ಮೈತ್ರಿ ಅಭ್ಯರ್ಥಿ ಭರ್ಜರಿ ರೋಡ್ ಶೋ
ಶೋ ನಂತರ ಕೊನೆಯಲ್ಲಿ ಆದದ್ದೆ ಬೇರೆ
ಯಾರು ಜೊತೆಯಲ್ಲಿ ಉಳಿಲಿಲ್ಲ
ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಂ.ಮಲ್ಲೇಶ್ ಗುರುವಾರ ನಾಮ ಪತ್ರ ಸಲ್ಲಿಸಿದ್ದಾರೆ ನಾಮ ಪತ್ರ ಸಲ್ಲಿದಾಗಲೆ ಮೈತ್ರಿ ಕೂಟದ ಸಮನ್ವಯತೆ ಹಳ್ಳ ಹಿಡಿಯಿತಾ,ಮೈತ್ರಿ ಪಕ್ಷಗಳ ಮುಖಂಡರು ತಮ್ಮ ದಾರಿ ನೊಡಿಕೊಂಡು ಹೊದ ಹಿನ್ನಲೆಯಲ್ಲಿ ಅಭ್ಯರ್ಥಿ ನಡುರಸ್ತೆಯಲ್ಲಿ ಒಬ್ಬಂಟಿಯಾದರ ಇಂತಹ ಹಲವಾರು ಮಾತುಗಳು ನಿನ್ನೆ ಕೋಲಾರದ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದೆ.
ರಾಜ್ಯಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಅದರಂತೆ ಸೀಟು ಹಂಚಿಕೆಯಲ್ಲಿ ಮಂಡ್ಯ,ಹಾಸನ ಹಾಗು ಕೋಲಾರ ಕ್ಷೇತ್ರಗಳು ಜೆಡಿಎಸ್ ಪಾಲಾಗಿದೆ,ಕೋಲಾರ ಟಿಕೆಟ್ ಗಾಗಿ ಬಿಜೆಪಿ-ಜೆಡಿಎಸ್ ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದಾದರೂ ಕೊನೆಗೂ ಜೆಡಿಎಸ್ ವಶವಾಯಿತು,ಅಭ್ಯರ್ಥಿ ಘೋಷಣೆಯಾದ ನಂತರ ಅಭ್ಯರ್ಥಿ ಮಲ್ಲೇಶ್ ಬಾಬು ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದ್ದು ಈ ಸಂದರ್ಭದಲ್ಲಿ ಮಾಜಿ ಸಚಿವ ವರ್ತೂರ್ ಪ್ರಕಾಶ್ ಸೇರಿದಂತೆ ಜೆಡಿಎಸ್ ಇಬ್ಬರು ಶಾಸಕಾರದ ವೆಂಕಟಶಿವಾರೆಡ್ಡಿ,ಸಮೃದ್ಧಿಮಂಜುನಾಥ್ ಹಾಗು ಕೋಲಾರದ ಸಿ.ಎಂ.ಆರ್ ಶ್ರೀನಾಥ್ ಜೊತೆ ಗೂಡಿದ್ದರು ನಂತರ ನಡೆದ ಎರಡು ಪಕ್ಷಗಳ ಮುಖಂಡರು ಜಿಲ್ಲಾ ಮಟ್ಟದ ಸಮನ್ವಯ ಸಭೆ ನಡೆಸಿದ್ದರು.
ಅಧಿಕೃತ ನಾಮಪತ್ರ ಸಲ್ಲಿಕೆ
4 ರಂದು ಗುರುವಾರ ಮೈತ್ರಿ ಕೂಟದ ಅಭ್ಯರ್ಥಿ ಮಲ್ಲೇಶ್ ಬಾಬು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಜಿಲ್ಲಾ ಚುನಾವಣಾ ಅಧಿಕಾರಿ ಅಕ್ರಂಪಾಷಾ ಗೆ ನಾಮಪತ್ರ ಸಲ್ಲಿಸಿದ ಅವರೊಂದಿಗೆ ಜೆಡಿಎಸ್ ಕೊರ್ ಕಮಿಟಿ ಸದಸ್ಯ ಶಾಸಕ ಜಿಟಿ ದೇವೇಗೌಡ ಜೊತೆಗೂಡಿ ಸಂಸದ ಎಸ್ ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಶಾಸಕ ಅರವಿಂದ್ ಲಿಂಬಾವಳಿ ಇದ್ದರು.
ಗುರುವಾರ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ ನಂತರ ಹೊರ ಬಂದಂತ ಅಭ್ಯರ್ಥಿ ಮಲ್ಲೇಶ್ ಅವರನ್ನು ಬಿಟ್ಟು ಶಾಸಕರಾದಿಯಾಗಿ ಮಾಜಿ ಶಾಸಕರು ಮುಖಂಡರು ವಿವಿಧ ಮೊರ್ಚಾ ಅಧ್ಯಕ್ಷರುಗಳು ಒಬ್ಬಬ್ಬರಾಗಿ ಕಾಲ್ಕಿತ್ತಿದ್ದಾರೆ ಕೊನೆಗೆ ಬೆರಳಣಿಕೆಯಷ್ಟು ಕಾರ್ಯಕರ್ತರು ಉಳಿದ ಕಾರಣ ಅಬ್ಯರ್ಥಿ ಮಲ್ಲೇಶ್ ಬಾಬು ಅನಿವಾರ್ಯವಾಗಿ ಸಿಎಂಆರ್ ಶ್ರೀನಾಥ್ ಜೊತೆ ಕಾರುಹತ್ತಿ ಜಾಗಕಾಲಿ ಮಾಡಿದ್ದಾರೆ.ಇದನ್ನು ಮೈತ್ರಿ ಕೂಟದ ಸಮನ್ವಯತೆಯ ಸ್ಯಾಂಪಲ್ ಎಂದು ಹಾಸ್ಯಾಸ್ಪದವಾಗಿ ವಿಡಂಬನೆ ಮಾಡುತ್ತಾರೆ.