ಶ್ರೀನಿವಾಸಪುರ:ರಾಜ್ಯದಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಹಿತ ಕಾಪಾಡುವುದರಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು,ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ತು ಸದಸ್ಯ ವೈ.ಎ.ನಾರಾಯಣಸ್ವಾಮಿ ಆರೋಪಿಸಿದರು.ಅವರು ಇಂದು ಶ್ರೀನಿವಾಸಪುರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಅನಗತ್ಯ ಗೊಂದಲ ಸೃಷ್ಠಿಯಾಗುತ್ತಿದೆ,ಶಿಕ್ಷಕರ ವಿಚಾರದಲ್ಲಿ ಇಲ್ಲದ ಸಮಸ್ಯಗಳನ್ನು ಹುಟ್ಟುಹಾಕುತ್ತ ವ್ಯವಸ್ಥೆಯನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ,ಸಂಸ್ಕಾರ ತಿಳುವಳಿಕೆ ಇಲ್ಲದಂತ ವ್ಯಕ್ತಿಯನ್ನು ಶಿಕ್ಷಣ ಮಂತ್ರಿ ಮಾಡಿರುವ ಸಿದ್ದರಾಮಯ್ಯ ಸರ್ಕಾರ ಶಿಕ್ಷಕಕರು,ವಿದ್ಯಾರ್ಥಿಗಳು,ಶಿಕ್ಷಣ ವ್ಯವಸ್ಥೆ ಹಾಗು ಶಿಕ್ಷಣ ಸಂಸ್ಥೆಗಳ ಕುರಿತಂತೆ ಅಸಹನೆ ಹಾಗು ನಿರ್ಲಕ್ಷ್ಯ ನಿಲವು ಹೊಂದಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಅಡಳಿತರೂಡ ಕಾಂಗ್ರೆಸ್ ಸರ್ಕಾರದ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ,ರಾಜ್ಯದ ಅಭಿವೃದ್ದಿ ಕುಂಠಿತಗೊಂಡಿದೆ ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣ ಇರುವುದಿಲ್ಲ ಎಂದರು.
ಶಿಕ್ಷಕರಿಗೆ ಒಳಿತು ಮಾಡಿದ್ದ ಬಿಜೆಪಿ ಸರ್ಕಾರ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಿಕ್ಷಕರ ಪರವಾಗಿ ಉತ್ತಮ ನೀಲವು ಹೊಂದಿತ್ತು ಅಲ್ಲದೆ 4400 ಜೆಒಸಿ ಶಿಕ್ಷಕರನ್ನು, 1500 ಅರೆಕಾಲಿಕ ಶಿಕ್ಷಕರನ್ನು,ಗುತ್ತಿಗೆ ಆದಾರದ ಮೇಲಿನ 5201 ಸಹಶಿಕ್ಷಕರನ್ನ ಸೇರಿದಂತೆ ಹಲವಾರು ಹಂತದಲ್ಲಿ ಶಿಕ್ಷಕರ ಉದ್ಯಗ ಖಾಯಂ ಮಾಡುವ ಮೂಲಕ ಅವರ ಭವಿಷ್ಯತ್ ರೂಪಿಸಿಕೊಟ್ಟಿದೆ ಮತ್ತು ಮುರಾರ್ಜಿ ಶಾಲೆಯ 2500 ಶಿಕ್ಷಕರನ್ನ ನೇಮಕ ಮಾಡಿದ್ದು ಸಹ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 5 ವೇತನ , 7 ನೇ ವೇತನವನ್ನು ಜಾರಿಗೆ ತಂದಿದ್ದು, ಯಾರು ಎಂಬುದನ್ನು ಶಿಕ್ಷಕರು ಅರಿತುಕೊಳ್ಳಬೇಕು ಎಂದರು.
ಶಿಕ್ಷಕರೆ ನಿಮ್ಮ ಅಸ್ಮಿತೆ ಉಳಿಸಿಕೊಳ್ಳಿ
ಕಳೆದ ಎರಡು ದಶಕಗಳಿಂದ ನಿಮ್ಮ ಅಶಿರ್ವಾದ ಪಡೆದು ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಶಿಕ್ಷಕ ಬಂಧುಗಳೊಂದಿಗೆ ಅವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದೇನೆ. ಶಿಕ್ಷಕರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಮುಂದಿನ ದಿನಗಳಲ್ಲಿ ಚುನಾವಣೆ ಬರಲಿದೆ ಚುನಾವಣೆ ಅಂದ ಮೇಲೆ ಹಲವಾರು ಜನ ಬರುವುದು ಹೋಗುವುದು ಸಹಜ ಶಿಕ್ಷಕ ಬಂಧುಗಳು ತಮ್ಮ ಅಸ್ಮಿಯತೆ ಉಳಿಸಿಕೊಳ್ಳಿ ನಾನು ನಿಮ್ಮಲ್ಲಿ ಒಬ್ಬನಾಗಿ ಇರುತ್ತೇನೆ ಎಂಬುದನ್ನು ಮರೆಯಬೇಡಿ ನನಗೆ ಮತ್ತೊಂದು ಅವಕಾಶ ನೀಡಲು ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವಕುಮಾರ್, ಖಾಜಾಂಚಿ ಕೆ.ಸಿ.ಶ್ರೀನಿವಾಸ್, ಪ್ರತಿನಿದಿಗಳಾದ ಶ್ರೀನಿವಾಸರೆಡ್ಡಿ, ಜಿ.ಶ್ರೀನಿವಾಸಗೌಡ, ಟಿಪಿಒ ವೆಂಕಟಸ್ವಾಮಿ, ತಾಲೂಕು ಸಂಘದ ಅಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ಮುರಳಿ ಬಾಬು, ಖಜಾಂಚಿ ಸಿ.ಸುಬ್ರಮಣಿ, ಪದಾಧಿಕಾರಿಗಳಾದ ಅಶೋಕ್, ಚೆನ್ನಕೇಶವ, ಮಂಜುನಾಥ್, ಎಸ್ಸಿ, ಎಸ್ಟಿ ಸಮನ್ವಯ ಸಮಿತಿ ಅಧ್ಯಕ್ಷ ಎಸ್.ಮುನಿವೆಂಕಟಪ್ಪ, ಪ್ರತಿನಿದಿ ಆಂಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಬೈಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಖಾಚಾಂಜಿ ವೇಣುಗೋಪಾಲ್, ನಿರ್ದೇಶಕರಾದ ವೆಂಕಟರಾಮಿರೆಡ್ಡಿ, ಶಿವಾರೆಡ್ಡಿ, ನೌಕರರ ಸಂಘದ ಉಪಾಧ್ಯಕ್ಷ ಸಿ.ಎಂ.ವೆಂಕಟರಮಣ,ನಿರ್ದೇಶಕ ಎಂ.ಬೈರೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಮಾಜಿ ಅಧ್ಯಕ್ಷ ಗೋವಿಂದರೆಡ್ಡಿ, ಶಿಕ್ಷಕರಾದ ಪದ್ಮನಾಭಾಚಾರ್, ಹೊಗಳಗೆರೆ ನಾಗರಾಜ್, ಮುನಿವೆಂಕಟರೆಡ್ಡಿ, ನಿರ್ಮಲ್ಕುಮಾರ್, ಉಪನ್ಯಾಸಕಾರಾದ ಮಂಜುನಾಥ್, ಗಿರೀಶ್, ನಾಗರಾಜ್, ಶ್ರೀನಾಥ್, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಮುಖ್ಯಸ್ಥರಾದ ರಾಮಾಂಜಿ, ಮಲ್ಲಿಕಾರ್ಜುನ್ ಮುಂತಾದವರು ಇದ್ದರು.
Breaking News
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
- ಕೆಟ್ಟು ನಿಂತ ಬೆಂಗಳೂರು-ಕೋಲಾರ ಮೆಮೊ ರೈಲು ,ರಾತ್ರಿವೇಳೆ ಪರದಾಡಿದ ಪ್ರಯಾಣಿಕರು!
Saturday, April 5