ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಆವಲಕುಪ್ಪ ಗ್ರಾಮ ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳಾದ ನಂತರ ಡಾಂಬರು ರಸ್ತೆ ಭಾಗ್ಯ ಕಂಡಿತು, ಆದರೆ ಈ ರಸ್ತೆಯಲ್ಲಿ ಆವಲಕುಪ್ಪ ಗ್ರಾಮಸ್ಥರು ಓಡಾಡಿದ್ದಕ್ಕಿಂತ ಪುಂಗನೂರು ರಸ್ತೆಯಲ್ಲಿರುವ ಗ್ರಾಮಗಳ ಜನರು ಒಡಾಡಿದ್ದೆ ಹೆಚ್ಚು.
ಇವತ್ತು ಈ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ ರಸ್ತೆಯಲ್ಲಿ ಒಡಾಡಲು ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
ತಾಲೂಕಿನ ಗಡಿಯಂಚಿನ ಆಂಧ್ರದ ಚಂಬಕೂರು,ರಾಮಸಮುದ್ರಂ ಸೇರಿದಂತೆ ತಾಲೂಕಿನ ಸೋಮಯಾಜಲಹಳ್ಳಿ,ಪುಲಗೂರಕೋಟೆ ಲಕ್ಷ್ಮೀಪುರ ಭಾಗದ ಜನತೆ ಶ್ರೀನಿವಾಸಪುರ ಪಟ್ಟಣಕ್ಕೆ ಬರಲು ಇದೆ ರಸ್ತೆಯನ್ನು ಬಳಸಿಕೊಳ್ಳುತ್ತಾರೆ ಆದರೆ ಈ ರಸ್ತೆ ಈಗ ಹಳ್ಳ ಕೊಳ್ಳ,ಗುಂಡಿಗಳಿಂದ ಕೂಡಿದ್ದಾಗಿದೆ,ತಿರುವುಗಳಲ್ಲಿ ದ್ವಿಚಕ್ರವಾಹನ ಸವಾರ ಅನಾಮತ್ತು ಕೆಳಗೆ ಬೀಳುವಷ್ಟು ಹಾಳಾಗಿದೆ,ರಸ್ತೆಯಲ್ಲಿ ಲಾರಿಗಳು ಟ್ರಾಕ್ಟರಗಳು ಮರಳು ವಾಹನಗಳು ಓಡಾಡಿದ ಪರಿಣಾಮ ನಿರ್ವಹಣೆ ಇಲ್ಲದೆ ರಸ್ತೆ ಕಿತ್ತುಹೋಗಿದೆ ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗದ್ದೆಯಂತಾದರೆ ಇತರೆ ಕಾಲದಲ್ಲಿ ಜನರ,ಮುಖಕ್ಕೆ ಧೂಳಿನ ನೇವೇದ್ಯ ತಪ್ಪಿದ್ದಲ್ಲ ಕೆಲವೊಂದು ಕಡೆ ರಸ್ತೆಯ ಎರಡು ಬದಿ ಮುಳ್ಳುಗಂಟಿಗಳು ರಸ್ತೆಯನ್ನು ಆವರಿಸಿಕೊಂಡಿದೆ,ರಾತ್ರಿ ವೇಳೆ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಹೋಗುವಾಗ ಮುಳ್ಳಹಂದಿ,ಮೊಲ,ಕಾಡು ಬೆಕ್ಕುಗಳ ಕಾಟ ಸಹ ಇದೆ ಇಂತಹ ರಸ್ತೆ ನಮ್ಮನ್ನು ಆಳುವರಿಗೆ ಕಾಣಿಸುತ್ತಿಲ್ಲವೇ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ನೆಲವಂಕಿ ರೋಣೂರು ಹೋಬಳಿಯ ಕೆಲ ಗ್ರಾಮಗಳ ಜನರಿಗೆ ಕೊಂಡಿಯಂತೆ ಇರುವ ಅವಲಕುಪ್ಪ ರಸ್ತೆ ಒಂದು ರೀತಿಯ ಸಂಪರ್ಕ ಸೇತುವಾಗಿದೆ ರಸ್ತೆಯನ್ನು ಶಾಶ್ವತವಾಗಿ ಅಭಿವದ್ಧಿ ಮಾಡುವ ಅವಶ್ಯಕತೆ ಇದೆ ಆವಲಕುಪ್ಪ ರಸ್ತೆ ಸಮರ್ಪಕ ರಸ್ತೆಯಾದರೆ ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ಸಾರ್ವಜನಿಕ ಸಾರಿಗೆ ಬಸ್ಸುಗಳು ಓಡಾಡಲು ಅನಕೂಲವಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಈಗಿರುವ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕಿದ್ದು ರಸ್ತೆ ಅಗಲೀಕರಣ ಮಾಡುವುದರೊಂದಿಗೆ ಗುಣಮಟ್ಟದ ರಸ್ತೆ ಮಾಡಿದ್ದೆ ಆದರೆ ನೆಲವಂಕಿ ರೋಣೂರು ಹೋಬಳಿಯ ಜನತೆ ಪಟ್ಟಣಕ್ಕೆ ದ್ವಿಚಕ್ರವಾಹನದ ಮೂಲಕ ಸುರಕ್ಷಿತವಾಗಿ ಬರಲು ಹತ್ತಿರದ ರಸ್ತೆಯಾಗಿ ಬಳಕೆಯಾಗುತ್ತದೆ ಎನ್ನುವುದು ಜನರ ಮಾತು.
ಅವಲಕುಪ್ಪ ರಸ್ತೆ ಯಾವ ಇಲಾಖೆ ಬರುತ್ತದೆ?
ಹಿಗೊಂದು ಅನುಮಾನ ಎಲ್ಲರನ್ನು ಕಾಡುತ್ತಿದೆ ಈ ಹಿಂದೆ ರಸ್ತೆ ಮಾಡಿದಾಗ ನಬಾರ್ಡ್ ಅಡಿಯಲ್ಲಿ ಗ್ರಾಮೀಣ ಸಂಪರ್ಕ ರಸ್ತೆ ಎನ್ನಲಾಗಿತ್ತು ಈಗ ರಸ್ತೆ ಹಾಳಾಗಿದೆ ಈ ಬಗ್ಗೆ vcsnewz ತಂಡ ಮೊದಲಿಗೆ ಸಂಪರ್ಕಿಸಿದ್ದು ಲೋಕೋಪಯೋಗಿ ಇಲಾಖೆ ಅಭಿಯಂತರರನ್ನು ಅವರು ಆ ರಸ್ತೆ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದರು,ಹಾಗದರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ಇಲಾಖೆ ಜೆಇ ಅವರನ್ನು ಸಂಪರ್ಕಿಸಲು ಸುಮಾರು ಬಾರಿ ಅವರ ಮೊಬೈಲ್ ಗೆ ಕರೆ ಮಾಡಿದರು ಅಭಿಯಂತರರು ಕರೆ ಸ್ವೀಕರಿಸಿಯೇ ಇಲ್ಲ ಈ ಬಗ್ಗೆ ಎಇಇ ಅವರನ್ನು ಸಂಪರ್ಕಿಸಿದರೆ ನಮ್ಮ ಕರೆಯನ್ನೆ ಸ್ವೀಕರಿಸುವುದಿಲ್ಲ ಈ ಬಗ್ಗೆ ಶಾಸಕರ ಬಳಿ ಸಹ ಹೇಳಿದ್ದೆನೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ.ಅಧಿಕಾರಿಗಳು ಸಾರ್ವಜನಿಕರ ಕರೆ ಸ್ವೀಕರಿಸದೆ ಇದ್ದರೆ ತಾಲೂಕಿನ ಆಡಳಿತ ನಡೆಯುವುದಾದರು ಹೇಗೆ,ಇದು ನಕ್ಕು ಸುಮ್ಮನಾಗುವ ವಿಷಯ ಅಲ್ಲ matter of the taluk administration situation is very bad and cause people to be worried It is repentance.
Breaking News
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
- ಶ್ರೀನಿವಾಸಪುರ:ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ಪ್ರಕ್ಷಬ್ದ ಪರಿಸ್ಥಿತಿ!
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
Monday, April 7