ಶ್ರೀನಿವಾಸಪುರ:ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಶ್ರೀನಿವಾಸನ್ ಕೊಲೆ ಅರೋಪದಲ್ಲಿ ಬಂದಿತನಾಗಿರುವ ಆರೋಪಿಯ ತಾಯಿ ಪುರಸಭೆ ಸದಸ್ಯೆಯಾಗಿದ್ದು ಆಕೆ ಪುರಸಭೆ ಸದಸ್ಯೆಯಾಗಿ ಮುಂದುವರೆಯಬಾರದು ಈ ತಕ್ಷಣ ರಾಜಿನಾಮೆ ನೀಡಬೇಕು ಮತ್ತು ಆಕೆ ತನ್ನ ಮನೆಗೆ ಪುರಸಭೆ ವತಿಯಿಂದ ಅಕ್ರಮ ಬಿಲ್ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಅಗ್ರಹಿಸಿ ವಾರ್ಡ್ ನಂ 20 ನಿವಾಸಿಗರು ಪುರಸಭೆ ಸದಸ್ಯೆ ಲೀಲಾವತಿ ಶ್ರೀನಿವಾಸ್ ಮನೆ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ದಲಿತ ಸಮುದಾಯದ ಪ್ರಭಾವಿ ಕಾಂಗ್ರೇಸ್ ಮುಖಂಡ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಶ್ರೀನಿವಾಸನ್ ಕಳೆದ ಅಕ್ಟೋಬರ್ ನಲ್ಲಿ ತಮ್ಮ ತೋಟದ ಮನೆ ಬಳಿ ಬರ್ಬರವಾಗಿ ಕೊಲೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿದಂತೆ ಕೆಲವೆ ಗಂಟೆಗಳ ಅವಧಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂದಿಸಿದ್ದರು, ಬಂದಿತ ಆರೋಪಿಗಳಲ್ಲಿ ಶ್ರೀನಿವಾಸಪುರ ಪಟ್ಟಣದ ವಾರ್ಡ್ ನಂ 20 ಪುರಸಭೆ ಸದಸ್ಯೆ ಲೀಲಾವತಿ ಶ್ರೀನಿವಾಸ್ ರವರ ಮಗ ಚಂದನ್ ಸಹ ಆರೋಪಿಯಂದು ಪೋಲಿಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ, ಕೊಲೆ ಘಟನೆ ನಡೆದ ನಂತರದಲ್ಲಿ ಪುರಸಭೆ ಸದಸ್ಯೆ ಲೀಲಾವತಿ ಶ್ರೀನಿವಾಸ್ ಮತ್ತು ಅವರ ಪತಿ ಮಾಜಿ ಸದಸ್ಯ ಶ್ರೀನಿವಾಸ್ ಅವರ ಕುಟುಂಬ ನಾಪತ್ತೆಯಾಗಿದ್ದರು.ನಂತರದಲ್ಲಿ ಇತ್ತಿಚಿಗೆ ಜಗಜೀವನ ಪಾಳ್ಯದಲ್ಲಿರುವ ತಮ್ಮ ಮನೆಗೆ ಪುರಸಭೆ ಸದಸ್ಯೆ ಲೀಲಾವತಿ ಶ್ರೀನಿವಾಸ್ ಪತಿ ಇತ್ತಿಚಿಗೆ ಬಂದಿದ್ದು ಇದಕ್ಕೆ ಸ್ಥಳೀಯರು ವಿರೋದ ವ್ಯಕ್ತಪಡಿದ್ದಾರೆ. ಪುರಸಭೆ ಸದಸ್ಯೆ ನೈತಿಕ ಹೊಣೆ ಹೊತ್ತು ಕೂಡಲೆ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಲೀಲಾವತಿ ಶ್ರೀನಿವಾಸ್ ಮನೆಯ ಮುಂದೆ ಪ್ರತಿಭಟನೆ ಮಾಡಿ ಅವರ ಪ್ರತಿಕೃತಿ ದಹನ ಮಾಡಿದ್ದಾರೆ ರಾಜೀನಾಮೆಗೆ ಒತ್ತಾಯಿಸಿ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಕೊಳ್ಳ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಶ್ರೀನಿವಾಸನ್ ಅವರ ಕೊಲೆ ಪ್ರಕರಣವನ್ನು ಸರ್ಕಾರ ಸಿಒಡಿ ತನಿಖೆಗೆ ಒಳಪಡಿಸಿದೆ.