ಸಿನಿಮಾ ಡೆಸ್ಕ್:ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆ ಆಗಿದೆ. ಅಭಿಮಾನಿಗಳು ಈ ಚಿತ್ರವನ್ನ ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದಾರೆ. ‘ರಾಬರ್ಟ್’ ಬಳಿಕ ನಿರ್ದೇಶಕ ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್ನಲ್ಲಿ ಮೂಡಿಬಂದ ಸಿನಿಮಾ ಎಂಬ ಕಾರಣಕ್ಕೆ “ಡಿ”ಫ್ಯಾನ್ಸ್ ಅತಿ ಹೆಚ್ಚು ನಿರೀಕ್ಷೆ ಇಟ್ಟು ಕೊಂಡಿದ್ದರು ಅದನ್ನು ಹುಸಿಗೊಳಿಸದೆ ಕಾಟೇರಾ ಸಿನಿಮಾ ಮೂಡಿ ಬಂದಿದ್ದು ದರ್ಶನ್ ಚಿತ್ರಪ್ರಯಣದಲ್ಲಿ ಮೈಲಿಗಲ್ಲು ಆಗುವಂತ ಸಿನಿಮಾ ಆಗಿದಲ್ಲದೆ, ಇದೊಂದು ರೈತ ಕ್ರಾಂತಿಯ ಕಹಳೆ ಆಗಿದ್ದು, ಸಾಮಾಜಿಕ ಸಮಸ್ಯೆ ಜಾತಿ ಪೀಡಗಿನ ಮೆಲೆ ಬೆಳಕು ಚಲ್ಲುವಂತ ಸಿನಿಮಾ ಅನ್ನಬಹುದಾಗಿದೆ.
ಮನರಂಜನೆಯೇ ಸಿನಿಮಾದ ಮೂಲ ಉದ್ದೇಶವಾದರು ಕುಲುಮೆಯಲ್ಲಿ ಕೆಲಸ ಮಾಡುವ ಯುವಕನ ಪಾತ್ರದಲ್ಲಿ ಮಾಸ್ ಇಂಟ್ರಡಕ್ಷನ್ ನೀಡಿರುವ ದರ್ಶನ್,ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷವನ್ನು ಕಾಟೇರ ಕಥಾ ರೂಪಕೊಟ್ಟಿದ್ದು ಈ ಮೂಲಕ ಸಂದೇಶವನ್ನು ಚಿತ್ರ ನೀಡುತ್ತದೆ.
ಕಾಟೇರದ ಹೀರೋ ರೈತರಿಗಾಗಿ, ಪ್ರೀತಿಸಿದವಳಿಗಾಗಿ, ಕುಟುಂಬದವರಿಗಾಗಿ, ಊರಿನ ಜನರಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟಕ್ಕೆ ನಿಂತ ವೀರನ ಕಥೆಯನ್ನು ಜಡೇಶ್ ಬರೆದಿದ್ದು ಅದಕ್ಕೆ ಮೂರು ಗಂಟೆ ಮೂರು ನಿಮಿಷದ ದೃಶ್ಯರೂಪ ನೀಡುವಲ್ಲಿ ನಿರ್ದೇಶಕ ತರುಣ್ ಸುಧೀರ್ ಯಶಸ್ವಿಯಾಗಿದ್ದಾರೆ ಕಥೆಯನ್ನೇ ಹೀರೋ ಮಾಡಿದ್ದು ಹಿರೋ ಇಡಿ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ.
ದರ್ಶನ್ ಎಂಬ ಕಮರ್ಷಿಯಲ್ ಮಾಸ್ ಸೂಪರ್ ಸ್ಟಾರ್ ಅವರನ್ನು ಎಕ್ಸ್ಪೆರಿಮೆಂಟ್ ಮಾಡೋ ಮೂಲಕ ತರುಣ್ ಮತ್ತೊಮ್ಮೆ ಅದ್ಭುತ ತಂತ್ರಜ್ಞನ ಎಂದು ಗುರುತಿಸಿಕೊಂಡಿದ್ದಾರೆ.ಮಾಸ್ತಿ ಅವರ ಕ್ಲಾಸ್ ಹಾಗೂ ಮಾಸ್ ಸಂಭಾಷಣೆ ಸಿನಿಮಾದ ತೂಕ ಹೆಚ್ಚಿಸಿದೆ. ಡೈಲಾಗ್ಸ್ನ ಪೋಣಿಸಿರೋ ಪರಿ ಬಹಳ ಅದ್ಭುತ,”ಬಿರುಗಾಳಿಗೆ ಹೆದರಿ ಉಸಿರಾಡದೆ ಇರೋಕೆ ಆಗುತ್ತಾ..?, “ನಿಮ್ಮ ಬಂದೂಕಿನ ಗುರಿ ನನ್ನ ಬದುಕಿನ ದಾರಿಯನ್ನ ತಪ್ಪಿಸೋಕೆ ಆಗಲ್ಲ” “ಗಂಡಸಾದವ್ನು ಬೆವರು ಸುರಿಸ್ಬೇಕೇ ಹೊರತು ಜೊಲ್ಲು ಸುರಿಸಬಾರ್ದು” ಅನ್ನೋ ಡೈಲಾಗ್ಗಳು ಸಮಾಜಕ್ಕೆ ಕಿವಿಮಾತು ಹೇಳುವಂತಹ ಸಾಲುಗಳನ್ನು ಅವರು ಬರೆದಿದ್ದಾರೆ.
ಕಾಟೇರ ಪಾತ್ರದಲ್ಲಿ ದರ್ಶನ್ ಅಭಿನಯ ಅನನ್ಯ ಈ ಸಿನಿಮಾದಲ್ಲಿ ಅವರಿಗೆ ಎರಡು ಗೆಟಪ್ ಇದ್ದು ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ರೀತಿಯಲ್ಲಿ ‘ಕಾಟೇರ’ ಸಿನಿಮಾ ಮೂಡಿಬಂದಿದೆ.
ಮಾಲಾಶ್ರೀ ಪುತ್ರಿ ಆರಾಧನಾರಾಮ್ ಗೆ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲಿಯೇ ಉತ್ತಮ ಮಾರ್ಕ್ ಪಡೆಯುವ ಪ್ರಯತ್ನ ಆಗಿದೆ ತೆಲಗಿನ ಜಗತಿಬಾಬು,ವಿನೊದ್ ಆಳ್ವಾ,ಕುಮಾರ್ ಗೋವಿಂದ್, ಶ್ರುತಿ, ಅವಿನಾಶ್ ಅವರಂತಹ ಹಿರಿಯ ಕಲಾವಿದರ ಜೊತೆ ದೊಡ್ದ ತಾರಾಗಣವೆ ಸಿನಿಮಾದಲ್ಲಿದೆ.
ಸಿನಿಮಾದಲ್ಲಿ ಅನಗತ್ಯವಾಗಿ ಯಾವ ದೃಶ್ಯವನ್ನೂ ತುರುಕಿಲ್ಲ.ಶುರುವಿನಲ್ಲೇ ಫೈಟಿಂಗ್ ತೋರಿಸಿಲ್ಲ. ಆ ಕಾರಣದಿಂದ ದರ್ಶನ್ ಅಭಿಮಾನಿಗಳಿಗೆ ಇದೊಂದು ಸರ್ಪ್ರೈಸ್ ಅನ್ನಬಹುದು ಹಾಗಂತ ಮಾಸ್ ಮನರಂಜನೆಗೆ ಮೋಸ ಆಗಿಲ್ಲ ಸ್ವಲ್ಪ ಹೊತ್ತು ಕಾದ ನಂತರ ಮುಕ್ಕಾಲು ಗಂಟೆ ಬಳಿಕ ಮೊದಲ ಫೈಟ್ ಬರುತ್ತದೆ. ಅಷ್ಟರಮಟ್ಟಿಗೆ ಸಿನಿಮಾದಲ್ಲಿ ಪ್ರಯೋಗ ಆಗಿದೆ.
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಇನ್ನು ಕಾಸು ಕೊಟ್ಟು ಸಿನಿಮಾ ನೋಡೋನು, ಒಂದೊಳ್ಳೆ ಸಿನಿಮಾ ನೋಡಿದ ಸಾರ್ಥಕ ಭಾವದೊಂದಿಗೆ ಥಿಯೇಟರ್ನಿಂದ ಹೊರಬರುವುದರಲ್ಲಿ ಸಂದೇಹವೇ ಇಲ್ಲ.
ಕಾಟೇರ ಸಿನಿಮಾಗೆ ವಿ ಹರಿಕೃಷ್ಣ ಸಂಗೀತ ಒದಗಿಸಿದ್ದರೆ. ಪುನೀತ್ ಆರ್ಯ ಸಾಹಿತ್ಯ ಬರೆದಿದ್ದಾರೆ. ಹಾಡನ್ನು ಆನಂದ್ ಆಡಿಯೋದಲ್ಲಿ ರಿಲೀಸ್ ಮಾಡಲಾಗಿದೆ. ಕಾಟೇರ ಸಿನಿಮಾ ಬಿಡುಗಡೆಯಾದ ಎರಡು ದಿನಗಳಲ್ಲಿ ಬರೋಬ್ಬರಿ 37.14 ಕೋಟಿಯನ್ನು ಗಳಿಸಿದೆ. ಮೊದಲ ದಿನ ಕಾಟೇರ ಗಳಿಸಿದ್ದು 19.79 ಕೋಟಿ ಎರಡನೇ ದಿನ 17.35 ಕೋಟಿ ಬೆಳೆಯನ್ನು ತೆಗೆದಿದೆ. ರೈತರ ಸಮಸ್ಯೆಗಳು, ಜಾತಿ ವ್ಯವಸ್ಥೆಯ ಸುತ್ತ ತೆಗೆದ ಸಿನಿಮಾಕ್ಕೆ ಜನ ಉತ್ತಮ ಬೆಂಬಲ ನೀಡಿದ್ದಾರೆ.