ನ್ಯೂಜ್ ಡೆಸ್ಕ್:ಕರ್ನಾಟಕ ಉಪ ಮುಖ್ಯಮಂತ್ರಿ ಪೊಲಿಟಿಕಲ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಇಂದು
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದರೆ ಅದು ಅಷ್ಟೆಕ್ಕೆ ಮುಗಿದಿಲ್ಲ ಶಿವಕುಮಾರ್ ಅವರು ಚಂದ್ರಬಾಬು ಅವರ ಕೈ ಹಿಡಿದು ಒಂದಷ್ಟು ದೂರ ಕರೆದುಕೊಂಡು ಹೋಗಿ ರಹಸ್ಯವಾಗಿ ಮಾತನಾಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ತೆಲಗುದೆಶಂ ಯುವ ಕಾರ್ಯಕರ್ತರು ರಚಸಿಕೊಂಡಿರುವ ಬೆಂಗಳೂರು ಟಿಡಿಪಿ ಫೋರಂ ವತಿಯಿಂದ ಮಾರುತ್ ಹಳ್ಳಿಯಲ್ಲಿ ಸಭೆಯನ್ನು ಆಯೋಜಿಸಿದ್ದರು ಈ ಸಭೆಯಲ್ಲಿ ಚಂದ್ರಬಾಬುನಾಯ್ಡು ಭಾಗವಹಿಸಿದ್ದರು ಸಭೆ ನಂತರ ಚಂದ್ರಬಾಬು ತಮ್ಮ ವಿಧಾನಸಭಾ ಕ್ಷೇತ್ರವಾದ ಕುಪ್ಪಂ ಟಿಡಿಪಿ ಮುಖ್ಯಸ್ಥ ತ್ರಿಲೋಕ್ ಅಪಘಾತಕ್ಕೀಡಾಗಿ ಸದ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಅವರನ್ನು ಭೇಟಿಯಾಗಿ ಆರೋಗ್ಯ ಸ್ಥಿತಿ ಕುರಿತು ವಿಚಾರಿಸಿದ ಚಂದ್ರಬಾಬು ಅಲ್ಲಿಂದ ಕುಪ್ಪಂಗೆ ತೆರಳಲು ಬೆಂಗಳೂರು ಎಚ್.ಎ.ಎಲ್ ವಿಮಾನ ನಿಲ್ದಾಣ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಆವಿರ್ಭಾವ ಸಭೆಯಲ್ಲಿ ಭಾಗವಹಿಸಲು ನಾಗ್ಪುರಕ್ಕೆ ತೆರಳಲು ಆಗಮಿಸಿದ್ದು, ಈ ಸಂದರ್ಭದಲ್ಲಿ ಇಬ್ಬರು ಮುಖಾಮುಖಿ ಆಗಿ ಪರಸ್ಪರ ಹಸ್ತ ಲಾಘವ ಮಾಡಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ ಈ ಸಮಯದಲ್ಲಿ ಶಿವಕುಮಾರ್ ಅವರು ಚಂದ್ರಬಾಬು ಅವರನ್ನು ಒಂದಷ್ಟು ದೂರ ಕರೆದೊಯಿದು ರಹಸ್ಯವಾಗಿ ಮಾತುಕತೆ ನಡೆಸಿರುತ್ತಾರೆ ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯನ್ನು ಸಹ ದೂರ ನಿಲ್ಲಿಸಿರುತ್ತಾರೆ.3-4ತಿಂಗಳಲ್ಲಿ ಆಂಧ್ರದಲ್ಲಿ ಚುನಾವಣೆಗಳು ನಡೆಯಲಿದ್ದು, ಆಂಧ್ರದ ಮಾಜಿ ಮುಖ್ಯಮಂತ್ರಿ ರಾಜಶೇಖರೆಡ್ದಿ ಮಗಳು ಹಾಲಿ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾ ತನ್ನ ಸಹೋದರನಿಗೆ ಸೆಡ್ಡು ಹೋಡೆದು ಆಂಧ್ರ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾಳೆ ಎನ್ನಲಾಗಿದ್ದು ಈಕೆ ರಾಜಕೀಯವಾಗಿ ಡಿ.ಕೆ.ಶಿವಕುಮಾರ್ ಆಪ್ತಳು ಎಂಬ ಮಾತಿದ್ದು ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ಎರಡು ಮೂರು ಬಾರಿ ಬೆಂಗಳೂರಿಗೆ ಬಂದು ಶಿವಕುಮಾರ್ ಅವರನ್ನು ವೈಎಸ್ ಶರ್ಮಿಳಾ ಭೇಟಿಯಾಗಿದ್ದರು ಈಗ ಅಕೆಯನ್ನು ಆಂಧ್ರ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೆ ಶಿವಕುಮಾರ್-ಚಂದ್ರಬಾಬು ನಾಯ್ಡು ಭೇಟಿ ಕುತೂಹಲ ಮೂಡಿಸಿದೆ ಜೊತೆಗೆ ಆಂಧ್ರ ರಾಜಕೀಯದಲ್ಲಿ ದೊಡ್ದ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ವೈಎಸ್ ಶರ್ಮಿಳಾ-ಶಿವಕುಮಾರ್ ಅವರನ್ನು ಭೇಟಿಯಾದ ಸುದ್ದಿಯನ್ನು vcsnewz.com ಸುದ್ದಿ ಮಾಡಿತ್ತು