ಶ್ರೀನಿವಾಸಪುರ:ಕೋಲಾರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಆಗಬೇಕು ಎಂಬ ಉದ್ದೇಶದಿಂದ ಚುನಾವಣಾ ಶಾಖೆ ವತಿಯಿಂದ ಶ್ರೀನಿವಾಸಪುರ ಪಟ್ಟಣದಲ್ಲಿ ಮತದಾರರನ್ನು ವಿಶೇಷವಾಗಿ ಆಕರ್ಷಿಸಲು ಮೂರು ಮತಗಟ್ಟೆಗಳನ್ನು ವಿವಿಧ ಹೆಸರಿನಲ್ಲ್ ಸ್ಥಾಪಿಸಲಾಗಿದೆ.
ಪಟ್ಟಣದ ಸರೋಜಿನಿ ರಸ್ತೆಯಲ್ಲಿನ ಸರ್ಕಾರಿ ಶಾಲೆಯ ಬೂತ್ ಸಂಖ್ಯೆ 141 ರಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಮಗಟ್ಟೆಗೆ ಗುಲಾಬಿ ಬಣ್ಣ ಬಳೆದು ಸಖಿ ಮತಗಟ್ಟೆಯಂದು ಘೋಷಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿದ್ದಾರೆ,ರಂಗಾರಸ್ತೆಯಲ್ಲಿ ಬೂತ್ ಸಂಖ್ಯೆ 144 ಮತಗಟ್ಟೆಯನ್ನು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಮತದಾನದ ಮಹತ್ವ ಸಾರುವ ಸ್ಲೋಗನ್ ಗಳೊಂದಿಗೆ ಯುವ ಮತಮಗಟ್ಟೆಯಂದು ಸ್ಥಾಪಿಸಿದ್ದಾರೆ,ತ್ಯಾಗರಾಜ ಕಾಲೋನಿಯಲ್ಲಿನ ಶಾಲೆಯ ಮತಗಟ್ಟೆಯನ್ನು ವಿವಧತೆಯಲ್ಲಿ ಏಕತೆ ಮಾವಿನ ಉರು ಎಂದು ಬಿಂಬಿಸುವ ರೀತಿಯಲ್ಲಿ ಮಾವಿನ ಎಲೆಗಳ ತೋರಣ ಕಟ್ಟಿ,ಮಾವಿನ ಮಹತ್ವ ಹೇಳುವ ಬರಹಗಳೊಂದಿಗೆ ಸಾಂಸ್ಕೃತಿಕ ಮತಗಟ್ಟೆ ಸ್ಥಾಪಿಸಲಾಗಿದೆ. ಮತದಾರರನ್ನು ಆಕರ್ಷಿಸಲು ವಿಶೇಷವಾದ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎನ್ನುತ್ತಾರೆ ಚುನಾವಣೆ ಅಧಿಕಾರಿಗಳು. ರಂಗಾರಸ್ತೆಯ ಮತಗಟ್ಟೆ ಸಂಖ್ಯೆ 140 ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಇರುವ ಕಾರಣ ಇಲ್ಲಿ ಹೆಚ್ಚಿನ ಸಂಖ್ಯೆಯ ಪೋಲಿಸ್ ದಳವನ್ನು ನಿಯೋಜಿಸಿ ವಿಶೇಷ ಭದ್ರತೆ ಒದಗಿಸಲಾಗಿದೆ.
ಚುನಾವಣಾಧಿಕಾರಿಗಳ ಮೇಲೆ ರೇಗಾಡಿದ ಜಿಲ್ಲಾಧಿಕಾರಿ
ಮತದಾನದ ಹಿಂದಿನ ದಿನ ಮತಗಟ್ಟೆಗಳಿಗೆ ತೆರಳಲು ಚುನಾವಣಾ ಸಿಬ್ಬಂದಿ ಅಧಿಕಾರಿಗಳು ತಯಾರಾಗಿದ್ದರು ಚುನಾವಣಾ ಉಸ್ತುವಾರಿ ಹೊತ್ತಿದ್ದ ಅಧಿಕಾರಿ ಮತ್ತು ಸಿಬ್ಬಂದಿ ನಡುವಿನ ಸಮನ್ವಯತೆ ಕೊರತೆಯಿಂದಾಗಿ ಮಧ್ಯಾನಃ ಮೂರು ಗಂಟೆಯಾದರು ಸಿಬ್ಬಂದಿಯನ್ನು ಮತಗಟ್ಟೆಗೆ ಕರೆದುಕೊಂಡು ಹೋಗುವಂತ ಬಸ್ಸುಗಳು ಮಹಿಳಾ ಕಾಲೇಜು ಆವರಣದಲ್ಲಿ ಇತ್ತು ಇದೆ ಸಮಯಕ್ಕೆ ಕೋಲಾರದಿಂದ ಬಂದಂತ ಜಿಲ್ಲಾಧಿಕಾರಿ ಬಸ್ಸುಗಳು ಹಾಗು ಸಿಬ್ಬಂದಿಯನ್ನು ನೋಡಿದವರೆ ಚುನಾವಣಾ ಉಸ್ತುವಾರಿ ಹೊತ್ತಿದ್ದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡು ರೇಗಾಡಿದರು ತಕ್ಷಣ ಕಾರ್ಯಪ್ರವೃತ್ತರಾದ ಚುನಾವಣಾ ಸಿಬ್ಬಂದಿ ತಕ್ಷಣ ಬಸ್ ಏರಿ ಜಾಗಕಾಲಿ ಮಾಡಿದರು.