ಶ್ರೀನಿವಾಸಪುರ:ಪಟ್ಟಣದಲ್ಲಿ ಮರುಬಳಕೆ ಮಾಡಬಹುದಾದ ಒಣಕಸ ವಿಲೇವಾರಿಗಾಗಿ ಶ್ರೀನಿವಾಸಪುರ ಪುರಸಭೆ ವತಿಯಿಂದ ವಿಶೇಷವಾದ ಕಾರ್ಯಕ್ರಮ ರೂಪಿಸಿದೆ ಪಟ್ಟಣವನ್ನು ಸ್ವಚ್ಛ ಮತ್ತು ಸುಂದರವನ್ನಾಗಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ್ ಹೇಳಿದರು.ಅವರು ಪುರಸಭೆ ವತಿಯಿಂದ ಆರಂಭಿಸಿರುವ ಒಣತ್ಯಾಜ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿ ಮಾತನಾಡಿದರು.
ಜನತೆ ರಸ್ತೆ ಬದಿಗೆ ಹಾಕುವಂತ ಒಣಕಸದಲ್ಲಿ ಮರುಬಳಕೆಯಾಗುವ ಪ್ಲಾಸ್ಟಿಕ್ ಸಂಬಂದಿಸಿದಂತ ಘನತ್ಯಾಜ್ಯವನ್ನು ಬೆರ್ಪಡಿಸುವ ಪೌರಕಾರ್ಮಿಕರು ಇಲ್ಲಿಗೆ ತಂದು ಸಂಗ್ರಹಿಸುತ್ತಾರೆ. ಇದಕ್ಕೆ ಪಟ್ಟಣದ ಸಾರ್ವಜನಿಕರು ಸಹಕಾರ ನೀಡುವ ಅವಶ್ಯಕತೆ ಇದೆ
ಎಲ್ಲೆಂದರಲ್ಲಿ ಕಸ ಬೀಸಾಡುವುದರಿಂದ ಪಟ್ಟಣದ ಅಂದ ಕೆಡುತ್ತಿತ್ತದೆ,ಬೀದಿ ನಾಯಿಗಳು ಕೋತಿಗಳು ಕಸವನ್ನು ಚಲ್ಲಾಪಿಲ್ಲಿ ಮಾಡುತ್ತದೆ ಜೊತೆಗೆ ಅವುಗಳು ಅದರಲ್ಲಿ ಆಹಾರ ಹುಡುಕಿ ತಿಂದರೆ ಅನೇಕ ಸಾಂಕ್ರಾಮಿಕ ರೋಗಗಳಿಗೂ ಕಾರಣವಾಗುತ್ತದೆ ಇವೆಲ್ಲವುಗಳಿಗೆ ಪರಿಹಾರ ಕಂಡುಕೊಳ್ಳಲು ಪುರಸಭೆ ವತಿಯಿಂದ ಈ ಪ್ರಯೋಗ ಮಾಡಲಾಗಿದೆ ಎಂದರು.
ಪುರಸಭೆ ಆರೋಗ್ಯ ನೀರಿಕ್ಷಕ ರಮೇಶ್ ಮಾತನಾಡಿ ಘನತ್ಯಾಜ್ಯ ಸಂಗ್ರಹದಲ್ಲಿ ಆದ್ಯತೆ ಮೇರೆಗೆ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಹಳೆ ಬಟ್ಟೆಯಂತ ತ್ಯಾಜ್ಯಗಳನ್ನು ವಿವಿಧ ರೀತಿಯ ಘನತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸಿ ನಂತರ ಬೇರೆಯಾಗಿ ವಿಲೇವಾರಿ ಮಾಡಲಾಗುತ್ತದೆ. ವಿಶೇಷವಾಗಿ ಬಲ್ಬ್, ಬ್ಯಾಟರಿಗಳು,ಪ್ಲಾಸ್ಟಿಕ್ ಪೇಪರ್ ನೀರಿನ ಬಾಟಲ್, ಗಾಜು, ಮದ್ಯದ ಕಾಲಿ ಗಾಜು ಸಿಸಾಯಿ,ಚಪ್ಪಲಿ,ಲೋಹದ ವಸ್ತುಗಳು,ಕಾರ್ಟೂನ್ ಬಾಕ್ಸ್,ಥರ್ಮಾಕೊಲ್,ಇ-ತ್ಯಾಜ್ಯದಂತ ವಸ್ತುಗಳನ್ನು ಪೌರಕಾರ್ಮಿಕರು ಸಂಗ್ರಹಿಸಿ ಇಲ್ಲಿಗೆ ತಂದು ಬೇರ್ಪಡಿಸುತ್ತಾರೆ ನಂತರದಲ್ಲಿ ಹಂತಹಂತವಾಗಿ ವಿಲೇವಾರಿ ಮಾಡಲಾಗುತ್ತದೆ. ಸಾರ್ವಜನಿಕರು ತಮಗೆ ಅಗತ್ಯವಿಲ್ಲದ ಹಾಗು ಬಿಸಾಡುವಂತ ಒಣತ್ಯಾಜ್ಯದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದೆ ತಂದು ಪುರಸಭೆ ಒಣತ್ಯಾಜ್ಯ ಸಂಗ್ರಹ ಕೇಂದ್ರದಲ್ಲಿ ನೀಡಬಹುದು ಎಂದರು. ಈ ಸಂದರ್ಭದಲ್ಲಿ ಪರಿಸರ ಅಭಿಯಂತರ ಲಕ್ಷ್ಮೀಶ್ ಹಾಗೂ ಸಿಬ್ಬಂದಿ ಬಾಲಕೃಷ್ಣ ಇದ್ದರು. ಪೋಟೋ