- ಬಹು ನೀರಿಕ್ಷೀತ ಬಹುಭಾಷ ಚಿತ್ರ
- ಅರ್ಧ ನಾರೀಶ್ವರ ಪಾತ್ರದಲ್ಲಿ
- ಅಲ್ಲು ಅರ್ಜುನ್.ಅಭಿನಯಕ್ಕೆ
- ಸಿನಿಮಾ ಪ್ರಿಯರ ಕಾತುರ
ನ್ಯೂಜ್ ಡೆಸ್ಕ್: ಪುಷ್ಪ ದಿ ರೈಸ್ ಚಿತ್ರ ಬಿಡುಗಡೆಯಾದ ನಂತರ ಜಾಗತಿಕವಾಗಿ ಸಿನಿಮಾ ಮನೋರಂಜನೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು ಸಿನಿಮಾ ಪ್ರಿಯರು ಇನ್ನು ಮರೆತಿಲ್ಲ, ನಟ ಅಲ್ಲು ಅರ್ಜುನ್ ನಟನೆ ಅದು ಯಾವ ಮಟ್ಟಕ್ಕೆ ತಲುಪಿದೆ ಅಂದರೆ ಲಿಂಗ ಭೇದ ಇಲ್ಲದೆ ವಯಸ್ಸಿನ ಅಂತರ ಇಲ್ಲದೆ ಜನತೆ ಅಲ್ಲು ಅರ್ಜುನ್ ನಟನಾ ಶೈಲಿಯನ್ನು ಅನುಕರಿಸಿ ಅನಂದಿಸದ್ದರು ಜನತೆ ದೇಶ ವಿದೇಶಗಳಲ್ಲೂ ಇಂದಿಗೂ ಪುಷ್ಪ ಸಿನಿಮಾ ಹಂಗಾಮ ಇದೆ ಎನ್ನಬಹುದು ತಗ್ಗದೆ ಲೇ ಅನ್ನುವ ಅಲ್ಲುಅರ್ಜುನ್ ವಿಶೇಷ ಮ್ಯಾನರಿಸಂ ಡೈಲಾಗ್ ಹಾಗು ನಾಯಕಿ ರಶ್ಮಿಕಾ ಮಂದಣ್ಣ ಅವರ ಸಾಮಿ ಸಾಮಿ ಹಾಡು ಈಗಲೂ ಜನರ ಕಿವಿಯಲ್ಲೂ ಗುಯ್ಯುಗುಟ್ಟುತ್ತಿದೆ.
ಪುಷ್ಪ ದಿ ರೈಸ್ ಚಿತ್ರದ ಯಶಸ್ಸು ಅಲ್ಲು ಅರ್ಜುನ್ ನಟನೆ ಯಿಂದ ಉತ್ತೇಜಿತರಾದ ಚಿತ್ರದ ನಿರ್ಮಾಪಕರು ಚಿತ್ರದ ಎರಡನೇ ಭಾಗವನ್ನು ಪುಷ್ಪ 2 ದಿ ರೂಲ್ ಎಂದು ಹೆಸರಿಟ್ಟು ಎಲ್ಲೂ ಚಿತ್ರದ ಬಗ್ಗೆ ಮಾಹಿತಿ ಲೀಕ್ ಆಗದೆ ಚಿತ್ರಿಕರಣ ಮುಗಿಸಿದ್ದಾರೆ ಸಿನಿಮಾ ಬೇರೆ ಲೆವೆಲ್ಲಿಗೆ ತಗೆದುಕೊಂಡು ಹೋಗಿದೆ ಎನ್ನಲಾಗುತ್ತಿದೆ. ಚಿತ್ರದ ಸನ್ನಿವೇಶದಲ್ಲಿ ನಟ ಅಲ್ಲು ಅರ್ಜುನ್ ಅರ್ಧನಾರೀಶ್ವರ ಆವತಾರದಲ್ಲಿ ಖಳನಾಯಕರನ್ನು ಬಡಿಯುವ ದೃಶ್ಯ ಹಾಗೆ ಉಗ್ರ ರೂಪದಲ್ಲಿ ಮಾಡುವ ಡ್ಯಾನ್ಸ್ ಅದೇ ಒಂದು ರೆಂಜ್ ನಲ್ಲಿ ಇರುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ ಈ ಎಲ್ಲಾ ಹಿನ್ನಲೆಯಲ್ಲಿ ಬಿಡುಗಡೆಗೆ ಮುಂಚೆಯೆ ಪುಷ್ಪ 2 ದಿ ರೂಲ್ ಸಾಕಷ್ಟು ದಾಖಲೆಗಳನ್ನು ಮಾಡಿದೆ ಹೊಸ ಅಲೆಗಳನ್ನು ಸೃಷ್ಟಿಸಲು ಪ್ರಾರಂಭಿಸಿದೆ ಅಲ್ಲು ಅರ್ಜುನ್ ಮತ್ತು ಅವರ ‘ಪುಷ್ಪಾ’ ದಿ ರೈಸ್ ಚಿತ್ರದಲ್ಲಿ ಅವರನ್ನು ಹೊಸ ಶೈಲಿಯಲ್ಲಿ ನೋಡಿದ್ದ ಅವರ ಅಭಿಮಾನಿಗಳು ಈಗ ಚಿತ್ರದ ಎರಡನೇ ಭಾಗವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಪುಷ್ಪಾ2 ದಿ ರೂಲ್ ಅಭಿಮಾನಿಗಳ ಕಿವಿಗೆ ಸುಮಧುರ ಸಂಗೀತಆಣ್ಣೂ ಮ್ಯಾಜಿಕ್ ಮುಜಿಸಿಯನ್ ದೇವಿಶ್ರೀ ಪ್ರಸಾದ್ ವಿಶೇಷವಾದ ಅವಕಾಶ ನೀಡಿದ್ದರೆ ಎನ್ನಲಾಗುತ್ತಿದೆ.
15ನೇ AUG 2024 ರಂದು ಕನ್ನಡ,ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಬೆಂಗಾಲಿ ಭಾಷೆಗಳಲ್ಲಿ ವಿಶ್ವದಾದ್ಯಂತ ಗ್ರ್ಯಾಂಡ್ ಬಿಡುಗಡೆಯಾಗಲಿರುವ ಸಿನಿಮಾದ ಮೊದಲ ಹಾಡು ಮೇ 1 ರಂದು ಸಂಜೆ 5.04 ಕ್ಕೆ ಬಿಡುಗಡೆಯಾಗಿದೆ. ಅಲ್ಲು ಅರ್ಜುನ್, ಫಹದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಅವರ ನಟನೆಯಲ್ಲಿ ಚಿತ್ರವನ್ನು ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ನಿರ್ಮಿಸುತ್ತಿದ್ದರೆ, ಸುಕುಮಾರ್ ನಿರ್ದೇಶನ ಮಾಡಿದ್ದಾರೆ.