ಶ್ರೀನಿವಾಸಪುರ: ಸಾರ್ವಜನಿಕರ ಅನಕೂಲಕ್ಕಾಗಿ ತಹಶೀಲ್ದಾರ್ ಕಛೇರಿಯಲ್ಲಿರುವ ಕೆಲ ಕೌಂಟರುಗಳನ್ನು ಹಳೇಯ ತಾಲೂಕು ಕಚೇರಿ ಆವರಣಕ್ಕೆ ಶೀಫ್ಟ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆಕ್ರಂಪಾಷ ತಿಳಿಸಿದರು.
ಪಟ್ಟಣದ ಪಶುಪಾಲನ ಕಛೇರಿ ಹಾಗು ತಹಶೀಲ್ದಾರ್ ಕಛೇರಿ ಕಟ್ಟಡ ಹಾಗು ಸಿಸಿ ರಸ್ತೆ ಕಾಮಗಾರಿ ವೀಕ್ಷಣೆ ಮಾಡಲು ಶ್ರೀನಿವಾಸಪುರಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಮಾತನಾಡಿದರು.
ಸಾರ್ವಜನಿಕರ ಅರ್ಜಿಗಳನ್ನು ತ್ವರಿತ ಗತಿಯಲಿಲ್ಲಿ ವಿಲೆವಾರಿ ಮಾಡಲು ಅನಕೂಲವಾಗುವಂತೆ ಹೆಚ್ಚುವರಿ ಕೌಂಟರುಗಳನ್ನು ಅನಾವರಣಗೊಳಿಸುತ್ತಿರುವುದಾಗಿ ತಹಶೀಲ್ದಾರ್ ಕಛೇರಿ ಆವರಣದಲ್ಲಿ ದ್ವಿಚಕ್ರವಾಹನಗಳು ಹಾಗೂ ಕಾರುಗಳನ್ನು ಅಡ್ಡದಡ್ಡಿಯಾಗಿ ನಿಲ್ಲಿಸಿರುತ್ತಾರೆ ಇದರಿಂದ ಸಾರ್ವಜಕಿರ ಓಡಾಟಕ್ಕೆ ತೊಂದರೆಯಾಗಿದ್ದು ಸರ್ಕಾರಿ ಅಧಿಕಾರಿಗಳ ಸರ್ಕಾರಿ ವಾಹನ ನಿಲ್ಲಿಸಲು ಸ್ಥಳಾವಕಾಶ ಇಲ್ಲದಂತಾಗಿದೆ ದ್ವಿಚಕ್ರವಾಹನಗಳನ್ನು ಶಿಸ್ತಾಗಿ ಸರತಿ ಸಾಲಿನಲ್ಲಿ ನಿಲ್ಲಿಸುಲು , ಅಧಿಕಾರಿಗಳ ಕಾರುಗಳನ್ನು ಹೊರತು ಪಡಿಸಿ ಸಾರ್ವಜನಿಕರ ಕಾರುಗಳನ್ನು ಅವರಣದೊಳಗೆ ನಿಲ್ಲಿಸದಂತೆ ಸೇಕ್ಯೂರಿಟಿ ಗಾರ್ಡ್ ಗಳ ಸಹಕಾರ ಪಡೆಯಲು ಪೊಲೀಸ್ ಅಧಿಕಾರಿಗೆ ಸೂಚಿಸಿದರು.
ಪಶು ಪಾಲನ ಇಲಾಖೆಗೆ ನೇರ ರಸ್ತೆಗೆ ಮನವಿ
ಪಶು ಪಾಲನ ಇಲಾಖೆ ಕಛೇರಿಗೆ ಬೇಟಿ ನೀಡಿದ ಜಿಲ್ಲಾಧಿಕಾರಿಗೆ ಪಶುಪಾಲನ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಕಛೇರಿಗೆ ಹೋಗಿ ಬರಲು ದಾರಿಯಲ್ಲದಂತಾಗಿದೆ ತಾಲೂಕು ಕಚೇರಿ ಕಾಂಪೌಂಡ್ ಸುತ್ತಿಕೊಂಡು ಬರಬೇಕಾದ ಅನಿವಾರ್ಯತೆ ಇದ್ದು ಜನರು ಒಡಾಡಲು ಸಾಧ್ಯವಾಗುತ್ತಿಲ್ಲ ಇಂತಹ ಇಕ್ಕಾಟ್ಟಾದ ಜಾಗದಲ್ಲಿ ಜಾನುವಾರುಗಳನ್ನು ಚಿಕಿತ್ಸೆಗೆ ಕರೆತರಲು ಪಶುಪಾಲಕರಿಗೆ ಹರಸಾಹಸ ಬಿಳುತ್ತಿದ್ದಾರೆ ಇದನ್ನು ತಪ್ಪಿಸಲು ಎಂ.ಜಿ.ರಸ್ತೆಯಿಂದ ಪಶು ಆಸ್ಪತ್ರೆಗೆ ನೇರ ರಸ್ತೆ ಮಾಡಲು ಇದಕ್ಕೆ ಅಡ್ಡ ಇರುವಂತ ಸಾರ್ವಜನಿಕ ಶೌಚಾಲಯ ತೆರವು ಗೊಳಿಸಿ ಬೇರೆಡೆಗೆ ಸ್ಥಳಾಂತರ ಗೊಳಿಸುವಂತೆ ಪಶುಪಾಲನ ಇಲಾಖೆ ವೈದ್ಯರು ಮನವಿ ಮಾಡಿದರು ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಪಶುಪಾಲಾನ ಇಲಾಖೆಗೆ ಹೋಗಿಬರಲು ಅನುಕೂಲವಾಗುವಂತೆ ಶೌಚಾಲಯವನ್ನು ಬೇರೆಡೆಗೆ ಸ್ಥಳಾಂತರಿಸಲು ತಹಶೀಲ್ದಾರ್ ಅವರಿಗೆ ಸೂಚಿಸಿ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ಪಾರ್ಕನಲ್ಲಿ ಸ್ವಚ್ಚತೆಯನ್ನು ಕಾಪಾಡುವಂತೆ ಹೇಳಿದರು.
ಪೊಲೀಸ್ ಠಾಣೆಗೆ ಬೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತಾಗಿ ಮಾಹಿತಿ ಪಡೆದ ಜಿಲ್ಲಾಧಿಕಾರಿ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿ ಅಪಘಾತಕ್ಕೆ ಒಳಗಾದ ಹಾಗು ಇತರೆ ಪ್ರಕರಣಗಳಿಗೆ ಸಂಬಂದಿಸಿದ ವಾಹನಗಳನ್ನು ತೆರವುಗೊಳಿಸಿ, ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ಸಲಹೆ ಇತ್ತರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಎನ್.ಸುದೀಂದ್ರ, ವೃತ್ತ ನಿರೀಕ್ಷಕ ಎಂ.ಬಿ.ಮೆಹಬೂಬ್,ಪಶುಪಾಲನ ಸಹಾಯಕ ನಿರ್ದೇಶಕ ಡಾ.ಮಂಜುನಾಥರಡ್ಡಿ , ಡಾ|| ವಿಶ್ವನಾಥ್, ಉಪತಹಶೀಲ್ದಾರ್ ಕೆ.ಎಲ್.ಜಯರಾಮ್, ಶಿರಸ್ತೇದಾರ್ ಬಲರಾಮಚಂದ್ರೆಗೌಡ, ಆರ್ಐ ಮುನಿರೆಡ್ಡಿ, ಪುರಸಭೆ ಇಂಜನೀಯರ್ ಶ್ರೀನಿವಾಸ್ ವ್ಯವಸ್ಥಾಪಕ ನವೀನ್ ಚಂದ್ರ ಮುಂತಾದವರು ಇದ್ದರು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Friday, November 22