ಮೈತ್ರಿ ಕೂಟದಲ್ಲಿ ಬಿರಕು!
ತ್ರಿಕೋನ ಸ್ಪರ್ದೆ ಇರುತ್ತದ?
ಕಾಂಗ್ರೆಸ್ ಅಭ್ಯರ್ಥಿ ಫೈನಲ್ ಆಗಿಲ್ಲ.
ಕೋಲಾರ:ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷವೂ ಅಭ್ಯರ್ಥಿಯನ್ನು ಫೈನಲ್ ಮಾಡಿಲ್ಲ ಎನ್ನಲಾಗುತ್ತಿದೆ ಆರಂಬಂದಿದಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿರುವ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಹೊರತು ಪಡಿಸಿದರೆ ಉಳಿದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ನಿರಂತರವಾಗಿ ಚುನಾವಣೆ ಗೆದ್ದಿರುತ್ತಾರೆ. ಹಾಗಾಗಿ ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಬದ್ರಕೋಟೆ ಎನ್ನಬಹುದು.
1984 ರಲ್ಲಿ ಜನತಾ ಪಕ್ಷದ ಅಭ್ಯರ್ಥಿ ವಿ.ವೆಂಕಟೇಶ್ ಹಾಗು ಕಳೆದ 2019 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಗೆದ್ದಿದ್ದು ಹೊರತು ಪಡಿಸಿದರೆ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಇಲ್ಲಿ ಇತಿಹಾಸ.
1952 ರಲ್ಲಿ ದೊಡ್ಡತಿಮ್ಮಯ್ಯ ಎನ್ನುವ ಕಾಂಗ್ರೆಸ್ ಅಭ್ಯರ್ಥಿ ಗೆಲವಿನಿಂದ ಆರಂಭವಾದ ಕಾಂಗ್ರೆಸ್ ವಿಜಯ 1957,1962 ಮೂರು ಅವಧಿಗೆ ಸಂಸದರಾಗಿದ್ದರು ನಂತರ 1967 ರಲ್ಲಿ ಗೆಲವು ಸಾಧಿಸಿದ ಜಿವೈ ಕೃಷ್ಣನ್ 1971,1977,1980 ನಾಲ್ಕು ಬಾರಿ ಸಂಸದರಾಗಿದ್ದರು ನಂತರದಲ್ಲಿ ಜಿವೈ ಕೃಷ್ಣನ್ ವಿರುದ್ದ ಸ್ಚಪಕ್ಷೀಯರೆ ಅಸಮಧಾನಗೊಂಡ ಪರಿಣಾಮ 1984 ರಲ್ಲಿ ಜನತಾ ಪಕ್ಷದ ನೇಗಿಲು ಹೊತ್ತ ರೈತನ ಗುರುತಿನ ಅಭ್ಯರ್ಥಿ ವಿ.ವೆಂಕಟೇಶ್ ವಿಜಯದ ಪತಾಕೆ ಹಾರಿಸಿದ್ದರು ನಂತರ 1989 ಕಾಂಗ್ರೆಸ್ ನ ವೈ.ರಾಮಕೃಷ್ಣ ಗೆಲವು ಸಾಧಿಸಿದ್ದರೆ 1991 ರಿಂದ 1996, 1998,1999,2004,2009,2014, ಡಬಲ್ ಹ್ಯಾಟ್ರಿಕ್ ಬಾರಿಸಿ ಏಳು ಬಾರಿ ಕೋಲಾರದ ಸಂಸದರಾಗಿ ಸೋಲಿಲ್ಲದ ಸರದಾರರಾಗಿದ್ದ ಕೆ.ಎಚ್.ಮುನಿಯಪ್ಪ 2019 ಚುನಾವಣೆಯಲ್ಲಿ ಸ್ಚಪಕ್ಷೀಯರ ಪ್ರಭಲ ವಿರೋಧದಿಂದ ಬಾರಿ ಅಂತರದಲ್ಲಿ ಸೂಲುಂಡರು. ಈ ಎಲ್ಲಾ ಲೆಕ್ಕಾಚಾರದ ನಡುವೆ ಸ್ಥಳೀಯ ರಾಜಕೀಯ ಪಂಡಿತರು ಹೇಳುವುದೇನೆಂದರೆ ಹಿಂದೆಲ್ಲಾ ಸ್ಥಳೀಯತೆ,ವ್ಯಕ್ತಿ ಪ್ರಾಭಲ್ಯತೆ ಎಂದು ಕೂಡಿಕಳೆಯುವ ಅಂಕಗಣಿತದ ಸಿಂಪಲ್ ರಾಜಕೀಯ ಮಾಡಬಹುದಿತ್ತು ಈಗ ಹಾಗಲ್ಲ ಜಾತಿ-ಒಳಜಾತಿಗಳ, ಸ್ವಪಕ್ಷೀಯರ ಒಳ ಏಟುಗಳ ರಾಜಕೀಯ ಲೆಕ್ಕಾಚಾರವೆ ಕೂಡಿ ಕಳೆದು ಗುಣಿಸಿ ಬಾಗಿಸಿ ಬರುವಂತ ಹೊಸ ಅಂಕದ ಮೇಲೆ ರಾಜಕೀಯ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ.
ಹೀಗಾಗಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೈನಲ್ ಮಾಡುವವರಿಗೂ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಫೈನಲ್ ಮಾಡುವ ಹಾಗೆ ಕಾಣುತ್ತಿಲ್ಲ, ಇದರ ಮದ್ಯೆ ಬದಲಾದ ಸನ್ನಿವೇಶದಲ್ಲಿ ರಾಜ್ಯದಲ್ಲಿ ಯಾರೆ ಅಧಿಕಾರದಲ್ಲಿ ಇರಲಿ ಬಿಡಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವ ನ್ಯಾಷನಲ್ ಪಾಲಿಟ್ರೀಕ್ಸ್ ಲೆಕ್ಕಾಚಾರದಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಒಂದು ಬಣದ ಮಾತಿಗೆ ಒಗೂಟ್ಟು ಬಿಜೆಪಿ ಮೈತ್ರಿ ಕೂಟಕ್ಕೆ ಸೆಡ್ಡು ಹೊಡೆದು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತ ಲೆಕ್ಕಾಚಾರದಲ್ಲಿ ಇದೆ ಎನ್ನುವ ಮಾತು ಕೇಳಿಬರುತ್ತಿದೆ,ಇದಕ್ಕೆ ಬೆಸೆತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಅವರಿಗೆ ಮೈತ್ರಿ ಧರ್ಮ ಬೇಡವಾದರೆ ನಮಗೂ ಬೇಡ ಕೋಲಾರ ಲೋಕಸಭಾ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್ ಒಟ್ ಬ್ಯಾಂಕ್ ಇದೆ ಎನ್ನುವ ಸಿಂಪಲ್ ಮ್ಯಾತಮೆಟಿಕ್ಸ್ ಧೈರ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ತ್ರೀಕೋನ ಸ್ಪರ್ದೆಗೆ ತಯಾರಿ ನಡೆಸಿದ್ದಾರಂತೆ.