ಶ್ರೀನಿವಾಸಪುರ: ಜನರಿಗೆ ಒದಗಿಸುವ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ಅಭಿವೃದ್ಧಿ ಮಹತ್ವದ್ದು ಅದನ್ನು ಒದಗಿಸುವಾಗ ಜನತೆ ಯಾಕೆ ಬೇಡ ಅನ್ನುತ್ತಾರೆ,ಅದರಲ್ಲೂ ಪ್ರಮುಖ ರಸ್ತೆಯೊಂದರ ಅಭಿವೃದ್ಧಿಯಿಂದ ಊರಿಗೆ ಎಷ್ಟೆಲ್ಲಾ ಅನಕೂಲ ಅಗುತ್ತದೆ ಎಂದರೆ ಊರಿನ ಜನತೆ ಖುಷಿ ಪಡುತ್ತಾರೆ, ಆದರೆ ಶ್ರೀನಿವಾಸಪುರದ ಪೋಸ್ಟಾಫಿಸ್ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಶ್ರೀನಿವಾಸಪುರದ ಅಧಿಕಾರಿಗಳ ಎಡವಟ್ಟೊ ಸ್ಥಳೀಯ ರಾಜಕೀಯ ಅಡ್ಡಗಾಲೋ ಅವೈಜ್ಞಾಕವಾದ ರಸ್ತೆ ನಿರ್ಮಾಣದಿಂದಾಗಿ ಮತ್ತಷ್ಟು ಸಮಸ್ಯೆಗಳು ಪೋಸ್ಟಾಫಿಸ್ ರಸ್ತೆಯನ್ನು ಕಾಡುತ್ತದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಂತಹ ರಸ್ತೆ ಅಭಿವೃದ್ಧಿ ನಮಗೆ ಬೇಡ ಎನ್ನುತ್ತಿದ್ದಾರೆ.
ಮುಂಬರುವ ದಿನಗಳಲ್ಲಿ ವಾಹನ ಸಂಚಾರ ದಟ್ಟನೆ ಹೆಚ್ಚಳ!
ಹಿಂದೆಲ್ಲ ರಸ್ತೆಗಳ ನಿರ್ಮಾಣ ಮಾಡಿದರೆ ಮುಂದಿನ ಐವತ್ತು ವರ್ಷಗಳು ಕಾಲ ರಸ್ತೆ ಸಂಚಾರಕ್ಕೆ ಅನಕೂಲವಾಗಿರಬೇಕು ಎನ್ನುವ ಕಾಲ ಇತ್ತು, ಈಗಿನ ಬದಲಾದ ಕಾಲ ಘಟ್ಟದಲ್ಲಿ ಜನ ಸಂಚಾರ ವಾಹನ ಸಂಚಾರ ದಿನೆದಿನೆ ಏರುತ್ತಿರುವ ಹಿನ್ನಲೆಯಲ್ಲಿ ರಸ್ತೆ ಆದಷ್ಟು ವಿಶಾಲವಾಗಿರಬೇಕು ಗುಣಮಟ್ಟದಾಗಿರಬೇಕು ಎನ್ನುವ ಕಾಲ, ಇದಕ್ಕೆ ತದ್ವಿರುದ್ದ ಎನ್ನುವಂತೆ ಪೋಸ್ಟಾಫಿಸ್ ರಸ್ತೆ ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಪುರಸಭೆ ಕಚೇರಿ ಪಕ್ಕದಲ್ಲೆ ಇರುವ ಪೋಸ್ಟಾಫಿಸ್ ರಸ್ತೆ ಮೂಲಕ ವೆಂಕಟೇಶ್ವರ ಬಡಾವಣೆ,ಕೊಳ್ಳುರು ಹೊಸ ಬಡಾವಣೆ ಮತ್ತು ಝಾಕೀರ್ ಹುಸೇನ್ ಮೊಹಲ್ಲಾ ಜನರು ಪಟ್ಟಣಕ್ಕೆ ಆಗಮಿಸಲು ಸಂಪರ್ಕ ರಸ್ತೆಯಾಗಿ ಬಳಕೆ ಮಾಡುತ್ತಾರೆ ಎರಡು ಮೂರು ಬಡಾವಣೆ ಜನರು ಬಳಸುವ ರಸ್ತೆ ವಿಶಾಲವಾಗಿದ್ದರೆ ಸುಗಮ ಸಂಚಾರಕ್ಕೆ ಅನಕೂಲ ಎಂಬುದು ವೆಂಕಟೇಶ್ವರ ಬಡಾವಣೆ ಜನರ ಮಾತು ಆದರೆ ಅಗಲವಾಗಿ ವಿಶಾಲವಾದ ರಸ್ತೆ ನಿರ್ಮಾಣ ಮಾಡಬೇಕು ಎಂತಿದ್ದ ಜಾಗದಲ್ಲಿ ಅನಾವಶ್ಯಕವಾಗಿ ಮೋರಿ ನಿರ್ಮಿಸಿ ಉಳಿದಂತ ಕಿರಿದಾದ ಜಾಗದಲ್ಲಿ ಸಣ್ಣದಾಗಿ ರಸ್ತೆ ನಿರ್ಮಿಸುವಂತ ಕಾರ್ಯ ಆಗುತ್ತಿದೆ, ಅಗಲವಾದ ರಸ್ತೆ ನಿರ್ಮಾಣ ಮಾಡುವ ನೆಪದಲ್ಲಿ ಪುರಸಭೆ ಮಳಿಗೆಗಳನ್ನು ಕೆಡವಿದ ಇಲ್ಲಿನ ಆಡಳಿತ ಈಗ ಟಿ.ಎ.ಪಿ.ಸಿ.ಎಂ.ಎಸ್ ಕಟ್ಟಡ ಹಾಗು ಪೋಸ್ಟಾಫಿಸ್ ಕಾಂಪೌಂಡ್ ಗೋಡೆ ಕೆಡವಲು ಇಲ್ಲದ ಸಬೂಬು ಹೇಳುತ್ತಿದೆ ಎಂದು ಸಾರ್ವಜನಿಕರು ಹೇಳುವ ಮಾತು.
ಕಳೆದ ಒಂದು ದಶಕದಿಂದ ಪೋಸ್ಟಾಫಿಸ್ ರಸ್ತೆ ನಿರ್ಮಾಣಕ್ಕೆ ಕಾಲಕೂಡಿಬರಲಿಲ್ಲ ಧೂಳು ಹಳ್ಳಕೊಳ್ಳದ ರಸ್ತೆಯಲ್ಲಿ ಜನ ಆಡಳಿತಕ್ಕೆ ಶಾಪ ಹಾಕುತ್ತ ಸಂಚಾರ ಮಾಡುತ್ತಿದ್ದರು. ಕಳೆದ ಆಡಳಿತದಲ್ಲಿ ಅಂದಿನ ಅಧಿಕಾರ ರೂಡ ಜನಪ್ರತಿನಿಧಿ ಸಾಹಸ ಪಟ್ಟು ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದದಾರೂ ರಸ್ತೆ ನಿರ್ಮಾಣಕ್ಕೆ ನೂರೆಂಟು ವಿಘ್ನಗಳು ಎದುರಾದವು,ಪ್ರತಿಷ್ಟಿತರು ಬಲಿಷ್ಟರು ಸಹಕಾರ ನೀಡದ ಹಿನ್ನಲೆಯಲ್ಲಿ ಲೋಕೋಪಯೋಗಿ ಹಾಗು ಪುರಸಭೆ ಅಧಿಕಾರಿಗಳು ಎಲ್ಲವೂ ಸರಿ ಹೋದರೆ ನಾವು ರಸ್ತೆ ನಿರ್ಮಿಸುತ್ತೇವೆ ಎಂದು ಕಾಲ ಕಳೆದರು,ಸಂಘ ಸಂಸ್ಥೆಗಳ ಹೋರಾಟ ಸಾರ್ವಜನಿಕರ ಒತ್ತಾಯದ ಫಲ ಈಗ ಮತ್ತೆ ರಸ್ತೆ ನಿರ್ಮಾಣ ಕಾರ್ಯ ಶುರುವಾಗಿದೆ ಈಗಲೂ ಕೆಲ ಪ್ರತಿಷ್ಟಿತರ ಅಡ್ಡಗಾಲು ಹಾಕುತ್ತಿರುವ ಪರಿಣಾಮ ಪೋಸ್ಟಾಫಿಸ್ ರಸ್ತೆ ಅಗಲವಾಗಿ ನಿರ್ಮಾಣ ಮಾಡಲು ಅಡ್ಡಿಯಾಗಿದಿಯಂತೆ,ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ (ಟಿ.ಎ.ಪಿ.ಸಿ.ಎಂ.ಎಸ್) ಕಟ್ಟಡ ಇದೊಂದು ಸಹಕಾರಿ ಸಂಸ್ಥೆ ಕಟ್ಟಡ ಈ ಕಟ್ಟಡದಲ್ಲಿ ನಡೆಯುತ್ತಿರುವ ಬಾರ್ ಅನ್ನು ತೆರವು ಮಾಡಲು ಮೀನಾ ಮೇಷ ಎಣೆಸುತ್ತಿರುವ ಇಲ್ಲಿನ ಆಡಳಿತ,ಪೋಸ್ಟಾಫಿಸ್ ಕಾಂಪೌಂಡ್ ಗೋಡೆ ತೆರವು ಮಾಡಲು ಪರ್ಮಿಷನ್ ಸಿಗಲಿಲ್ಲ ಎಂಬ ಕುಂಟು ನೆಪ ಮುಂದಿಟ್ಟುಕೊಂಡು ಇಕ್ಕಾಟ್ಟಾದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಜನರು ಆರೋಪಿಸುತ್ತಾರೆ. ಇಂತಹ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾರ್ಯವನ್ನು ಸ್ವತಃ ಜಿಲ್ಲಾಧಿಕಾರಿಗಳು ಬಂದು ವಿಕ್ಷಿಸಿ ಅಗಲವಾದ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.