ಶ್ರೀನಿವಾಸಪುರ:ಶ್ರೀರಾಮನ ಪ್ರಾಣಪ್ರತಿಷ್ಟಾಪನೆ ಅಂಗವಾಗಿ ಶ್ರೀನಿವಾಸಪುರ ಪಟ್ಟಣದ ಆಟೋಚಾಲಕರ ಸಂಘದ ವತಿಯಿಂದ ಅನ್ನದಾನ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಆಟೋಚಾಲಕರ ಸಂಘದ ಮುಖ್ಯಸ್ಥ ಜಗದೀಶ್@ಆಟೋಜಗನ್ ಮಾತನಾಡಿ ಶ್ರೀರಾಮ ಭಕ್ತಿಯ ಪ್ರತಿಕ ಅಂತಹ ರಾಮನ ಮಂದಿರ ಉದ್ಘಾಟನೆ ಆಗಿರುವುದು ನಮ್ಮ ಹಿಂದಿನ ಪೀಳಿಗೆಯವರಿಗೆ ಸಿಗದ ಅದೃಷ್ಟ ನಮಗೆ ಸಿಕ್ಕಿದೆ ಇದು ನಾವು ಮಾಡಿರುವ ಪುಣ್ಯದ ಫಲ ಎಂದು ಎಂದರು. ಸೌಹಾರ್ದತೆಯಿಂದ ರಾಮಮಂದಿರ ಲೋಕಾರ್ಪಣೆಯಾಗಿದ್ದು ಶ್ರೀರಾಮನ ಕೃಪಾಕಟಾಕ್ಷ ನಮ್ಮಂತ ದುಡಿಯುವ ವರ್ಗದ ಮೇಲೆ ಇರುತ್ತದೆ ಎನ್ನವ ನಂಬಿಕೆ ಇಟ್ಟು ಬದುಕು ಸಾಗಿಸೋಣ ಎಂದರು.ಬಸ್ ನಿಲ್ದಾಣದ ಬಳಿಯ ಮಹಾತ್ಮಗಾಂಧಿ ಆಟೋಚಾಲಕರ ಸಂಘ ಹಾಗು ಮುಳಬಾಗಿಲು ವೃತ್ತದ ಆಟೋಚಾಲಕರು ತಮ್ಮ ನಿಲ್ದಾಣಗಳಲ್ಲಿ ಕೆಸರಿ ಧ್ವಜಗಳನ್ನು ಹಾರಿಸಿ ವಿದ್ಯತ್ ದೀಪಾಲಂಕರಣ ಮಾಡಿ ಶ್ರೀರಾಮನ ಫೋಟೋ ಇಟ್ಟು ಪೂಜೆ ಸಲ್ಲಿಸಿ ಪುನೀತರಾದರು.ಅವರು ಕಟ್ಟಿದ್ದ ರಾಮರಾಜ್ಯ ಪ್ರಾರಂಭ ಎನ್ನುವ ಬ್ಯಾನರ್ ಅಕರ್ಷಣೀಯವಾಗಿತ್ತು.ಹಿರಿಯ ಆಟೋಚಾಲಕ ರಮೇಶ್ ಮುಂತಾದವರು ಇದ್ದರು.

