- ಗ್ರಾಮಸ್ಥರಲ್ಲಿ ಚಿರತೆ ಆತಂಕ
- ನಗರದಲ್ಲಿ ಸಂಚರಿಸಿದ ಕೃಷ್ಣಮೃಗ
- ಕೊಡದವಾಡಿಯಲ್ಲಿ ಜಿಂಕೆ ರಕ್ಷಣೆ
ಚಿಂತಾಮಣಿ:ಕಳೆದ ಎರಡು ಮೂರು ದಿನಗಳಿಂದ ಚಿಂತಾಮಣಿ ನಗರ ಸೇರಿದಂತೆ ತಾಲೂಕಿನಲ್ಲಿ ಕಾಡು ಪ್ರಾಣಿಗಳ ವಿಚಾರ ಹೆಚ್ಚು ಚರ್ಚೆಗೆ ಬರುತ್ತಿದೆ,ರಾತ್ರಿ ವೆಳೆ ಕೃಷ್ಣಮೃಗವೊಂದು ದಾರಿತಪ್ಪಿಯೋ ನೀರು ಆರಿಸಿಯೋ ನಗರಕ್ಕೆ ಬಂದು ನಾಯಿಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದರೆ,ತಾಲೂಕಿನ ಮೋಟಮಾಕಲಪಲ್ಲಿಯಲ್ಲಿ ಚಿರತೆ ಜಿಂಕೆಯನ್ನು ಬೇಟೆಯಾಡಿದ್ದು ಗ್ರಾಮಸ್ಥರನ್ನು ಆತಂಕಕ್ಕೆ ಈಡುಮಾಡಿದೆ ಇನ್ನೂ ಕೊಡದವಾಡಿಯಲ್ಲಿ ನಾಯಿಗಳ ದಾಳಿಗೆ ಒಳಗಾಗಿದ್ದ ಜಿಂಕೆಯನ್ನು ಗ್ರಾಮಸ್ಥರು ಕಾಪಾಡಿದ್ದಾರೆ.
ಚಿಂತಾಮಣಿ ತಾಲೂಕಿನ ಮುಂಗಾನಹಳ್ಳಿ ಹೋಬಳಿ ಮಾದಮಂಗಲದ ಬಳಿ ಕೆಲ ದಿನಗಳ ಹಿಂದೆ ಚಿರತೆಯೊಂದು ಕಾಣಿಸಿಕೊಂಡು ಗ್ರಾಮಸ್ಥರು ಭಿತಿಗೋಳಗಾಗಿದ್ದು ಮಾಸುವ ಮುನ್ನವೆ ಇದೀಗ ಮಾದಮಂಗಲಕ್ಕೆ ಹೊಂದಿಕೊಂಡಿರುವ ಕೋನಪಲ್ಲಿ ಬಳಿಯ ಕುಗ್ರಾಮವಾದ ಮೋಟಮಾಕಲಪಲ್ಲಿ ಅರಣ್ಯ ವ್ಯಾಪ್ತಿಗೆ ಸೇರಿದ ಕೋನಪಲ್ಲಿ ಗ್ರಾಮದ ಹರೀಶ್ ಎಂಬುವರ ಹೊಲದಲ್ಲಿ ರಾತ್ರಿ ವೆಳೆ ಬಂದ ಚಿರತೆ ಜಿಂಕೆಯನ್ನು ಬೇಟಿಯಾಡಿದೆ ನಂತರದಲ್ಲಿ ಅರ್ದಂಬರ್ಧ ಜಿಂಕೆಯನ್ನು ತಿಂದಿರುವ ಚಿರತೆ ಜಿಂಕೆ ಶವವನ್ನು ಅಲ್ಲೆ ಬಿಟ್ಟು ಹೋಗಿದೆ, ಚಿರತೆ ಓಡಾಟದ ಹೆಚ್ಚೆ ಗುರುತುಗಳು ಸ್ಪಷ್ಟವಾಗಿ ಗ್ರಾಮಸ್ಥರಿಗೆ ಕಾಣಿಸಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಭಯಬ್ರಾಂತರಾಗಿದ್ದು ಜಮೀನುಗಳಲ್ಲಿ ಒಂಟಿಯಾಗಿ ಓಡಾಡಲು ಚಿರತೆಯ ಭಯ ಕಾಡುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಅರಣ್ಯ ಇಲಾಖೆಯಿಂದ ಏನು ಪ್ರಯೋಜನ ಇಲ್ಲ
ಈ ಹಿಂದೆ ಹಲವಾರು ಬಾರಿ ಕುರಿ ಕಾಯುವವರು ತೋಟದಲ್ಲಿ ಕೆಲಸ ಮಾಡುವವರು ಚಿರತೆಯ ಸುಳಿವು ಸಿಕ್ಕ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರಾದರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋಗಿದ್ದು ಬಿಟ್ಟರೆ ನಂತರದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಗ್ರಾಮಸ್ಥರ ಆರೋಪ.ಜಿಂಕೆಯನ್ನು ಚಿರತೆ ಬೇಟೆಯಾಡಿರುವ ಕುರಿತಂತೆ ಅರಣ್ಯ ಅಧಿಕಾರಿಗಳು ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸ್ಥಳೀಯ ಆಗಮಿಸಿ ಪರಿಶೀಲಿಸಿದ್ದಾರೆ.
ಬೇಟೆ ಸ್ಥಳದಲ್ಲಿ ಸಿಸಿ ಕ್ಯಾಮಾರ ಅಳವಡಿಕೆ
ಮೋಟಮಾಕಲಪಲ್ಲಿ ಅರಣ್ಯ ವ್ಯಾಪ್ತಿಯ ಸಹಾಯಕ ಅರಣ್ಯಾಧಿಕಾರಿಯಾದ ಸೋಮನಾಥ್ ಈ ಕುರಿತಂತೆ ಹೇಳಿಕೆ ನೀಡಿದ್ದು ಜಿಂಕೆಯನ್ನು ಬೇಟೆಯಾಡಿರುವ ಸತ್ಯಾಸತ್ತ್ಯೆಯನ್ನು ಕಂಡು ಹಿಡಿಯಲು ಜಿಂಕೆ ಸತ್ತು ಬಿದ್ದಿರುವುದನ್ನು ಅಲ್ಲಿಯೇ ಉಳಿಸಿ ಹಾಗು ಚಿರತೆ ಒಡಾಡಿದ ಹೆಜ್ಜೆ ಗುರುತು ಇರುವ ಜಾಗದಲ್ಲಿ ಸಿಸಿ ಕ್ಯಾಮರಾಗಳ ಅಳವಡಿಸಿ ರಾತ್ರಿಸಮಯದಲ್ಲಿ ಇಲಾಖೆಯ ಸಿಬ್ಬಂದಿ ಕಣ್ಗಾವಲು ಏರ್ಪಡಿಸಲಾಗಿದೆ, ಚಿರತೆಯ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ದಾಖಲಾದರೆ ನಂತರದಲ್ಲಿ ಬೋನ್ ಅಳವಡಿಸಿ ಚಿರತೆ ಹಿಡಿಯುವುದಾಗಿ ಹೇಳುತ್ತಾರೆ
ನಗರಕ್ಕೆ ಬಂದು ನಾಯಿಗಳಿಗೆ ಸಿಲುಕಿ ಕೃಷ್ಣಮೃಗ ಸಾವು
ದಾರಿ ತಪ್ಪಿದ ಕೃಷ್ಣಮೃಗವೊಂದು ಚಿಂತಾಮಣಿ ನಗರಕ್ಕೆ ಆಗಮಿಸಿದೆ ಅಲ್ಲಿದ್ದ ಬೀದಿನಾಯಿಗಳ ಹಿಂಡು ಕೃಷ್ಣಮೃಗದ ಮೇಲೆ ದಾಳಿ ಮಾಡಿದೆ,ಪ್ರಾಣಿಯೋ0ದು ನಾಯಿಗಳಿಗೆ ಸಿಲುಕಿರುವುದನ್ನು ಕಂಡ ಅಲ್ಲಿದ್ದ ಜನತೆ ಕೃಷ್ಣಮೃಗವನ್ನು ರಕ್ಷಿಸಿದರಾದರು ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಬಳಲಿದ್ದ ಕೃಷ್ಣಮೃಗಕ್ಕೆ ಜನತೆ ಆರೈಕೆ ಮಾಡಿ ಚಿಕಿತ್ಸೆ ಕೊಂಡಿಸಿದ್ದರು ಫಲಕಾರಿಯಾಗದೆ ಮೃತಪಟ್ಟಿದೆ.
ನಗರದ ಬೆಂಗಳೂರು ಜೋಡಿ ರಸ್ತೆಯ ಕಿಶೋರ ವಿದ್ಯಾಭವನ ಸಮೀಪದಲ್ಲಿ ಕಾಣಿಸಿಕೊಂಡ ಕೃಷ್ಣಮೃಗದ ಮೇಲೆ ನಾಯಿಗಳ ಹಿಂಡು ದಾಳಿಮಾಡಿದೆ ಇದನ್ನು ನೋಡಿದ ಸ್ಥಳೀಯರಾದ ನಾಗರಾಜ್, ಸಲೀಂ, ಮುಕ್ತಿಯಾರ್ ಮತ್ತು ಷೇಕ್ ಬಾಬ್ಜಾನ್ ರವರು ತಕ್ಷಣ ನಾಯಿಗಳಿಂದ ಕೃಷ್ಣಮೃಗವನ್ನು ರಕ್ಷಿಸಿದ್ದಾರೆ ನಂತರ ಅವರು ಅರಣ್ಯ ಇಲಾಖೆಯ ಸಹಾಯಕ ಅರಣ್ಯಾಧಿಕಾರಿ ಧನಲಕ್ಷ್ಮೀ ಅವರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಅಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಕೃಷ್ಣಮೃಗಕ್ಕೆ ಔಷದೋಚಾರವನ್ನು ಮಾಡಿದ್ದು ಕೃಷ್ಣಮೃಗವನ್ನು ವಶಕ್ಕೆ ಪಡೆದುಕೊಂಡು ಕೈವಾರ ಅರಣ್ಯಕ್ಕೆ ಕರೆದೊಯ್ದ ಸೂಕ್ತ ಚಿಕಿತ್ಸೆ ಕೊಡಿಸಿರುತ್ತಾರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಮತ್ತೊಂದು ಜಿಂಕೆ ರಕ್ಷಣೆ
ತಾಲ್ಲೂಕಿನ ಕಸಬಾ ಹೋಬಳಿ ಕೊಡದವಾಡಿ ಗ್ರಾಮದಲ್ಲಿ ಮದ್ಯ ರಾತ್ರಿ ಸಮಯದಲ್ಲಿ ನಾಯಿಗಳ ದಾಳಿಗೆ ಸಿಲುಕಿದದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದಾರೆ ಆದರೆ ಜಿಂಕೆಯ ಎರಡು ಕಾಲುಗಳು ತುಂಡಾಗಿದ್ದು ನಿಂತು ಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ, ಅದು ಸಹ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು ಅದು ಸಹ ಬದುಕುವುದು ಕಷ್ಟವಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.
ಕಾಡು ಪ್ರಾಣಿಗಳು ನಗರಕ್ಕೆ ಬರುತ್ತಿರುವುದೇಕೆ?
ಕೈವಾರ ಬೆಟ್ಟ ಮತ್ತು ಕೈವಾರ ಅರಣ್ಯ ಪ್ರದೇಶ, ನಗರಕ್ಕೆ ಹೊಂದಿಕೊಂಡಿರುವ ಅಂಬಾಜಿದುರ್ಗ ಬೆಟ್ಟ ಆಲಂಬಗಿರಿ ಅರಣ್ಯ ಭಾಗದಲ್ಲಿ ಜಿಂಕೆಗಳು ಹಾಗು ಇತರೆ ಕಾಡು ಪ್ರಾಣಿಗಳಿದ್ದು ಕಾಡಿನಲ್ಲಿ ನೀರಿನ ಸಮಸ್ಯೆ ಏರ್ಪಟ್ಟು ರಾತ್ರಿ ವೇಳೆ ಬಾಯಾರಿದ ಪ್ರಾಣಿಗಳು ನೀರು ಆರಿಸಿ ಜನವಸತಿ ಪ್ರದೇಶಗಳತ್ತ ಬಂದಿರಬಹುದು ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.