ಕೋಲಾರ:ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್ ಬಾಬು ಹೆಸರು ಫೈನಲ್ ಆಗುತ್ತಿದ್ದಂತೆ ರಾಜಕೀಯ ತಂತ್ರ-ಪ್ರತಿತಂತ್ರ ಜೋರಾಗುತ್ತಿದೆ. ಕಡಾಕಂಡಿತವಾಗಿ ಕೋಲಾರ ಕ್ಷೇತ್ರವನ್ನು ಗೆಲ್ಲಲು ಮೈತ್ರಿ ಕೂಟದಲ್ಲಿ ಕಸರತ್ತು ಶುರುವಾಗಿದೆ ಇದಕ್ಕಾಗಿ ಕೋಲಾರ ಎನ್ಡಿಎ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಇಂದು ಕೋಲಾರದಲ್ಲಿ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಮನೆಗೆ ಭೇಟಿನೀಡಿ ಬೆಂಬಲಿಸುವಂತೆ ಕೋರಿದರು.
ಕೋಲಾರ ನಗರದ ಎಸ್ ಜಿ ಲೇಔಟ್ ನಲ್ಲಿರುವ ಮುನಿಸ್ವಾಮಿ ಮನೆಗೆ ಭೇಟಿ ನೀಡಿದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು
ಸಂಸದ ಮುನಿಸ್ವಾಮಿಗೆ ಶಾಲು ಹೊದಿಸಿ ಸನ್ಮಾನಿಸಿ ಚುನಾವಣೆಯಲ್ಲಿ ಸಹಾಯ ಮಾಡುವಂತೆ ಹಾಲಿ ಸಂಸದರನ್ನು ಕೋರಿದರು. ಇದಕ್ಕೆ ಪ್ರತಿಯಾಗಿ ಸಂಸದ ಮುನಿಸ್ವಾಮಿ ಮಲ್ಲೇಶ್ ಅವರಿಗೆ ಸಿಹಿ ತಿನ್ನಿಸಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಶ್ರೀನಿವಾಸಪುರ ಶಾಸಕ ಹಾಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ,ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್, ಎಂ.ಎಲ್.ಸಿ ಗೋವಿಂದರಾಜು,ಚಿಂತಾಮಣಿ ಮಾಜಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿ,ಕೋಲಾರ ಸಿಎಂಆರ್ ಶ್ರೀನಾಥ್,ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್, ಮುಂತಾದವರು ಇದ್ದರು.
ಸಿಎಂಆರ್ ಮನೆಯಲ್ಲಿ ಜೆಡಿಎಸ್ ಸಭೆ
ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ನೇತೃತ್ವದಲ್ಲಿ ಕೋಲಾರದ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮನೆ ಬಳಿಯಲ್ಲಿ ಜೆಡಿಎಸ್ ಸಭೆ ನಡೆಯಿತು.ಈ ಸಂದರ್ಭದಲ್ಲಿ ಮಲ್ಲೇಶ್ ಬಾಬು ಮಾತನಾಡಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಕಡಿಮೆ ಅಂತರದಲ್ಲಿ ಪರಾಭಾವಗೊಂಡಿರುವೆ ಕೋಲಾರ.ಮುಳಬಾಗಿಲು ಕೆ.ಜಿ.ಎಫ್ ಸೇರಿದಂತೆ ಎಲ್ಲಾ ತಾಲೂಕುಗಳಲ್ಲೂ ನಾನು ಚಿರಪರಿಚಿತ ನಿಮ್ಮೆಲ್ಲರ ಸಹಕಾರದಿಂದ ಹೆಚ್ಚು ಮತ ಗಳಿಕೆಗೆ ಸಧ್ಯವಾಗುತ್ತದೆ ಎಂದು ಮಲ್ಲೇಶ್ ಬಾಬು ಹೇಳಿದರು.