ಶ್ರೀನಿವಾಸಪುರ:ಸುಮಾರು ಅರವತ್ತುಕ್ಕೂ ಹೆಚ್ಚು ಜನ ರಾಮಭಕ್ತರು ಇಂದು ಅಯೋಧ್ಯೆಯ ಶ್ರೀರಾಮಲಲ್ಲಾನ ದರ್ಶನ ಮಾಡಲು ಹೋರಟರು.
ಅರವತ್ತುಕ್ಕೂ ಜನರ ತಂಡ ಅಯೋಧ್ಯೆಗೆ ಪ್ರಯಾಣ ಬೆಳಿಸಿದ್ದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಮೂಲಕ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಚಿರುವುನಹಳ್ಳಿಲಕ್ಷ್ಮಣಗೌಡ ಮಾತನಾಡಿ ರಾಮಲಲ್ಲಾನ ದರ್ಶನಕ್ಕೆ ಹೋಗುತ್ತಿರುವ ನಮಗೆ ಸಂತಸವಾಗುತ್ತಿದೆ ಇಲ್ಲಿಂದ ನಾವು ಬೆಂಗಳೂರಿನ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣಕ್ಕೆ ಹೋಗಲಿದ್ದು ಅಲ್ಲಿ ವಿಶೇಷ ರೈಲಿನಲ್ಲಿ ಬುಧವಾರ ನಸುಕಿನ ಜಾವದಲ್ಲಿ ಅಯೋಧ್ಯೆಗೆ ತೆರಳಲಿರುವುದಾಗಿ ಹೇಳಿದರು, ಅಯೋಧ್ಯೆಗೆ ಹೋರಟಿರುವ ನಮಗೆ ಊಟ ಉಪಚಾರವನ್ನು ಅತ್ಯಂತ ವ್ಯವಸ್ಥೆವಾಗಿ ಮಾಡಲಾಗಿದೆ ಎಂದು ತಿಳಿಸಿದರು.
ಅಯೋಧ್ಯೆ ಯಾತ್ರಾತ್ರಿಗಳು ಸುಖಕರವಾಗಿ ಪ್ರಯಾಣಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ ಟಿ.ನಾರಯಣಸ್ವಾಮಿ,ವಿಶ್ವಹಿಂದು ಪರಿಷತ್ ಮುಖಂಡ ವೇಮಣ್ಣ,ದಿವಾಕರ್,ಜಯರಾಮರೆಡ್ಡಿ ಶುಭ ಹಾರೈಸಿದರು.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Saturday, November 23