- ಪ್ಲಾಸ್ಟಿಕ್ ಮುಟ್ಟುಗೋಲು ಹಾಕಲು ಬಂದ ಪುರಸಭೆ ಸಿಬ್ಬಂದಿ
- ಉತ್ಪಾದನೆ ಹಂತದಲ್ಲಿಯೇ ತಡೆಯಿರಿ ಮೊಂಡುವಾದ
- ಜಗಳಕ್ಕೆ ನಿಂತ ಅವರೆಕಾಯಿ ಚಿಲ್ಲರೆ ವ್ಯಾಪಾರಸ್ಥರು
ಶ್ರೀನಿವಾಸಪುರ:ಅವರೆಕಾಯಿ ಚಿಲ್ಲರೆ ವ್ಯಾಪಾರಸ್ಥರು ಬಳಸುತ್ತಿದ್ದ ಪ್ಲಾಸ್ಟಿಕ್ ಕವರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬಂದ ಪುರಸಭೆ ಸಿಬ್ಬಂದಿ ವಿರುದ್ದ ವ್ಯಾಪಾರಸ್ಥರು ಜಗಳ ಕಾದ ಪ್ರಸಂಗ ನಡೆಯಿತು.
ಶ್ರೀನಿವಾಸಪುರ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಅವರೆಕಾಯಿ ಚಿಲ್ಲರೆ ವ್ಯಾಪಾರಸ್ಥರು ಯಥೇಚ್ಚವಾಗಿ ಪ್ಲಾಸ್ಟಿಕ್ ಕವರಗಳನ್ನು ಬಳಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪುರಸಭೆ ಅಧಿಕಾರಿಗಳು ಇಂದು ವ್ಯಾಪಾರಸ್ಥರಿಂದ ಕವರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬಂದಾಗ ವ್ಯಾಪರಸ್ಥರು ವಿರೋಧ ವ್ಯಕ್ತಪಡಿಸಿ ಪುರಸಭೆ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ನಿಂತು ಪ್ಲಾಸ್ಟಿಕ್ ಕವರಗಳನ್ನು ಉತ್ಪಾದನೆ ಹಂತದಲ್ಲೆ ತಡೆಯಿರಿ ಎಂದು ವಾದಮಂಡಿಸಿದರು ಇದಕ್ಕೆ ಸಿಬ್ಬಂದಿ ಬಾಲಕೃಷ್ಣ ಉತ್ತರಿಸಿ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಪ್ಲ್ಯಾಸ್ಟಿಕ್ ಕ್ಯಾರಿಬ್ಯಾಗ್, ಕಪ್, ಲೋಟಾ, ಪ್ಲೇಟ್ಗಳ ಬಳಕೆಯನ್ನು ತಡೆಯುವಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯ ಸೂಚನೆ ನೀಡಿದೆ. ಪ್ಲ್ಯಾಸ್ಟಿಕ್ ಬಳಕೆಯಿಂದ ತ್ಯಾಜ್ಯದ ಪ್ರಮಾಣ ಹೆಚ್ಚಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಬೀರುತ್ತದೆ. ಈ ಹಿಂದೆಯೇ ಪುರಸಭೆ ವತಿಯಿಂದ ಪ್ಲ್ಯಾಸ್ಟಿಕ್ ನಿಷೇಧ ಬಗ್ಗೆ ಪಟ್ಟಣದ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೂ ನಿಯಮವನ್ನು ಉಲ್ಲಂಘಿಸಿ ಇಲ್ಲಿನ ರಸ್ತೆ ಬದಿಯಲ್ಲಿ ಕೂತು ಪ್ಲ್ಯಾಸ್ಟಿಕ್ ಕವರಗಳನ್ನು ಬಳಸಲಾಗುತ್ತಿದೆ ಇದನ್ನು ನಾವು ಮುಟ್ಟುಗೋಲು ಹಾಕಿಕೊಳ್ಳುತ್ತಿರುವುದಾಗಿ ಹೇಳಿದರು ವ್ಯಾಪಾರಸ್ಥರು ತಮ್ಮ ಮೊಂಡು ವಾದ ಮುಂದುವರಿಸಿ ಸಿಬ್ಬಂದಿಯೊಂದಿಗೆ ಜಗಳಕ್ಕೆ ನಿಂತರು.ನಂತರದಲ್ಲಿ ಸಾರ್ವಜನಿಕರು ಪುರಸಭೆ ಸಿಬ್ಬಂದಿ ಪರ ನಿಂತಾಗ ಅವರೆಕಾಯಿ ವ್ಯಾಪಾರಸ್ಥರು ಸುಮ್ಮನಾದರು.