- ಪರಷುರಾಮನ ಅನ್ವಷಣೆಯಿಂದ ಪೂಜೆ ಆರಂಭ
- ಶಾತವಾಹನರ ಕಾಲದ ದೇವಾಲಯ ಕಟ್ಟಡ
- ಉತ್ತರ ಭಾರತದಲ್ಲಿ ದೇವಾಲಯದ ದಾಖಲೆ
- ಶಿಶ್ನವನ್ನು ಹೋಲುವ ಲಿಂಗ ರೂಪಿ ವಿಗ್ರಹ
ನ್ಯೂಜ್ ಡೆಸ್ಕ್: ಇದೊಂದು ಅಪರೂದ ವೈಶಿಷ್ಟ ಪೂರ್ವದ ಶಿವಲಿಂಗ ಇರುವ ದೇವಸ್ಥಾನ, 2ನೇ ಶತಮಾನದಲ್ಲಿ ನಿರ್ಮಿಸಿರುವ ದೇವಾಲಯದಲ್ಲಿ ಪ್ರತಿ ಸೋಮವಾರ ರಾಹುಕಾಲದಲ್ಲಿ ರುದ್ರಾಭಿಷೇಕ ಮತ್ತು ಮೃತ್ಯುಂಜಯ ಹೋಮಗಳನ್ನು ವಿಶೇಷವಾಗಿ ಮಾಡಲಾಗುತ್ತದೆ. ಅವಿವಾಹಿತರು,ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಇಲ್ಲಿ ಪೂಜೆ ಸಲ್ಲಿಸಿದರೆ ದೋಷಗಳು ನಿವಾರಣೆಯಾಗಿ ಸುಖ ಸಂತೋಷ ಸಿಗುತ್ತದೆ ಎಂಬುದು ಆಳವಾದ ನಂಬಿಕೆ.ಗುಡಿಮಲ್ಲಂ ಗ್ರಾಮದ ಶಿವನ ದೇವಾಲಯದಲ್ಲಿ ಶಿವನನ್ನು ಪರಶುರಾಮೇಶ್ವರ ಎಂದು ಪೂಜಿಸಲಾಗುತ್ತದೆ. ಇಲ್ಲಿರುವ ಶಿವಲಿಂಗ ಬಹಳ ವಿಶೇಷವಾಗಿದ್ದು ದೇವಾಲಯದಲ್ಲಿ ಗರ್ಭಗುಡಿಯು ಮುಖ ಮಂಟಪಕ್ಕಿಂತ ಕೆಳಬಾಗದಲ್ಲಿದ್ದು ಶಿವನ ಲಿಂಗ ಪುರುಷನ ಜನನಾಂಗದ ರೀತಿಯಲ್ಲಿದೆ.ಇದುವರಿಗೂ ಎಷ್ಟೊ ಆಧ್ಯನಗಳು ನಡೆದರು ಯಾವುದೆ ಅಧ್ಯಯನದಲ್ಲೂ ದೇವಾಲಯದ ಮೂಲ ಇತಿಹಾಸದ ಬಗ್ಗೆ ನಿಗೂಢ ಹೊರತೆಗೆಯಲು ಸಾಧ್ಯವಾಗಿಲ್ಲ.
ಮನುಷ್ಯನ ಶಿಶ್ನವನ್ನು ಹೋಲುವ ಶಿವಲಿಂಗ. ಗುಡಿಮಲ್ಲಂ ದೇವಸ್ಥಾನದಲ್ಲಿರುವ ಶಿವಲಿಂಗ ವಿಗ್ರಹ ಮನುಷ್ಯನ ಶಿಶ್ನವನ್ನು ಹೋಲುತ್ತದೆ. ಏಳು ಅಡಿ ಎತ್ತರದ ಶೀಶ್ನಾಕಾರದ ಕಪ್ಪು ಲಿಂಗದ ಮೇಲೆ ಯಕ್ಷನ ಹೆಗಲ ಮೇಲೆ ರುದ್ರನ ರೂಪದ ವಿಗ್ರಹವು ಇದ್ದು ಪೇಟ ಧರಿಸಿ ಧೋತಿ ಉಟ್ಟು ಒಂದು ಕೈಯಲ್ಲಿ ಮೇಕೆ ತಲೆಯನ್ನು ಹಿಡಿದಿದ್ದು ಮತ್ತೊಂದು ಕೈಯಲ್ಲಿ ಕೈಗೊಡಲಿ ಇದೆ.ವಿಗ್ರಹದ ಮೇಲಿನ ವೇಷಭೂಷಣವು ರುಗ್ವೇದ ಕಾಲಕ್ಕೆ ಹಿಂದಿನದು ಎನ್ನುವ ಮಾತಿದೆ ಈ ಲಿಂಗಾರೂಪ ಶಿಲ್ಪ ಸಿಂಧೂ ನಾಗರಿಕತೆಯನ್ನು ನೆನಪಿಸುತ್ತದೆ ಎಂದು ಗುಡಿಮಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕರು ಅಂದಾಜಿಸಿತ್ತಾರೆ. ಪ್ರಾಚೀನ ಕಾಲದಲ್ಲಿ ಹೆಣ್ಣನ್ನು ಅಳೆಯುವ ಪದ್ಧತಿ ಇತ್ತು.ಆ ಕಾಲದಲ್ಲಿ ಮಾತೃಪ್ರಧಾನ ವ್ಯವಸ್ಥೆಯ ಮೂಲವಾದ ಮಹಿಳೆಯರಿಗೆ ಆ ಗೌರವ ದೊರೆಯುತ್ತಿತ್ತು.ಆ ಕಾಲದಲ್ಲಿ ಯೋನಿಯ ರೂಪವನ್ನು ಪೂಜಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ.ಆ ನಂತರ ಸ್ತ್ರೀಯರ ಮೇಲೆ ಪುರುಷ ಪ್ರಾಬಲ್ಯ ಆರಂಭವಾದಂತೆ ಅದರ ಸೂಚಕವಾಗಿ ಲಿಂಗಕಾರನನ್ನು ಪೂಜಿಸಲಾಯಿತು. ಗುಡಿಮಲ್ಲಂ ದೇವಸ್ಥಾನಕ್ಕೆ ಸುದೀರ್ಘ ಇತಿಹಾಸವಿದೆ. ಹಿಂದಿನಿಂದಲೂ ಇಲ್ಲಿ ಲಿಂಗಕಾರನನ್ನು ಪೂಜಿಸಲಾಗುತ್ತಿದೆ ಎಂದು ಹೇಳುತ್ತಾರೆ. ಗುಡಿಮಲ್ಲನಲ್ಲಿರುವ ಈ ದೇವಾಲಯವನ್ನು ಪರಶುರಾಮೇಶ್ವರ ದೇವಾಲಯ ಎಂದು ಕರೆಯಲಾಗುತ್ತದೆ.
ಇದಕ್ಕೆ ಸುದೀರ್ಘವಾದ ಇತಿಹಾಸವಿದ್ದು ಪುರಾತತ್ವ ಇಲಾಖೆ ಅಂದಾಜಿನ ಪ್ರಕಾರ ಈ ದೇವಾಲಯವನ್ನು ಕ್ರಿಸ್ತಪೂರ್ವ 2 ಅಥವಾ 3 ನೇ ಶತಮಾನಗಳಲ್ಲಿ ನಿರ್ಮಿಸಿರಬಹುದು ಎನ್ನುತ್ತಾರೆ. ರಾಯಲಸೀಮೆಯ ಪ್ರಸಿದ್ಧ ದೇವಾಲಯಗಳು ಎಂಬ ಪುಸ್ತಕದಲ್ಲಿ ಈ ದೇವಾಲದ ಬಗ್ಗೆ ಉಲ್ಲೇಖ ಇದ್ದು ದೇವಾಲಯದ ಗೋಡೆಗಳ ಮೇಲೆ ಪಲ್ಲವ, ಗಂಗಪಲ್ಲ. ಬಾಣ ಮತ್ತು ಚೋಳ ರಾಜರ ಶಾಸನಗಳು ಗೋಚರಿಸುತ್ತವೆ. ಇವುಗಳು ಹೆಚ್ಚಾಗಿ ತಮಿಳು ಭಾಷೆಯಲ್ಲಿವೆ ಎಂದು ಶಾಸನ ಸಂಶೋಧಕರು ಕಂಡುಕೊಂಡಿದ್ದಾರೆ. ಇವರೆಲ್ಲರೂ ದೇವಾಲಯಕ್ಕೆ ದಾನ ನೀಡಿದವರಾಗಿದ್ದು,ದೇವಸ್ಥಾನದಲ್ಲಿ ಲಿಂಗವನ್ನು ಯಾರು ಮತ್ತು ಯಾವಾಗ ಪ್ರತಿಷ್ಠಾಪಿಸಿದರು ಎಂಬುದು ತಿಳಿದಿಲ್ಲ.
ದೇವಸ್ಥಾನ ಎತ್ತರದಲ್ಲಿದ್ದು, ಶಿವಲಿಂಗ ದೇವಸ್ಥಾನದ ಕೆಳ ಭಾಗದಲ್ಲಿ ಇರುವುದರಿಂದ ಗ್ರಾಮಕ್ಕೆ ಗುಡಿಪಳ್ಳ ಎಂದು ಕರೆಯುತ್ತಿದ್ದು ಮುಂದೆ ಅದು ಗುಡಿಮಲ್ಲಂ ಆಯಿತು ಎಂದು ಹೇಳುತ್ತಾರೆ. ದೇವಾಲಯ ಸುವರ್ಣಮುಖಿ ನದಿಯ ಸಮೀಪದಲ್ಲಿದ್ದು ಬರುಬರುತ್ತ ನದಿಯ ಹರಿವು ಕಡಿಮೆಯಾಗಿ ದೇವಸ್ಥಾನ ಮತ್ತು ನದಿಯ ಅಂತರ ಹೆಚ್ಚಾಗಿದಿಯಂತೆ,ಪ್ರವಾಹ ಬಂದರೆ ಶಿವಲಿಂಗವನ್ನು ಸ್ಪರ್ಶಿಸುತ್ತದೆ ಎಂದು ಹೇಳಲಾಗುತ್ತದೆ, 2004 ರಲ್ಲಿ ಬಂದ ಪ್ರವಾಹದಲ್ಲಿ ನದಿಯ ಹರಿವು ಹೆಚ್ಚಾಗಿ ನೀರು ದೇವಾಲಯವನ್ನು ಸ್ಪರ್ಶಿಸಿತ್ತು ಎಂದು ಗ್ರಾಮಸ್ಥರ ಮಾತು.
ಶಾತವಾಹನರು ಕಾಲದ ಕಟ್ಟಡ
ದೇವಸ್ಥಾನ ಶಾತವಾಹನರ ಕಾಲದ ಕಟ್ಟಡ ಎಂದು ಪುರಾತತ್ವ ಇಲಾಖೆ ಹೇಳುತ್ತದೆ. ಆದರೆ ಈ ಪ್ರತಿಮೆಯಲ್ಲಿ ಮೌರ್ಯರ ಕಾಲದ ಶೈಲಿಯು ಗೋಚರಿಸುತ್ತದೆ ಎಂದು ಪ್ರಸಿದ್ಧ ಇತಿಹಾಸಕಾರ ಮತ್ತು ಗುಡಿಮಲ್ಲನ ವಿಶಿಷ್ಟತೆಯ ಪುಸ್ತಕದ ಲೇಖಕ ಈಮನಿಶಿವನಾಗಿರೆಡ್ದಿ ಹೇಳುತ್ತಾರೆ,ಹಿಂಭಾಗದಲ್ಲಿ ಲಿಂಗಾಕಾರ,ಮುಂಭಾಗದಲ್ಲಿ ಯಕ್ಷ ರೂಪದಲ್ಲಿ ರುದ್ರ, ಕೈಯಲ್ಲಿ ಮೇಕೆ, ಸುತ್ತಲೂ ಕಲ್ಲಿನ ಬೇಲಿ ಇದೆ. ಇದೆಲ್ಲವೂ ಮೌರ್ಯರ ಕಾಲದ್ದು ಎಂದು ಅಂದಾಜಿಸುತ್ತಾರೆ.ಇಟ್ಟಿಗೆ ನೆಲಮಾಳಿಗೆ ಕಟ್ಟಡ ಶಾತವಾಹನರ ಕಾಲದ್ದು, ಕಪ್ಪು ಮತ್ತು ಕೆಂಪು ಬಣ್ಣದ ವಿಗ್ರಹವು ಬಹಳ ಪ್ರಾಚೀನವಾಗಿದೆ ಎನ್ನುತ್ತಾರೆ.
ಆದರೆ ಉತ್ತರ ಪ್ರದೇಶದ ಮಥುರಾದಲ್ಲಿರುವ ಮ್ಯೂಸಿಯಂನಲ್ಲಿ ಕ್ರಿ.ಪೂ. ಒಂದನೇ ಶತಮಾನಕ್ಕೆ ಸೇರಿದ್ದು ಎಂದು ಹೇಳುವ ಲಿಂಗವನ್ನು ಸಂರಕ್ಷಿಸಲಾಗಿದ್ದು ದೇವಾಲಯದ ಶಿವಲಿಂಗವನ್ನು ಹೋಲುತ್ತದೆ. ಹಾಗೆಯೇ ಉಜ್ಜಯಿನಿಯಲ್ಲಿ ಕ್ರಿ.ಪೂ. ಕೆಲವು ತಾಮ್ರದ ನಾಣ್ಯಗಳು ಕಂಡುಬಂದಿದ್ದು, ಅವುಗಳು ಮೂರನೇ ಶತಮಾನದಷ್ಟು ಹಳೆಯದು ಎಂದು ನಂಬಲಾಗಿದೆ. ಅವುಗಳ ಮೇಲಿನ ಚಿತ್ರವು ಗುಡಿಮಲ್ಲನ ಶಿವಲಿಂಗದ ರೂಪದಲ್ಲಿವಿಯಂತೆ, ಈ ದೇವಾಲಯದ ಕುರಿತಾದ ಹೆಚ್ಚಿನ ಮಾಹಿತಿ ಚಂದ್ರಗಿರಿ ಕೋಟೆಯಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಲಭ್ಯವಿದೆ.
ಶಾಪ ವಿಮೋಚನೆಗೆ ಲಿಂಗವನ್ನು ಪೂಜಿಸಿದ್ದ ಪರಶುರಾಮ
ತಂದೆಯ ಪ್ರಚೋದನೆಯಿಂದ ತಾಯಿಯ ಶಿರಚ್ಛೇದ ಮಾಡಿದ ಪರಶುರಾಮನು ತನ್ನ ಪಾಪ ಪ್ರಜ್ಞೆಯಿಂದ ಹೊರಬರಲು ಇಂತಹ ಶಿವಲಿಂಗವನ್ನು ಹುಡುಕಿ ಪೂಜಿಸುವಂತೆ ಋಷಿಗಳು ಸೂಚನೆಯಂತೆ ಸಾಕಷ್ಟು ಹುಡುಕಾಟದ ನಂತರ ಪರಶುರಾಮನಿಗೆ ಈ ಭಾಗದ ಕಾಡಿನ ಮಧ್ಯದಲ್ಲಿದ್ದ ಪುರುಷಾಂಗದ ಲಿಂಗವನ್ನು ಗುರುತಿಸಿ ನಂತರ ಅಲ್ಲಿ ಕೊಳವನ್ನು ತೋಡಿ ಅಚ್ಚೆರುವು ದೈವಿಕ ಪುಷ್ಪವನ್ನು ಬೆಳೆಸುತ್ತ ಅದೆ ಹೂವಿನಿಂದ ಶಿವನನ್ನು ಪೂಜಿಸುತ್ತಿದ್ದನು.ಕಾಡು ಪ್ರಾಣಿಗಳಿಂದ ಹೂವನ್ನು ರಕ್ಷಿಸಲು ಅವನು ಚಿತ್ರಸೇನನ್ನು ನೇಮಿಸುತ್ತಾನೆ ಇದಕ್ಕಾಗಿ ಪರಶುರಾಮ ಅವನಿಗೆ ಪ್ರತಿದಿನ ಒಂದು ಜೀವಿ ಮತ್ತು ಆಟಿಕೆಗಳನ್ನು ತರುತ್ತಿದ್ದ,ಚಿತ್ರಸೇನ ಸಹ ಇದೆ ಪುಷ್ಪದಿಂದ ಶಿವನನ್ನು ಪೂಜಿಸುತ್ತಿದ್ದ ಒಮ್ಮೆ ಪರಶುರಾಮ ಬಂದಾಗ, ಹೂವುಗಳ ಕೊರತೆ ಇರುವುದನ್ನು ಕಂಡು ಕೋಪದಿಂದ ಚಿತ್ರಸೇನನನ್ನು ಆಕ್ರಮಣ ಮಾಡುತ್ತಾನೆ. ಆ ಯುದ್ಧವು 14 ವರ್ಷಗಳ ಕಾಲ ನಡೆದೆ ಆ ಪ್ರದೇಶವು ದೊಡ್ಡ ಹಳ್ಳವಾಗಿ ಗುಡಿಪಳ್ಳಂ ಎಂಬ ಹೆಸರು ಬಂದು ಮುಂದೆ ಗುಡಿಮಲ್ಲಂ ಆಗಿದೆ ಎನ್ನುಲಾಗುತ್ತದೆ.
ತಿರುಪತಿಯ ಸಮೀಪ
ಪುರಾತನ ದೇವಾಲಯ ಆದ್ಯಾತ್ಮಿಕ ನಗರ ತಿರುಪತಿ ಅಥವಾ ರೇಣಿಗುಂಟಾ ತಲುಪಿದರೆ ತಿರುಪತಿಯಿಂದ 22 ಕಿಮೀ ಮತ್ತು ರೇಣಿಗುಂಟಾದಿಂದ 11 ಕಿಮೀ ದೂರದಲ್ಲಿದೆ. ರಸ್ತೆಯ ಮೂಲಕವೂ ಹೋಗಬಹುದಾಗಿದೆ ಆದರೆ ಇಲ್ಲಿ ಇತರೆ ಪುಣ್ಯಕ್ಷೇತ್ರಗಳಲ್ಲಿ ಇರುವಂತೆ ಯಾವುದೇ ವಸತಿ ಅಥವಾ ಹೋಟೆಲ್ಗಳು ಇರುವುದಿಲ್ಲ ಕುಡಿಯಲು ನೀರನ್ನು ಸಹ ತಾವೆ ತಗೆದುಕೊಂಡು ಹೋಗಬೇಕಿದೆ.