ನ್ಯೂಜ್ ಡೆಸ್ಕ್:ಮಾಯನಗರಿ ಬೆಂಗಳೂರಿಗೆ ಯಾರೆಲ್ಲ ಬರ್ತಾರೆ ಅವರಿಗೆಲ್ಲ ಬದುಕಿನಬುಟ್ಟಿ ಕಟ್ಟಿಕೊಳ್ಳಲು ಬೆಂಗಳೂರು ಸದಾಕಾಲ ಅವಕಾಶ ಮಾಡಿಕೊಡುತ್ತದೆ ಅದೆ ಬೆಂಗಳೂರಿನ ವೈಶಿಷ್ಟ ಕೂಡ ಹೌದು,ಇಲ್ಲಿನ ಜನರ ಔದಾರ್ಯವು ಸಹಕಾರಿ.ಹಾಗೆ ದಶಕಗಳ ಹಿಂದೆ ರಾಜಾಸ್ತಾನನಿಂದ ಬೆಂಗಳೂರಿಗೆ ಬಂದಂತಹ ವ್ಯಕ್ತಿ ಇಲ್ಲೆ ನೆಲೆ ನಿಂತು ಜೀವನ ಮಾಡುತ್ತ ಬದುಕಲು ಬಟ್ಟೆ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದವ ಮೊನ್ನೆ ರಾಜಸ್ಥಾನದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ಚಿಕ್ಕಪೇಟೆಯಲ್ಲಿ ಜವಳಿ ಸಂಬಂದಿಸಿದ ಉದ್ಯಮ ಹೊಂದಿರುವ ಲಾಡು ಲಾಲ್ ಪಿತಲಿಯಾ (ladu lal Pitliya) ಅವರು ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಹರಾ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿ ಗೆದ್ದು ರಾಜಸ್ಥಾನ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ರಾಜಾಜಿನಗರದ 2ನೇ ಬ್ಲಾಕ್ನ ಜುಗನಹಳ್ಳಿಯಲ್ಲಿ ವಾಸವಾಗಿ ಚಿಕ್ಕಪೇಟೆಯಲ್ಲಿ ದೊಡ್ಡ ಮಟ್ಟದ ಜವಳಿ ಉದ್ಯಮ ಹೊಂದಿರುವ 52 ವರ್ಷದ ಲಾಡು ಲಾಲ್ ಪಿತಲಿಯಾ (ladu lal Pitliya) ಅವರು ಚುನಾವಣೆಗೆ ನೀಡಿರುವ ಆಸ್ತಿವಿವರಗಳಲ್ಲಿ ದೇವನಹಳ್ಳಿ ಬಳಿಯ ಕೃಷಿ ಜಮೀನು ಬೆಂಗಳೂರುನಗರದಲ್ಲಿ ಸುಲ್ತಾನಪೇಟ್, ಹಾಗು ದೌಲತ್ ಪೇಟ್ ನಲ್ಲಿ ಕಮರ್ಷಿಯಲ್ ಆಸ್ತಿಗಳನ್ನು ಹೊಂದಿರುವುದಾಗಿ ರಾಜಾಜಿನಗರದ ಎಸ್.ಬಿ.ಐ ಬ್ಯಾಂಕಿನಲ್ಲಿ ಚಿಕ್ಕಪೇಟೆಯ ಐಸಿಐಸಿ ಬ್ಯಾಂಕುಗಳಲ್ಲಿ ಖಾತೆಗಳು ಇರುವುದಾಗಿ ಘೋಷಣೆಯಲ್ಲಿ ಹೇಳಿದ್ದಾರೆ.
ಚುನಾವಣೆಯಲ್ಲಿ ರಾಜಸ್ಥಾನದ ಬಿಲ್ವಾರ ಜಿಲ್ಲೆಯ ಸಹರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದರು. ಪ್ರಕಟವಾದ ಫಲಿತಾಂಶದಲ್ಲಿ ಲಾಡು ಲಾಲ್ 1.17 ಲಕ್ಷ ಮತ ಪಡೆದು 62 ಸಾವಿರ ಮತಗಳ ಅಂತರದಿಂದ ಗೆಲವು ಸಾದಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ನ ರಾಜೇಂದ್ರ ತ್ರಿವೇದಿ 54684 ಮತಗಳನ್ನು ಪಡೆದು ಸೋತಿರುತ್ತಾರೆ.
ಲಾಡುಲಾಲ್ ಪಿತಲಿಯಾ ರಾಜಕೀಯ ಹಿನ್ನಲೆ ಬಿಜೆಪಿಯಲ್ಲಿದ್ದ ಪಿತಾಲಿಯಾ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನಿರಾಕರಿಸಿದ ಹಿನ್ನಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು 30,573 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರು. ನಂತರ ಪಿತಲಿಯಾ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.ಇದೇ ಸಹರಾ ಕ್ಷೇತ್ರದಲ್ಲಿ 2021ರಲ್ಲಿ ಉಪಚುನಾವಣೆ ನಡೆದಾಗ ಉಪಚುನಾವಣೆಗೆ ಬಿಜೆಪಿ ರತನ್ಲಾಲ್ ಜಾಟ್ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿದಾಗ, ಪಿತಲಿಯಾ ಮತ್ತೆ ಸ್ವತಂತ್ರವಾಗಿ ನಾಮಪತ್ರ ಸಲ್ಲಿಸಿದರು ಲಾಡು ಲಾಲ್ ಪಕ್ಷೇತರರಾಗಿ ಸ್ಪರ್ಧಿಸಿದ್ದರಾದರೂ ಬಿಜೆಪಿ ಒತ್ತಡ ಹೇರಿದ್ದರಿಂದ ನಾಮಪತ್ರ ಹಿಂಪಡೆದುಕೊಂಡು ಬಿಜೆಪಿ ತನ್ನ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿ ಅಂದಿನ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಗೆ ಪತ್ರ ಬರೆದು ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಕೋರಿದ್ದರು,ಆದರೆ 2023 ಚುನಾವಣೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಸಹಕಾರದಿಂದ ಲಾಡು ಲಾಲ್ ಬಿಜೆಪಿಯಿಂದ ಕಣಕ್ಕೆ ಇಳಿದು ಗೆಲುವು ಸಾಧಿಸಿದ್ದಾರೆ. ಬೆಂಗಳೂರಲ್ಲಿನ ಅವರ ಉದ್ಯಮವನ್ನು ಸದ್ಯಕ್ಕೆ ಅವರ ಮಕ್ಕಳು ಮುನ್ನಡೆಸುತ್ತಿದ್ದಾರೆ.
ಲಾಡು ಲಾಲ್ ಅವರು ರಾಜಾಜಿ ನಗರದ ಸ್ಥಳೀಯ ಶಾಸಕ ಮಾಜಿ ಮಂತ್ರಿ ಎಸ್.ಸುರೇಶ್ ಕುಮಾರ್ ಅವರಿಗೆ ಆಪ್ತರು ಎನ್ನಲಾಗಿದ್ದು ನಮ್ಮ ಕ್ಷೇತ್ರದಲ್ಲಿ ಮತ್ತೊಬ್ಬರು ಶಾಸಕರು ಇದ್ದಾರೆ ಎಂದಿರುವ ಸುರೇಶ್ ಅವರು ಲಾಡು ಲಾಲ್ ಅವರಿಗೆ ಅಭಿನಂದಿಸಿರುತ್ತಾರೆ.