೋರಾಟ ನಡೆಸುವುದಾಗಿ ಹೇಳುತ್ತ ಕೊಲ್ಹಾಪುರ ಕ್ಷೇತ್ರದಲ್ಲಿ ಶಿರಿಶ ತನ್ನದೇ ಶೈಲಿಯಲ್ಲಿ ಪ್ರಚಾರ ಮಾಡುತ್ತಾ ಸಾಗುತ್ತಿದ್ದು ದೊಡ್ಡಮಟ್ಟದಲ್ಲಿ ಯುವ ಸಮುದಾಯ ಆಕೆಗೆ ಸಹಾಯಕ್ಕೆ ನಿಂತಿದ್ದಾರೆ. ತನ್ನ ವಿಧಾನಸಭಾ ಕ್ಷೇತ್ರಕ್ಕಾಗಿ ವಿಶೇಷ ಚುನಾವಣೆ ಪ್ರಣಾಳಿಕೆ ಮಾಡಿಕೊಂಡಿದ್ದು ಸಕಾಲದಲ್ಲಿ ಉದ್ಯೋಗ ಅಧಿಸೂಚನೆ ಹೊರಡಿಸುವುದು ಇಲ್ಲವಾದರೆ ಹೋರಾಟ ನಡೆಸುವುದಾಗಿ,ಬಡವರ ಮನೆ ನಿರ್ಮಾಣ ಹಾಗೂ ನಿರುದ್ಯೋಗ ನಿವಾರಣೆಗಾಗಿ ಹೋರಾಟ ಪ್ರಕಟಿಸಿದ್ದಾರೆ.
ಈ ನಡುವೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಶಿರೀಶ ಸಹೋದರನ ಮೇಲೆ ಕೆಲವರು ಹಲ್ಲೆ ನಡೆಸಿದ್ದು ಆಕೆಯನ್ನು ಕೊಂಚ ಗೊಂದಲಮಯವಾಗಿಸಿದೆ ಗದ್ಗತಿಳಾಗಿ ಮಾಧ್ಯಮಗಳ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿರೀಷಾಗೆ ಇನ್ನಷ್ಟು ಬೆಂಬಲ ಹೆಚ್ಚಾಗಿದೆ ಅನೇಕ ಸೆಲೆಬ್ರಿಟಿಗಳು ಬರೆಲಕ್ಕ ಶಿರೀಶಗೆ ಬೆಂಬಲ ನೀಡಿದ್ದಾರೆ. ಇಂತವರು ಗೆದ್ದರೆ ರಾಜಕೀಯದಲ್ಲಿ ಬದಲಾವಣೆ ಆಗಬಹುದು ಎಂಬ ಭರವಸೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.ಇನ್ನು ಕೆಲವರು ಅಕೆಯ ಚುನಾವಣೆ ಖರ್ಚಿಗೆ ದೇಣಿಗೆ ಸಹ ನೀಡುತ್ತಿದ್ದಾರೆ.
ಇದರ ನಡುವೆ ಕೆವಲ ಸಾಮಾಜಿಕ ಜಾಲತಾಣಗಳಲ್ಲಷ್ಟೆ ಮಾತನಾಡುತ್ತಿದ್ದ ಶಿರೀಷಾ ಮಾಧ್ಯಮಗಳ ಚರ್ಚಾಗೋಷ್ಠಿಳಲ್ಲಿ ಭಾಗವಹಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಅಕೆಯ ಧೈರ್ಯವನ್ನು ಮೆಚ್ಚಿದ್ದ ತೆಲಗು ಸಿನಿಮಾ ನಾಯಕನಟ ರಾಜ ಸಿರಿಶಾಗೆ ಬೆಂಬಲ ವ್ಯಕ್ತಪಡಿಸಿದ್ದಲ್ಲದೆ ಅಕೆಯ ಪರವಾಗಿ ಮತದಾರರಲ್ಲಿ ಮನವಿ ಮಾಡಿ ಗೆಲ್ಲಿಸುವಂತೆ ಹೇಳಿದ್ದಾರೆ ಕನಿಷ್ಠ ಪ್ರಚಾರಕ್ಕೂ ಅವಕಾಶ ನೀಡುತ್ತಿಲ್ಲ ಎಂದು ರಾಜ ಬೇಸರ ವ್ಯಕ್ತಪಡಿಸಿ ಸಿರಿಶಾ ಅವರ ಧೈರ್ಯವನ್ನು ಮೆಚ್ಚಲೇಬೇಕು ಅಂತಹವರು ಗೆದ್ದರೆ ಯುವಕರಲ್ಲಿ ಹೊಸ ಪ್ರಜ್ಞೆ ಮೂಡುತ್ತದೆ ಎಂದಿರುತ್ತಾರೆ. ರಾಜಾ ಮೂಲತಃ ಕಾಂಗ್ರೆಸ್ ಪಕ್ಷದ ಬೆಂಬಲಿಗರಾದರೂ ಕಾಂಗ್ರೆಸ್ ಅಧಿಷ್ಠಾನಕ್ಕೆ ಸೆಡ್ಡು ಹೊಡೆದು ಚುನಾವಣೆಯಲ್ಲಿ ಶಿರೀಷಾ ಗೆಲ್ಲಲಿ ಎಂದು ರಾಜಾ ಹೇಳಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಈ ಮದ್ಯೆ ಪುದುಚೇರಿಯ ಯಾಣಂ ಕ್ಷೇತ್ರದ ಶಾಸಕ ಕೃಷ್ಣಪ್ರಸಾದ್ ಶಿರಿಷಾ ಚುನಾವಣೆ ಖರ್ಚಿಗೆ ಒಂದು ಲಕ್ಷ ಹಣ ಸಹಾಯ ಮಾಡಿದ್ದಾರೆ.
ಕರ್ನೆಶಿರೀಶ@ ಬರ್ರೆಲಕ್ಕ ಸ್ಪರ್ದಿಸಿರುವುದು ಪ್ರಭಾವಿಗಳ ವಿರುದ್ದ
ಕೊಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಿರುವ ಕರ್ನೆಶಿರೀಶ@ ಬರ್ರೆಲಕ್ಕ ತೆಲಂಗಾಣದ ಪ್ರಭಾವಿ ರಾಜಕಾರಣಿಗಳ ವಿರುದ್ದ
ಕ್ಷೇತ್ರದ ಹಾಲಿ ಶಾಸಕ ಬೀರಂ ಹರಹನವರ್ಧನ ರೆಡ್ಡಿ ಅಧಿಕಾರ ಪಾರ್ತಿ ಬಿ.ಆರ್.ಎಸ್ ಶಾಸಕ ಸ್ಪರ್ಧಿಸಿದ್ದರೆ. ಪ್ರಭಾವಿ ಕಾಂಗ್ರೆಸ್ ಮುಖಂಡ ಕಾಂಗ್ರೆಸ್ ನಿಂದ ಜೂಪಲ್ಲಿ ಕೃಷ್ಣರಾವ್ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಅಲ್ಲೇನಿ ಸುಧಾಕರ್ ರಾವ್ ಕಣಕ್ಕೆ ಇಳಿದಿದ್ದಾರೆ. ದಿಗ್ಗಜ ನಾಯಕರಿಗೆ ಪೈಪೋಟಿ ನೀಡಲು ಬ್ಯಾರೆಲಕ್ಕ ಕಣಕ್ಕೆ ಇಳಿದು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ರಾಜಕೀಯ ಲೆಕ್ಕಾಚಾರ ಏನು?
ಆಡಳಿತಾರೂಡ ಬಿ.ಆರ್.ಎಸ್ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಇದೆ ಇದನ್ನು ಬಳಸಿಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ಗೆಲ್ಲುವ ಲೆಕ್ಕಾಚಾರ ಇಟ್ಟುಕೊಂಡಿದ್ದವು ಆದರೆ ಬರೆಲಕ್ಕನಿಂದಾಗಿ ಮತ ವಿಭಜನೆಯಾಗುವ ಸಾಧ್ಯತೆ ಹೆಚ್ಚಾಗಿದ್ದು ಅದರಲ್ಲೂ ನಿರುದ್ಯೋಗಿಗಳ ಧ್ವನಿ ಎನ್ನುತ್ತಿರುವ ಬರೆಲಕ್ಕ ಮಾತುಗಳು ವರ್ಕೌಟ್ ಆದರೆ ಕಾಂಗ್ರೆಸ್ ಅಭ್ಯರ್ಥಿಗೆ ಸಂಕಷ್ಟ ಎದುರಾಗಿ ಬಿ.ಆರ್.ಎಸ್ ಅಭ್ಯರ್ಥಿಯ ಗೆಲುವಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ರಾಜಕೀಯ ಪಂಡಿತರ ಲೆಕ್ಕಚಾರ.
ಸಾಮಜಿಕ ಜಾಲತಾಣಗಳಲ್ಲಿ ಬರೆಲಕ್ಕ ಸ್ಟಾರ್
ಕರ್ನೆಶಿರೀಶ@ ಬರ್ರೆಲಕ್ಕ ತನ್ನ ಇನ್ಸ್ಟಾಗ್ರಾಮ್ನಲ್ಲಿ 5.73 ಲಕ್ಷ, ಫೇಸ್ಬುಕ್ನಲ್ಲಿ 1.07 ಲಕ್ಷ ಮತ್ತು ಯೂಟ್ಯೂಬ್ನಲ್ಲಿ 1.61 ಲಕ್ಷ ಸಬ್ಸ್ಕ್ರೈಬರ್ಗಳನ್ನು ಹೊಂದಿದ್ದಾರೆ.ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊಗೆ ಸಂಬಂಧಿಸಿದಂತೆ ಆಕೆಯ ವಿರುದ್ಧ ಪ್ರಕರಣ (IPC 505 (2) ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.