ನ್ಯೂಜ್ ಡೆಸ್ಕ್: ಬಹುತೇಕರು ಬಡತನದಿಂದಲೆ ದುಡಿದು ಹಣ ಗಣಗಳಿಸಿರಬಹುದು ಹಣ ಎಲ್ಲರ ಬಳಿ ಇರಬಹುದು ಅನಕೂಲವಂತ ಶ್ರೀಮಂತ ಸಿರಿವಂತ ಎಲ್ಲವೂ ಆಗಿರಬಹುದು ಆದರೆ ನಾನು ಹುಟ್ಟಿದ ನೆಲದ ಋಣ ತೀರಿಸಲು ಇಲ್ಲೊಬ್ಬ ಸಿರಿವಂತ ತಾನು ಹುಟ್ಟಿ ಆಡಿ ಬೆಳೆದ ತನ್ನೂರಿನ ಋಣ ತೀರಿಸಲು ಮುಂದಾಗಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಬೆಟ್ಟಗುಡ್ಡಗಳ ನಡುವೆ ಇರುವ ಪುಟ್ಟ ಗ್ರಾಮ ವೀರಕಪುತ್ರ,ಈ ಗ್ರಾಮದಲ್ಲಿ ಸುತ್ತಲೂ ನಿತ್ಯವೂ ಕಾಡುಪ್ರಾಣಿಗಳ ಓಡಾಟ ಇದೆ ಇಲ್ಲಿನ ಜನ ನಿತ್ಯ ಆತಂಕದಲ್ಲಿ ಕಾಲ ಕಳೆಯುವಂತ ಪರಿಸ್ಥಿತಿ ಇದೆ, ಜೊತೆಗೆ ಹಗಲು ರಾತ್ರಿ ಗ್ರಾಮದ ಸುತ್ತಲೂ ಕಲ್ಲು ಕ್ವಾರಿ ಬ್ಲಾಸ್ಟಿಂಗ್ ನಡೆಯುತ್ತಿರುತ್ತದೆ.ರಾತ್ರಿಯಾಯಿತು ಎಂದರೆ ಇನ್ನಷ್ಟು ಆತಂಕ ಇಲ್ಲಿನ ಜನರಿಗೆ ಇದನ್ನು ಸ್ವತಃ ಅರಿತಿದ್ದ ಇದೇ ಊರ್ಇನ ವೀರಕಪುತ್ರಶ್ರೀನಿವಾಸ್ ತನ್ನೂರಿನ ಎಲ್ಲಾ ಬೀದಿಗಳಿಗೆ 15 ಸೋಲಾರ್ ದೀಪಗಳನ್ನು ಅಳವಡಿಸಿದ್ದಾರೆ.
ಗ್ರಾಮಕ್ಕೆ ಸೋಲಾರ್ ದೀಪಗಳ ಕೊಟ್ಟು ಧನ್ಯತೆ ಮೆರೆದ ವಿಷ್ಣು ಅಭಿಮಾನಿ
ವೀರಕಪುತ್ರಶ್ರೀನಿವಾಸ್ ಹೆಸರು ಸಿನಿಮಾ ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಪ್ರವರ್ದಮಾನಕ್ಕೆ ಬರುತ್ತಿರುವ ಹೆಸರು ಇವರ ಸ್ವಗ್ರಾಮ ವೀರಕಪುತ್ರ ಊರನ್ನು ಬಿಟ್ಟು 20 ವರ್ಷಗಳ ಹಿಂದೆ ಬೆಂಗಳೂರು ಸೇರಿಕೊಂಡರಾದರು ಊರಿನ ಹೆಸರನ್ನು ಜೊತೆಗಿಟ್ಟುಕೊಂಡು ವೀರಕಪುತ್ರಶ್ರೀನಿವಾಸ್ ಆಗಿದ್ದು ಜೊತೆಗಿಟ್ಟುಕೊಂಡಿರುವ ತನ್ನೂರಿಗೆ ಏನಾದರೂ ಮಾಡಲೇ ಬೇಕು ಅನ್ನೋ ತುಡಿತ ಹೊಂದಿರುವ ಯುವ ಉದ್ಯಮಿ ತನ್ನ ಗ್ರಾಮದ ಜನರ ಹಾಗೂ ತನ್ನ ಬಾಲ್ಯದ ಸ್ನೇಹಿತರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದಾರೆ. ಅದರ ಜೊತೆ ಜೊತೆಗೆ ರಾಜಧಾನಿ ಬೆಂಗಳೂರು ಸೇರಿ ಹಲವಾರು ರಂಗಗಳಲ್ಲಿ ತೊಡಗಿಸಿಕೊಂಡು ಒಂದು ಹಂತಕ್ಕೆ ಬೆಳೆದಿದ್ದಾರೆ ತನ್ನೂರಿನ ಮೇಲಿರುವ ಕಾಳಜಿಯ ಮೊದಲನೆ ಹಂತ ಎಂಬುವಂತೆ ನಿಂತಿರುವ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ತಾನು ಹುಟ್ಟಿದ ಊರಿಗೆ ಸೂರ್ಯವಂಶದ ಅಭಿಮಾನಿಯಾಗಿ ಸೂರ್ಯನ ಬೆಳಕು(solar lamps) ನೀಡಿದ್ದಾರೆ.
ಬೆಂಗಳೂರು ಸೇರಿದ್ದ ಅವರು ಬದುಕು ಕಟ್ಟಿಕೊಂಡಿದ್ದಲ್ಲದೆ ತಮ್ಮ ಅಭಿಮಾನ ತಾರೆ ಸಾಹಸಸಿಂಹ ವಿಷ್ಣು ಮೇಲಿನ ಅಭಿಮಾನದಿಂದ ಡಾ.ವಿಷ್ಣುವರ್ಧನ್ ಆವರ ಹೆಸರು ಚಿರಸ್ಥಾಯಿಯಾಗಿರಬೇಕು ಎಂದು ರೂಪಕಲ್ಪನೆ ಕೊಟ್ಟು ಅದಕ್ಕಾಗಿ ಬಂದಂತ ಸಮಸ್ಯೆಗಳನ್ನು ಧಿಟ್ಟತನದಿಂದ ಎದುರಿಸಿ ಧೈರ್ಯದಿಂದ ಮುನ್ನುಗ್ಗುತ್ತಿರುವ ಶ್ರೀನಿವಾಸ್ ಡಾ.ವಿಷ್ಣುವರ್ಧನ್ ಸ್ಮಾರಕ ಬೆಂಗಳೂರಿನಲ್ಲೆ ಉಳಿಯಬೇಕು ಎಂದು ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿರುವ ಅವರ ಶ್ರಮ ಅನನ್ಯ,ಇದನ್ನು ಹೊರತು ಪಡಿಸಿ ಒಂದಷ್ಟು ಕುಟುಂಬಗಳಿಗೆ ಬದಕು ಕಟ್ಟಿಕೊಟ್ಟು, ಕನ್ನಡ ಸಾಹಿತಿಗಳಿಗೆ ಹಾಗು ಸಾಹಿತ್ಯಾಸಕ್ತಿಗರ ನಡುವೆ ವೀರಲೋಕ ಎಂಬ ಸೇತುವೆ ಕಟ್ಟಿ ನೂರಾರು ಸಾಹಿತಿಗಳ ಪುಸ್ತಕಗಳನ್ನು ತಮ್ಮ ಸಂಸ್ಥೆಯ ಮೂಲಕ ಬಿಡುಗಡೆ ಮಾಡುವ ಮೂಲಕ ಸಾಹಿತ್ಯ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಚಿತ್ರರಂಗದ ಹಲವು ಸೇವಾ ಕಾರ್ಯಗಳಲ್ಲೂ ಕಾಣಿಸಿಕೊಳ್ಳುತ್ತಾರೆ ವೀರಕಪುತ್ರ ಶ್ರೀನಿವಾಸ್.ಸದಾಕಾಲ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ವಿಷ್ಣು ಅಭಿಮಾನಿಗಳ ಪ್ರಿತೀಯ ಸೇನಾನಿ.