ಶ್ರೀನಿವಾಸಪುರ:ಕರ್ನಾಟಕದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದಾಗಿದೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿ ಇನ್ನೂ ಫೈನಲ್ ಆಗದೆ ದಿನಕ್ಕೊಂದು ಸುದ್ಧಿ ಹೊರ ಬಿಳುತ್ತಿದೆ ಇನ್ನೇನೂ ಕೆಲವೆ ಗಂಟೆಗಳ ಅವಧಿಯಲ್ಲಿ ಚುನಾವಣೆ ದಿನಾಂಕ ಘೋಷಣೆ ಪ್ರಕಟನೆ ಹೊರಬಿಳುವ ಹೊತ್ತಿನಲ್ಲಿ ಅಭ್ಯರ್ಥಿ ಫೈನಲ್ ಆಗದೆ ಇರುವುದು ಜೆಡಿಎಸ್-ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಕೂತೂಹಲ ಮೂಡಿಸಿದೆ.
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಇರುವ ಎಂಟು ವಿಧಾನ ಸಭಾ ಕ್ಷೇತ್ರಗಳಾದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ಹಾಗು ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಕೋಲಾರ ವ್ಯಾಪ್ತಿಗೆ ಬರುತ್ತವೆ. ಶಿಡ್ಲಘಟ್ಟ,ಮುಳಬಾಗಿಲು,ಶ್ರೀನಿವಾಸಪುರ ಸೇರಿ ಮೂರು ವಿಧಾನ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ ಉಳಿದಂತೆ ಚಿಂತಾಮಣಿ,ಕೋಲಾರ,ಕೆ.ಜಿಎಫ್,ಬಂಗಾರಪೇಟೆ,ಮಾಲೂರು 5 ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ ಈ ಲೆಕ್ಕಾಚಾರದಲ್ಲಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಎನ್ನಲಾಗುತಿತ್ತು ಆದರೆ ದಿಡೀರ್ ಬೆಳೆವಣಿಗೆಯಲ್ಲಿ ಹಾಸನ ಮತ್ತು ಮಂಡ್ಯ ಎರಡು ಕ್ಷೇತ್ರಗಳು ಮಾತ್ರ ಜೆಡಿಎಸ್ ಗೆ ಉಳಿದಂತೆ ಕೋಲಾರ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ದೆ ಮಾಡುವ ಬಗ್ಗೆ ಮಾಹಿತಿ ಹೊರ ಬಂದಿದ್ದು ಬಲ್ಲ ಮೂಲಗಳ ಪ್ರಕಾರ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಮುನಿಸ್ವಾಮಿ ಅವರ ರಾಜಕೀಯ ಗುರು ಅರವಿಂದ ಲಿಂಬಾವಳಿಯವರನ್ನು ಕೋಲಾರದಲ್ಲಿ ಕಣಕ್ಕೆ ಇಳಿಸುವ ಕುರಿತಂತೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿದೆ ಎನ್ನಲಾಗುತ್ತಿದೆ.
ಇದೇ ಲೆಕ್ಕಾಚಾರ ಇರಬಹುದಾ
ಕೋಲಾರ ಮೀಸಲು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಇದುವರಿಗೂ ನಡೆದಂತ 17 ಚುನಾವಣೆಯಲ್ಲಿ 15ರಲ್ಲಿ ಕಾಂಗ್ರೆಸ್ ಗೆದ್ದಿದೆ ಎರಡು ಬಾರಿಗೆ ಹೊರಗಿನವರಿಗೆ ಕ್ಷೇತ್ರದ ಮತದಾರ ಮಣೆ ಹಾಕಿದ್ದಾನೆ ಹಾಗೆ ಒಮ್ಮೆ ಸೋತ ಅಭ್ಯರ್ಥಿಮತ್ತೆ ಗೆದ್ದ ಇತಿಹಾಸ ಇಲ್ಲ ಈ ಲೆಕ್ಕಾಚಾರದಲ್ಲೀ ಕಾಂಗ್ರೆಸ್ ಅಭ್ಯರ್ಥಿ ಅಯ್ಕೆಯಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿಯ ಅಯ್ಕೆ ಮೇಲೆ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯ ಅಯ್ಕೆ ಇರುತ್ತದೆ ಎನ್ನುತ್ತಾರೆ ರಾಜಕೀಯ ಪಂಡಿತರು.
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಇತಿಹಾಸ
ಕೋಲಾರ ಮೀಸಲು ಲೋಕಸಭಾ ಕ್ಷೇತ್ರ 1952 ರಿಂದ ಅಸ್ತಿತ್ವದಲ್ಲಿದೆ ಆರಂಭದಿಂದ 1957, 1962 ಮೂರು ಅವಧಿಗೆ ಕಾಂಗ್ರೆಸ್ ನ ದೊಡ್ಡತಿಮ್ಮಯ್ಯ ಅಯ್ಕೆಯಾಗಿದ್ದರು. 1967,1971,1977,1980 ನಾಲ್ಕು ಬಾರಿಗೆ ಕಾಂಗ್ರೆಸ್ ನ ಜಿ.ವೈ.ಕೃಷ್ಣನ್ ಅಯ್ಕೆಯಾಗಿದ್ದರು 1984 ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರ ವಿರೋಧ ಕಟ್ಟಿಕೊಂಡ ಜಿ.ವೈ.ಕೃಷ್ಣನ್ ಸೋತು, ನೇಗಿಲು ಹೊತ್ತ ರೈತ ಗುರುತಿನ ಜನತಾ ಪಕ್ಷದ ಅಭ್ಯರ್ಥಿ ವಿ.ವೆಂಕಟೇಶ್ ಜಯಭೇರಿ ಬಾರಿಸಿದ್ದರು.1989 ರಲ್ಲಿ ಆನೇಕಲ್ ಮೂಲದ ವೈ.ರಾಮಕೃಷ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿ ವಿಜೇತರಾಗಿದ್ದರೂ ನಂತರದಲ್ಲಿ ನಡೆದಿದ್ದು ಮಿರಾಕಲ್ 1991 ರಿಂದ 1996,1998,1999,2004,2009,2014 ಸತತ ಏಳು ಬಾರಿ ಸಂಸತ್ ಸದಸ್ಯರಾಗಿದ್ದ ಕಾಂಗ್ರೆಸ್ ನ ಕೆ.ಹೆಚ್.ಮುನಿಯಪ್ಪ 2019 ರಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಂದೊಗಿನ ಮುನಿಸನ್ನು ತಣಿಸಲಾರದೆ ಸೋತರು, ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಮುನಿಸ್ವಾಮಿ ಗೆದ್ದು ಬೀಗಿದ್ದಾರೆ.