ಶ್ರೀನಿವಾಸಪುರ:ತಾಲೂಕಿನ ತಾಡಿಗೋಳ್ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ ಮಂಗಳವಾರ ಸಡಗರದಿಂದ ನಡೆಯಿತು. ಸಾವಿರಾರು ಮಂದಿ ಪಾಲ್ಗೊಂಡು ರಥ ಎಳೆದರು.ಪಾಲ್ಗುಣ ಮಾಸದಲ್ಲಿ ನಡೆಯುವ ರಥೋತ್ಸವಕ್ಕೆ ದೊಡ್ದ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಧನ್ಯರಾದರು.ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಬಾಳೆಹಣ್ಣು ಧವನವನ್ನು ರಥಕ್ಕೆ ಅರ್ಪಿಸಿದರು. ದೇವಾಲಯದಲ್ಲಿ ವೀರಾಜಮಾನನಾದ ಶ್ರೀ ಲಕ್ಷ್ಮಿಸಮೇತ ನರಸಿಂಹಸ್ವಾಮಿ ದರ್ಶನ ಪಡೆದು ಪುನಿತರಾದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಮಾರ್ಚ್ 21 ರಿಂದ ಉತ್ಸವಗಳು ಆರಂಭಗೊಂಡು, ಮಾರ್ಚ್ 29ರವರೆಗೆ ನಡೆಯಲಿರುವ ಕಾರ್ಯಕ್ರಮಗಳು ಮಾರ್ಚ್ 21 ರಂದು ಗುರುವಾರ ಅಂಕುರಾರೋಹಣ ಮತ್ತು ಧ್ವಜಾರೋಹಣ ಹಾಗು ರಾತ್ರಿ ಸಿಂಹವಾಹನೋತ್ಸವ, 22 ಶುಕ್ರವಾರ ದಂದು ಹಗಲು ಶೇಷವಾಹನೋತ್ಸವ ರಾತ್ರಿಗೆ ಚಂದ್ರಪ್ರಭ ಉತ್ಸವ,ಮಾರ್ಚ್ 23 ರಂದು ಶನಿವಾರ ರಾತ್ರಿ ಗಜವಾಹನೋತ್ಸವ, ಮಾರ್ಚ್ 24 ರಂದು ಭಾನುವಾರ ಹಗಲು ಹನುಮಂತ ವಾಹನೋತ್ಸವ ರಾತ್ರಿಗೆ ಮೋಹಿನಿ ಉತ್ಸವ,ಮಾರ್ಚ್ 25 ರಂದು ಸೋಮವಾರ ಕಾಶಿಯಾತ್ರೆ ಹಾಗು ದೇವರಿಗೆ ಕಲ್ಯಾಣೋತ್ಸವ ರಾತ್ರಿಗೆ ಗರುಡೋತ್ಸವ,ಮಾರ್ಚ್ 26 ರಂದು ಮಂಗಳವಾರ ರಥೊತ್ಸವ ಅಖಂಡ ಭಜನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ತಹಸೀಲ್ದಾರ್ ಸುಧೀಂದ್ರ ರೆವೆನ್ಯೂ ಇನ್ಸೆಪೆಕ್ಟರ್ ಮುನಿರೆಡ್ಡಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಪಾಲ್ಗೋಂಡಿದ್ದರು. ದೇವಾಲಯದ ವಂಶಪಾರ್ಯಂಪರ ಅರ್ಚಕ ರಾಜಾಕಸ್ತೂರಾಚಾರ್ಯರು ಮಾರ್ಗದರ್ಶದಲ್ಲಿ ದೇವರ ಕಾರ್ಯಕ್ರಮಗಳು ನೇರವೇರಿದವು.ಅಗಮಿಕರಾಗಿ ರೋಣೂರಿನ ಮೋಹನ್ ರಾಜಗೋಪಾಲ ಭಟ್ರು ಪಾಲ್ಗೋಂಡಿದ್ದರು.
ದೇವಾಲಯಕ್ಕೆ ಐತಿಹಾಸಿಕ ಹಿನ್ನಲೆ
ವಿಜಯನಗರದ ಅರಸರ ಆಳ್ವಿಕೆಯಲ್ಲಿ ಪಾಳೆಗಾರರು ನಿರ್ಮಾಣ ಮಾಡಿರುವ ದೇವಾಲಯ ಇತಿಹಾಸ ಪ್ರಸಿದ್ಧ ಹಾಗೂ ಭಕ್ತಾದಿಗಳ ಆರಾಧ್ಯತಾಣ ಎನಿಸಿರುವ ತಾಡಿಗೋಳ್ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ ದೇಗುಲ ಧಾರ್ಮಿಕ ಕೇಂದ್ರವಾಗಿ ಮಾರ್ಪಟ್ಟಿದೆ.ಐತಿಹಾಸಿಕ ದೇಗುಲದ ಕುರಿತು ಹಲವು ಕಥೆಗಳಿವೆ,ಹಿಂದೆ ಪಾಪಗ್ನಿ ನದಿ ಪ್ರಾಂತ್ಯವಾಗಿದ್ದ ತಾಡಿಗೋಳ್ ಪಾಳೆಗಾರರ ಆಡಳಿತಕ್ಕೆ ಒಳಪಟ್ಟಿದ್ದು ಆ ಸಮಯದಲ್ಲಿ ನಿರ್ಮಾಣ ಮಾಡಿರುವ ಎಂದು ಹೇಳುವ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ಮೂಲ ವಿಗ್ರಹವನ್ನು ಕದರಿ ಶ್ರೀನರಸಿಂಹ ಸ್ವಾಮಿ ದೇವಾಲದಿಂದ ತಂದಿರುವುದಾಗಿ ಸ್ಥಳಿಯ ಕಥೆಗಳಲ್ಲಿ ಹೇಳಲಾಗಿದಿಯಂತೆ.ಬೇಸಾಯದ ಸಮಯದಲ್ಲಿ ಮಳೆ ಬಾರದಿದ್ದಲ್ಲಿ ಅಥವಾ ಅತಿವೃಷ್ಟಿ ಆಗುವ ಸಂದರ್ಭದಲ್ಲಿ ಇಲ್ಲಿನ ಜನರು ಭಕ್ತಿಯಿಂದ ತಾಡಿಗೋಳ್ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವರಿಗೆ ಹರಿಕೆ ಹೊತ್ತು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಮನೆಯಲ್ಲಿ ಶುಭಕಾರ್ಯ, ಅನಾರೋಗ್ಯ ಸಮಸ್ಯೆ ಎದುರಾದಾಗ, ವ್ಯಾಪರದಲ್ಲಿ ವ್ಯವಹಾರಿಕ ತೊಂದರೆ ಕಂಡು ಬಂದಾಗ ಭಕ್ತರು ಇಲ್ಲಿಗೆ ಬಂದು ಹರಕೆ ಹೊತ್ತು ಪೂಜೆ ಸಲ್ಲಿಸಿದರೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆ.
Breaking News
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
- ಕೆಟ್ಟು ನಿಂತ ಬೆಂಗಳೂರು-ಕೋಲಾರ ಮೆಮೊ ರೈಲು ,ರಾತ್ರಿವೇಳೆ ಪರದಾಡಿದ ಪ್ರಯಾಣಿಕರು!
Friday, April 4