ಅಭ್ಯರ್ಥಿ ಫೈನಲ್ ಆದರೂ ಕಾರ್ಯಕರ್ತರ ನಡುವಿನ ಗೊಂದಲ ಬಗೆ ಹರೆದಿಲ್ಲ
ಮುಳಬಾಗಿಲು:ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಇಂದು ಪ್ರಖ್ಯಾತ ಪುಣ್ಯಕ್ಷೇತ್ರವಾದ ಮುಳಬಾಗಿಲು ಕುರುಡುಮಲೆ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮುಳಬಾಗಿಲಿನಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಕುರುಡುಮಲೆಯಲ್ಲಿರುವ ವಿನಾಯಕ ದೇವಾಲಯದಲ್ಲಿ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಕೋಲಾರ ಉಸ್ತುವಾರಿ ಸಚಿವ ಭೈರತಿಸುರೇಶ್ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಸುಧಾಕರ್ ಸೇರಿದಂತೆ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ,ಪರಿಷತ್ ಸದಸ್ಯರದ ಅನಿಲ್,ನಸೀರ್ ಆಹ್ಮದ್ ಮುಂತಾದವರು ಭಾಗಿಯಾಗಿದ್ದರು.
ಶಿಡ್ಲಘಟ್ಟ ಉಸ್ತುವಾರಿ ಗದ್ದಲ ಪಂಚಾಯಿತಿ
ಕುರುಡುಮಲೆ ಗಣೇಶನಿಗೆ ಪೂಜೆ ಮುಗಿಸಿದ ನಂತರ ಮುಳಬಾಗಿಲು ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿಡ್ಲಘಟ್ಟ ಕಾಂಗ್ರೆಸ್ ನಲ್ಲಿರುವ ಗುಂಪುಗಾರಿಕೆ ಬುಗಿಲೆದ್ದಿತು ಕಾರ್ಯಕರ್ತರ ಗದ್ದಲ ದೊಡ್ದ ಸದ್ದುಮಾಡಿತು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಟಿಕೆಟ್ ವಂಚಿತ ಪುಟ್ಟು ಆಂಜಿನಪ್ಪ ಕಾಂಗ್ರೆಸ್ ಸೇರ್ಪಡೆ ಕುರಿತಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಪರಾಜಿತ ಅಭ್ಯರ್ಥಿ ರಾಜುಗೌಡ ಬೆಂಬಲಿಗರು ತೀವ್ರ ವಿರೋಧ ಮಾಡಿದ್ದು ಕೊಂಚ ಕೂಗಾಟಕ್ಕೆ ದಾರಿ ಮಾಡಿಕೊಟ್ಟಿತು ಸಚಿವದ್ವಯರ ಎದುರೇ ಶಿಡ್ಲಘಟ್ಟ ಕಾಂಗ್ರೆಸ್ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು, ಈ ವೇಳೆ ರಾಜುಗೌಡ ಬೆಂಬಲಿಗರು ಶಿಡ್ಲಘಟ್ಟದ ಲೋಕಸಭಾ ಚುನಾವಣಾ ಉಸ್ತುವಾರಿಯನ್ನು ರಾಜುಗೌಡರಿಗೆ ವಹಿಸುವಂತೆ ಒತ್ತಾಯಿಸಿ ಡಾ.ಎಂ.ಸಿ ಸುಧಾಕರ್ ವಿರುದ್ಧ ಮಾತನಾಡಲು ಮುಂದಾದಾಗ ಸಚಿವ ಭೈರತೀ ಸುರೇಶ್ ಗರಂ ಆದವರೆ ಡಾ.ಎಂ.ಸಿ.ಸುಧಾಕರ್ ಕುರಿತಾಗಿ ಹಗುರವಾದ ಮಾತೆಲ್ಲ ಆಡಬೇಡಿ ಅವರ ಕುಟುಂಬ ರಾಜಕೀಯವಾಗಿ ಪ್ರತಿಷ್ಠೆ ಹಾಗು ಗೌರ್ಹಾನಿತ ಕುಟುಂಬ ಅವರ ಬಗ್ಗೆ ಮಾತನಾಡುವಾಗ ಬಾಯಿ ಬಿಗಿ ಹಿಡಿದು ಮಾತನಾಡುವಂತೆ ಹೆಚ್ಚರಿಸಿ ಎರಡು ಕಡೆಯ ಬೆಂಬಲಿಗರನ್ನು ಸಚಿವರಾದ ಡಾ.ಸುಧಾಕರ್ ಹಾಗೂ ಭೈರತಿ ಸುರೇಶ್ ಸಮಾಧಾನ ಪಡಿಸಿ ಕಳಿಸಿದರು.
.