ಶ್ರೀನಿವಾಸಪುರ:ಐನೂರೈವತ್ತು ವರ್ಷಗಳ ದೀರ್ಘಕಾಲದಿಂದ ರಾಮಜನ್ಮಭೂಮಿಗೆ ಕಾಯುತ್ತಿದ್ದ ದಿನಗಳಿಗೆ ಅಂತ್ಯ ಹಾಡುವ ಕಾಲ ಸನ್ನಿಹಿತವಾಗಿದೆ ಈ ತಿಂಗಳ 22ರಂದು ಸೋಮವಾರ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ಕಾರ್ಯನಡೆಯಲಿದೆ. ಈ ನಿಮಿತ್ತ ಇಡೀ ದೇಶವೆ ರಾಮಮಯವಾಗಿದೆ. ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗುವ ಸಂದರ್ಭದಲ್ಲಿ, ಹಿಂದೆ ನಡೆದಿರುವ ಹೋರಾಟದ ಪಾತ್ರಗಳು ಸ್ಮರಣೀಯವಾದದ್ದು. ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಮುಕ್ತಿ ಆಂದೋಲನದಲ್ಲಿ 1990ರ ಅಕ್ಟೋಬರ್ 30 ಮತ್ತು 1992ರ ಡಿಸೆಂಬರ್ 6ರ ಕರಸೇವೆಗಳು ನಿರ್ಣಾಯಕ ಪಾತ್ರ ವಹಿಸಿದವು. 1990ರಲ್ಲಿ ಕರಸೇವಕರ ಮೇಲೆ ಗೋಲಿಬಾರ್ ನಡೆದರೆ, 1992ರ ಡಿಸೆಂಬರ್ 6ರಂದು ವಿವಾದಿತ ಕಟ್ಟಡ ಧರೆಗುರುಳಿತು. ಈ ಕರಸೇವೆಯಲ್ಲಿ ಪಾಲ್ಗೊಂಡವರು ಅಂದಿನ ಹೋರಾಟದ ಹಾದಿಯನ್ನು ಮೆಲುಕು ಹಾಕುತ್ತ ಏನೆಲ್ಲ ಹೇಳಿದರು ಎಂದು ಇಲ್ಲಿ ವಿವರಿಸಲಾಗಿದೆ.
1990 ರ ಅವಧಿಯಲ್ಲಿ ಬಿಜೆಪಿ ವರಿಷ್ಠ ಎಲ್.ಕೆ.ಅಡ್ವಾನಿ ಅವರು ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದ ಕುರಿತು ಜಾಗೃತಿ ಮೂಡಿಸಲು ದೇಶದ್ಯಾಂತ ರಥಯಾತ್ರೆ ನಡೆಸಿದರು. ದೇಶಾದ್ಯಂತ ಸಂಚರಿಸಿದ ರಥಯಾತ್ರೆ ಶ್ರೀನಿವಾಸಪುರದಲ್ಲೂ ಸಂಚರಿಸಿ ರಾಮಮಂದಿರ ಬಗ್ಗೆ ಸಂಚಲನ ಉಂಟುಮಾಡಿತ್ತು. ಶ್ರೀರಾಮನ ಜನ್ಮಸ್ಥಳದಲ್ಲೆ ರಾಮಮಂದಿರ ನಿರ್ಮಾಣ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು.
ಇದರ ಅನ್ವಯ ಇಲ್ಲಿನ ಹಲವರು ಅಯೋಧ್ಯೆಗೆ ಎರಡು ಹಂತಗಳಲ್ಲಿ ತೆರಳಿ ಕರಸೇವೆ ಮಾಡಿದ ಬಗ್ಗೆ ಚಂದ್ರಶೇಖರ್ ಅಜಾದ್ ಹೇಳುತ್ತಾರೆ. ಅಯೋಧ್ಯೆಗೆ ತೆರಳಲು ಗಟ್ಟಿಯಾದ ನಿರ್ಧಾರ ಮಾಡಿ ಮನೆಯಲ್ಲಿ ನಿಷ್ಟೂರ ಮಾಡಿಕೊಂಡು 1992ರ ನವೆಂಬರ್ 29ರಂದು ಮೊದಲ ಹಂತದಲ್ಲಿ 5 ಜನರ ತಂಡ ಅಯೋಧ್ಯೆಗೆ ತೆರಳಲು ದಿವಂಗತ ಮೇಷ್ಟ್ರು ಟಿ.ಸೋಣ್ಣಪ್ಪರೆಡ್ಡಿ ನೇತೃತ್ವದಲ್ಲಿ ಹೋರಟವರು ಚಂದ್ರಶೇಖರ್ ಆಜಾದ್,ಅವಲಕುಪ್ಪ ಅಂಜನೇಯರೆಡ್ಡಿ,ನರಸಿಂಹನಾಯಕ್,ದಿವಂಗತ ಅವಲಕುಪ್ಪ ಜಯರಾಮರೆಡ್ಡಿ ಇದ್ದರು. ಐದು ಜನರ ತಂಡ ವಿಶ್ವ ಹಿಂದೂ ಪರಿಷತ್ ಮುಖಂಡರೊಂದಿಗೆ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಎಂ.ಜಿ.ರಸ್ತೆಯಲ್ಲಿ ಮೆರವಣಿಗೆಯಲ್ಲಿ ಹೋದಾಗ ಊರಿನ ಹಿರಿಯರು ಆಶಿರ್ವಧಿಸಿ ಸುಹಾಸಿನಿಯರು ಆರತಿ ಎತ್ತಿ ತಿಲಕವಿಟ್ಟು ಶುಭಕೋರಿ ಕಳಸಿಕೊಟ್ಟರು ನಂತರ ಕಾರಿನಲ್ಲಿ ಬೆಂಗಳೂರಿಗೆ ಹೋದವರಿಗೆ ಕೆ.ಕೆ.ಎಕ್ಸಪ್ರೆಸ್ ರೈಲಿನಲ್ಲಿ ಹೋಗಲು ಅನಕೂಲ ಮಾಡಲಾಗಿದ್ದು ಬರಿಗಾಲಿಂದ ಹಲವಾರು ಕಿಲೋಮೀಟರ್ ನಡೆದು ಅಯೋಧ್ಯೆ ತಲುಪಿದ್ದ ಇವರಿಗೆ ಪೊಲೀಸರ ಬಂದೂಕು, ಲಾಠಿಯ ಸ್ವಾಗತ ಎದುರಾಗಿತ್ತು. ಆದರೂ ಧೃತಿಗೆಡದೇ ಮುನ್ನುಗ್ಗಿ ಡಿಸೆಂಬರ್ ಒಂದರಂದು ಅಯೋಧ್ಯೆ ಸೇರಿಕೊಂಡಿದ್ದಾಗಿ ವಿವರಿಸುತ್ತಾರೆ.
ಒಬ್ಬರದು ಒಂದೊಂದು ಅನುಭವ
ನಂತರ ಎರಡನೆ ಹಂತದಲ್ಲಿ 4 ಜನರ ತಂಡ ಕೋಲಾರದ ಸಂಘದ ಕಾರ್ಯಕರ್ತರೊಂದಿಗೆ ಬೆಂಗಳೂರಿಗೆ ಹೋಗಿ ಬೆಂಗಳೂರಿನಿಂದ ಮಧ್ಯಪ್ರದೇಶದ ಹಿಟಾಚಿಗೆ ಹೋಗಿ ನಂತರ ಅಯೋಧ್ಯೆ ಸೇರಿದ ಘಟನೆಯನ್ನು ಕರಸೇವಕ ಕುಮ್ಮಗುಂಟೆಸುಬ್ಬಾರೆಡ್ಡಿ ಮೆಲಕು ಹಾಕುತ್ತಾರೆ. ಎರಡನೆ ಹಂತದಲ್ಲಿ ಹೋದವರ ತಂಡದಲ್ಲಿ ಕುಮ್ಮಗುಂಟೆಸುಬ್ಬಾರೆಡ್ಡಿ,ನಲ್ಲಪಲ್ಲಿರೆಡ್ದಪ್ಪ,ನಾಗದೇನಹಳ್ಳಿ ನಾಗರಾಜ,ಯಲ್ದೂರುಮಂಜುನಾಥ್, ಕರಸೇವಕರಾಗಿ ಹೋದ ಅಲ್ಲಿನ ಜನ ಗೌರ್ಹಾನಿತವಾಗಿ ನಡೆಸಿಕೊಂಡರು ಅಲ್ಲಿ ಜವಾಬ್ದಾರಿ ಹೊತ್ತವರು ನಮ್ಮನ್ನು ಸರಿಯೂ ನದಿಗೆ ತೆರಳಿ ನೀರು ಮತ್ತು ಮರಳನ್ನು ಸಂಗ್ರಹಿಸಲು ಸೂಚಿಸಿದರು.
ಮರಳು ಸಂಗ್ರಹಿಸಲು ನಿರಾಕರಿಸಿದ ಅಂಜನೇಯ
ನೀರು ಮತ್ತು ಮರಳನ್ನು ಸಂಗ್ರಹಿಸಲು ಕರಸೇವಕರಿಗೆ ಸೂಚಿಸಿದಾಗ ಅವಲಕುಪ್ಪ ಅಂಜನೇಯರೆಡ್ಡಿ ನಿರಾಕರಿಸಿ ನಮ್ಮನ್ನು ಕಟ್ಟಡ ಧ್ವಂಸಮಾಡಲು ಕರೆತಂದು ನೀರು ಮತ್ತು ಮರಳು ಸಂಗ್ರಹಿಸಲು ಸೂಚಿಸಿದರೆ ಸಾಧ್ಯವಾಗದು ಎಂದವರೆ ಜೈ ಶ್ರೀರಾಮ್ ಎನ್ನುತ್ತ ಗುಂಬಜ್ ಮೇಲೆ ಹತ್ತಿ ಸಾಹಸ ಮೆರದರಾದರು ಜನರ ದೊಂಬಿ ತಳ್ಳಾಟದಲ್ಲಿ ಕೆಳಗೆ ಬಿದ್ದು ಗಾಯಗೊಂಡರು ಎಂದು ಜೊತೆಯಲ್ಲಿದ್ದ ನರಸಿಂಹನಾಯಕ್ ನೆನಪಿಸಿಕೊಳ್ಳುತ್ತಾರೆ.ಕರಸೇವೆ ಕಾರ್ಯ ಮುಗಿಸಿ ಊರಿಗೆ ವಾಪಸ್ಸು ಬರುವಾಗ ಬಹಳಷ್ಟು ರೈಲು ನಿಲ್ದಾಣಗಳಲ್ಲಿ ಕರಸೇಕರಿದ್ದ ರೈಲುಗಳ ಮೇಲೆ ದುಷ್ಕರ್ಮಿಗಳು ಕಲ್ಲಿನ ಮಳೆಯನ್ನೆ ಸುರಿಸಿ ಅಟ್ಟಹಾಸ ಮೆರೆದರು ಇದರ ನಡುವೆ ನಮ್ಮ ತಂಡ ಗೋರಕ್ ಪುರ ರೈಲು ನಿಲ್ದಾಣ ತಲುಪಿದಾಗ ಅಲ್ಲಿ ಸಹ ಗಲಭೆಗಳಾಗುತಿತ್ತು ಅಲ್ಲಿನ ಘನಘೋರ ದೃಶ್ಯಗಳು ಎಂತವರನ್ನು ಬೆಚ್ಚಿಬಿಳಿಸುವಂತಿತ್ತು ಎಂದು ಚಂದ್ರಶೇಖರ್ ಆಜಾದ್ ಕರಾಳ ಅನುಭವ ಹಂಚಿಕೊಂಡಿದ್ದಾರೆ.
ರಾಮಭಕ್ತರಿಗೆ ಜೈಲುವಾಸ
ಶ್ರೀನಿವಾಸಪುರದಲ್ಲಿ ಅಯೋಧ್ಯೆ ವಿಷಯದ ಹೋರಾಟಕ್ಕೆ ಸಿದ್ದತೆ ಮಾಡಿಕೊಂಡಿದ್ದ ಸಂಘಪರಿವಾರದ ಹಾಗು ವಿಶ್ವಹಿಂದು ಪರಿಷತ್ ಕಾರ್ಯಕರ್ತರಲ್ಲಿ ಒಂಬತ್ತು ಜನರ ತಂಡ ಕರಸೇವೆಗೆ ಅಯೋಧ್ಯೆಗೆ ಹೊರಟರೆ ಇತ್ತ ಇದ್ದ ಕಾರ್ಯಕರ್ತರು ರಾಮಜನ್ಮಭೂಮು ಹೋರಾಟ ಮಾಡಲು ಮುಂದಾದ ನಮ್ಮನ್ನು ಪೋಲಿಸರು ಬಂಧಿಸಿ ಜೈಲಿಗಟ್ಟಿದ್ದರು ಎಂದು ಕಪಾಲಿಮೋಹನ್ ಹೇಳುತ್ತಾರೆ .ಜೈಲಿಗೆ ಹೊದವರಲ್ಲಿ ಕಪಾಲಿಮೋಹನ್,ವೇಮಣ್ಣ.ಹೋಟೆಲ್ ಕಿಟ್ಟಣ್ಣ,ಜನತಾ ಕ್ಯಾಂಟಿನ್ ಮಂಜು,ಶಿಕ್ಷಕ ಚೊಕ್ಕರೆಡ್ಡಿ ಹಾಗು ಸಂಘದ ಖಟ್ಟಾಳು ಪತ್ರಕರ್ತ ದಿವಂಗತರಾಮಕೃಷ್ಣಪ್ಪ ಸೇರಿದಂತೆ ನಮ್ಮನ್ನು ಶ್ರೀನಿವಾಸಪುರ ಪೋಲಿಸರು ಅನಗತ್ಯವಾಗಿ ಬಂಧಿಸಿ ಜೈಲಿನಲ್ಲಿ ಇಡುವ ಮೂಲಕ ಅಯೋಧ್ಯೆ ಜಾಗೃತಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದರು ಎಂದು ವೇಮಣ್ಣ ತಿಳಿಸಿದರು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Friday, November 22