ನ್ಯೂಜ್ ಡೆಸ್ಕ್: ತಮಿಳುನಾಡು ಅಂದರೆ ದ್ರಾವಿಡ ನೆಲೆ ಅಲ್ಲಿನ ರಾಜಕೀಯ ಸಾಮಜಿಕ ಹೋರಾಟ ಎಲ್ಲವೂ ದ್ರಾವಿಡ ಮೂಲದ್ದೆ ಇಂತಹ ಭೂಮಿಯಲ್ಲಿ ಈ ಬಾರಿ ರಾಜಕೀಯದಲ್ಲಿ ಬದಲಾವಣೆಯ ದೊಡ್ಡ ಗಾಳಿ ಬೀಸಬಹುದು ಎನ್ನುವ ಮಾತು ಕೇಳಿಬರುತ್ತಿದೆ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಪ್ರಾಂತೀಯ ಕದನದಲ್ಲಿ ಒಂದೇರಡು ಸ್ಥಾನಗಳಿಗೆ ಸೀಮಿತವಾಗಿದ್ದ ಬಿಜೆಪಿ ಈಗ ಆಣ್ಣಾಮಲೈ ಎಂಬ ಯುವ ನಾಯಕತ್ವ ಹಾಗು ಹಿಂದುಳಿದ ಅಸ್ತ್ರ ಬಳಿಸಿ ಚುನಾವಣೆ ಎದುರಿಸಲು ಮುಂದಾಗಿರುವುದು ತಮಿಳುನಾಡಿನ ರಾಜಕೀಯ ಕುರಿತಾಗಿ ಇಡೀ ದೇಶದ ಗಮನ ಸೆಳೆಯುವಂತಾಗಿದೆ.
ಲೋಕಲ್ ಎಲೆಕ್ಷನ್ ನಲ್ಲಿ ಉತ್ತಮ ಸಾಧನೆ
ಇದಕ್ಕೆ ಪೂರಕವಾಗಿ ಫೆಬ್ರವರಿ ತಿಂಗಳಲ್ಲಿ ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ದಿಸಿ ಕಳೆದ ಬಾರಿಗಿಂತಲೂ ಹೆಚ್ಚು ಸಾಧನೆ ಮಾಡಿದಿದ್ದು,ಬಿಜೆಪಿ 1 ಕಾರ್ಪೊರೇಷನ್ ವಾರ್ಡ್, 24 ಪುರಸಭೆ ವಾರ್ಡ್ ಮತ್ತು 102 ಪಟ್ಟಣ ಪಂಚಾಯಿತಿ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ, ಪ್ರಾತಿನಿಧ್ಯವೇ ಇಲ್ಲದ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಂತರ ಬಿಜೆಪಿ ಮೂರನೇ ಅತಿದೊಡ್ಡ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ ಇದಕ್ಕೆ ಕಾರ್ಯಕರ್ತರ ಪರಿಶ್ರಮದ ಸಾಧನೆ ಎಂದು ಬಿಜೆಪಿ ಹೈಕಮಾಂಡ್ ಹೇಳಿಕೊಂಡಿದೆ
ರಿಜನಲ್ ಪಕ್ಷಗಳದೆ ಪ್ರಾಭಲ್ಯ
ತಮಿಳುನಾಡಿನಲ್ಲಿ ದ್ರಾವಿಡ ಮುನ್ನೆತ್ರಂ ಕಳಗಂ(ಡಿಎಂಕೆ) ಆಡಳಿತದಲ್ಲಿದೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಮಹಿಳೆಯರಿಗೆ ಮಾಸಿಕ 1000 ರೂ ಸೇರಿದಂತೆ ಹಲವು ಉಚಿತ ಯೋಜನೆಗಳು ಜಾರಿಯಲ್ಲಿವೆ ಜೊತೆಗೆ ಇಂಡಿಯಾ ಮೈತ್ರಿಕೂಟದ ಅಂಗಪಕ್ಷ ಕಾಂಗ್ರೆಸ್ ಜೊತೆ ಯಾವುದೇ ಗೊಂದಲ ಇಲ್ಲದೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಚುನಾವಣೆಯಲ್ಲಿ ಇತರೆ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿದೆ.
ಇನ್ನೊಂದೆಡೆ ಪ್ರಮುಖ ವಿಪಕ್ಷವಾದ 1972 ರಲ್ಲಿ ಅಂದಿನ ಚಿತ್ರ ನಟ ದಿವಂಗತ ಎಂ.ಜಿ.ರಾಮಚಂದ್ರನ್ ಸ್ಥಾಪಿಸಿದ್ದ ನಂತರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ಅಧ್ಯಕ್ಷರಾಗಿ ಮುನ್ನೆಡಿಸಿದ್ದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಸಮರ್ಥ ನಾಯಕನಿಲ್ಲದೆ ಗೊಂದಲದಲ್ಲಿದೆ,ಮಾಜಿ ಮುಖ್ಯಮಂತ್ರಿಗಳಾದ ಪನ್ನಿರ್ಸೆಲ್ವಂ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಬಣ ಜಗಳದಲ್ಲಿ ಸಿಲುಕ್ಕಿದ್ದು ಪಕ್ಷದ ಸಂಘಟನೆಯಲ್ಲಿ ದೊಡ್ಡ ಪೆಟ್ಟು ನೀಡಿದೆ ಎನ್ನಬಹುದು ಇದರ ಅನುಕೂಲ ಪಡೆಯಲು ಮುಂದಾಗಿರುವ ಬಿಜೆಪಿ ಪ್ರತ್ಯಕವಾಗಿ ಸ್ಪರ್ದಿಸಲು ಮುಂದಾಗಿರುವುದು ಎಐಎಡಿಎಂಕೆ ಪಕ್ಷಕ್ಕೆ ಆಗಿರುವ ಹಿನ್ನಡೆ ಎನ್ನುತ್ತಾರೆ, ಕರ್ನಾಟಕದ ಐ ಎ ಎಸ್ ಅಧಿಕಾರಿ ಅಣ್ಣಾಮಲೈ ಉದ್ಯೋಗ ತೊರೆದು ಬಿಜೆಪಿ ಸೇರಿ ರಾಜಕೀಯ ಮಾಡುತ್ತಿರುವುದು ದ್ರಾವಿಡ ನೆಲೆ ತಮಿಳುನಾಡಿನಲ್ಲಿ ಬಿಜೆಪಿಗೆ ಆನೆ ಬಲಬಂದಂತಾಗಿ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಬಹುದು ಎಂಬ ಭರವಸೆ ವ್ಯಕ್ತವಾಗುತ್ತಿದೆ.
ಸನಾತನ ಧರ್ಮದ ಹೇಳಿಕೆಯೆ ಆಸ್ತ್ರ
ಸನಾತನ ಧರ್ಮದ ಕುರಿತಾಗಿ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಹಾಗು ಡಿಎಂಕೆ ನಾಯಕರು ಆಡಿದ ಮಾತುಗಳಿಂದ ಡಿಎಂಕೆ ಮಿತ್ರ ಪಕ್ಷಗಳ ಮೈತ್ರಿ ಸಮಸ್ತ ಇಂಡಿಯಾ ಕೂಟವೇ ಸನಾತನ ಧರ್ಮದ ವಿರೋಧಿ ಆಗಿದೆ ಎಂದು ಪ್ರಚಾರ ಮಾಡಲಾತ್ತಿದೆ.
ಬಹುತೇಕ ತ್ರಿಕೋನ ಸ್ಪರ್ಧೆ!
ಸ್ವಾತಂತ್ರ್ಯ ನಂತರದಲ್ಲಿ ತಮಿಳುನಾಡಿನಲ್ಲಿ ಬಹುತೇಕ ನೇರ ಸ್ಪರ್ದೆ ಏರ್ಪಡುತಿತ್ತು 1972 ರಲ್ಲಿ ಉದಯಿಸಿದ ಎಐಎಡಿಎಂಕೆ ಹಾಗು ಡಿಎಂಕೆ ನಡುವೆ ನೇರ ಜಿದ್ದಾ ಜಿದ್ದಿ ಸ್ಪರ್ದೆ ಎರ್ಪಡುತಿತ್ತು ಬದಲಾದ ಸನ್ನಿವೇಶದಲ್ಲಿ ಈ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ತಮ್ಮ ಆಡಳಿತದ ಸಾಧನೆಗಳು ಹಾಗೂ ತಮಿಳುನಾಡಿನ ಆಸ್ಮಿತೆ ಅಸ್ತ್ರವಾಗಿ ಇಟ್ಟುಕೊಂಡು ಡಿಎಂಕೆ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ರಾಜಕೀಯ ಚುನಾವಣೆಯ ಹೋರಾಟಕ್ಕೆ ಅಣಿಯಾಗಿದೆ. ನಾನೆ ಜಯಲಲಿತಾರ ನಿಜವಾದ ಉತ್ತರಾಧಿಕಾರಿ ಎಂದು ಅಣ್ಣಾಡಿಎಂಕೆ ಪಕ್ಷ ಪಳನಿಸ್ವಾಮಿ ನೇತೃತ್ವದಲ್ಲಿ ಸಮರಕ್ಕೆ ಸಜ್ಜಾಗಿದೆ ಈ ಸಲ ಮೋದಿ ಚರಿಷ್ಮಾ ಎಂದು ಎನ್ನ್ ಮಕ್ಕಳು ಎನ್ ಮಣ್ಣು ಎಂಬ ಹೇಸರಿನಲ್ಲಿ ಪಾದಯಾತ್ರೆ ಮಾಡಿದ್ದ ಯುವ ನಾಯಕ ಆಣ್ಣಾಮಲೈ ಮೊದಲ ಸಲ ನೇರವಾಗಿ ಬಿಜೆಪಿ ತಮಿಳುನಾಡಲ್ಲಿ ಭಾರಿ ಸ್ಪರ್ಧೆ ನೀಡುವ ನಿರೀಕ್ಷೆ ಇದೆ ಇದಕ್ಕೆ ಸಾತ್ ನೀಡುವಂತೆ ಬಿಜೆಪಿಗೆ ಮತ್ತಷ್ಟು ಬಲಬಂದಂತಾಗಿದೆ.ಸೂಪರ್ ಸ್ಟಾರ್ ರಜನಿಕಾಂತ್ ಫ್ಯಾನ್ಸ್ ಕ್ಲಬ್ನ ಪ್ರಮುಖ ಮುಖಂಡರು ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರೆ,ಮತ್ತೋರ್ವ ಖ್ಯಾತ ನಟ ಶರತ್ ಕುಮಾರ್ (ಖ್ಯಾತ ನಟಿ ರಾಧಿಕ ಪತಿ) ಬಿಜೆಪಿಗೆ ತಮ್ಮ ನೇತೃತ್ವದ ಅಖಿಲ ಭಾರತ ಸಮತುವ ಮಕ್ಕಳ್ ಕಚ್ಚಿ (AISMK) ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿದ್ದಾರೆ,ಮತ್ತೊಂದೆಡೆ ಟಿಟಿವಿ ದಿನಕರನ್ (ಜಯಲಲಿತಾ ಸಾಕು ಮಗ) ಅವರ ನೇತೃತ್ವದ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪಕ್ಷ ಬಿಜೆಪಿಗೆ ಬೇಷರತ್ ಬೆಂಬಲ ಘೋಷಿಸಿದೆ ಇದೆಲ್ಲವು ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೊಯಮತ್ತೂರಿನಿಂದ ಸ್ಪರ್ದಿಸುತ್ತಿದ್ದು,ಡಿಎಂಕೆ ನಾಯಕಿ ಮುಖ್ಯಮಂತ್ರಿ ಸ್ಟಾಲಿನ್ ಸಹೋದರಿ ಕನಿಮೋಳಿ ತೂತ್ತುಕುಡಿಯಿಂದ, ಡಿಎಂಕೆಯ ದಯಾನಿಧಿ ಮಾರನ್ ಚೆನ್ನೈ ಸೆಂಟ್ರಲ್ನಿಂದ, ತೆಲಂಗಾಣ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ತಮಿಳಿಸಾಯಿ ಸೌಂದರರಾಜನ್ ಚೆನ್ನೈ ದಕ್ಷಿಣದಿಂದ, ತಮಿಳುನಾಡು, ಸ್ಮಗ್ಲರ್ ಕಾಡುಗಳ್ಳ ವೀರಪ್ಪನ್ ಪುತ್ರಿ ವೃತ್ತಿಯಲ್ಲಿ ವಕೀಲೆಯಾಗಿರುವ ವಿದ್ಯಾರಾಣಿ ನಾಮ್ ತಮಿಳರ್ ಕಚ್ಚಿ ಅಭ್ಯರ್ಥಿಯಾಗಿ ಕೃಷ್ಣಗಿರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ, ಡಿಎಂಕೆಯ ವಿವಾದತ್ಮಕ ಮುಖಂಡ ಹಾಗು ಮನ್ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಎ. ರಾಜಾ ನೀಲಗಿರಿಯಿಂದ(Ooty /Nilgiris) ಯಲ್ಲಿ ಸ್ಪರ್ಧಿಸಿದ್ದರೆ ಅವರ ವಿರುದ್ದ ಬಿಜೆಪಿಯಿಂದ ಹಾಲಿ ಕೇಂದ್ರ ಸಚಿವ ಎಲ್ ಮುರುಗನ್ ಸ್ಪರ್ದಿಸುತ್ತಿದ್ದಾರೆ. ನಟಿ-ರಾಜಕಾರಣಿ ರಾಧಿಕಾ ಶರತ್ಕುಮಾರ್ ವಿರುದುನಗರ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ,ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಏಕೈಕ ಸ್ಥಾನಕ್ಕೆ ಅಲ್ಲಿನ ಗೃಹ ಸಚಿವ ಎ ನಮಸ್ಶಿವಾಯಂ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
Breaking News
- ಛತ್ರಪತಿ ಶಿವಾಜಿ ಮಹರಾಜ್ ಪಾತ್ರದಲ್ಲಿ ರಿಷಬ್ ಶೆಟ್ಟಿ,ಪೋಸ್ಟರ್ ಬಿಡುಗಡೆ
- ಶ್ರೀನಿವಾಸಪುರ-ನಂಬಿಹಳ್ಳಿ ರಸ್ತೆ ಅಪಘಾತ ಮೊಪೈಡ್ ಸವಾರ ಸಾವು
- ಮರ್ಯಾದ ಹತ್ಯೆಗೆ ಮಹಿಳಾ ಪೋಲಿಸ್ ಕಾನ್ಸ್ಟೇಬಲ್ ಬಲಿ
- ಶ್ರೀನಿವಾಸಪುರ ಫೆಂಗಲ್ ತೂಫಾನ್ ಪ್ರಭಾವ ಜನಜೀವನ ಅಸ್ತವ್ಯಸ್ತ! ಶಾಲೆಗಳಿಗೆ ರಜೆ
- ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಹೆಸರು ಮುರಳಿಧರ್ ಮೊಹೋಲ್!
- ಮೊಳಕೆಯೊಡದ ಆಲೂಗಡ್ಡೆ ತಿನ್ನುವುದರಿಂದ ಅನಾರೋಗ್ಯ ಕಾಡುತ್ತದೆ!
- 35 ದಿನಗಳು 5 ರಾಜ್ಯಗಳು 5 ಕೊಲೆಗಳ ಅಪರಾಧಿ ಸೈಕೋ ಕಿಲ್ಲರ್ ಥ್ರಿಲರ್ story
- ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಲು ಕೋಲಾರ ಜಿಲ್ಲೆಯಿಂದ ಆಕಾಂಕ್ಷಿ
- ಶ್ರೀನಿವಾಸಪುರ ಬಲಾಢ್ಯರ ಅರಣ್ಯ ಒತ್ತುವರಿ ತೆರವುಮಾಡಿಸಿ ರೈತ ಸಂಘ ಅಗ್ರಹ!
- ಪ್ರೀತಿಸದೆ ನಿರ್ಲಕ್ಷಿಸುತ್ತಿದ್ದಾನೆ ಎಂದು ಪ್ರೀಯಕರನನ್ನು ಕಿಡ್ನಾಪ್ ಮಾಡಿದ Girlfriend!
Wednesday, December 4