ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ನಲ್ಲಿರುವ ಪುರಾಣಪ್ರಸಿದ್ದ ಶಿಲಾಮಯವಾದ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ನೃಸಿಂಹ ಜಯಂತಿ ಅಂಗವಾಗಿ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ಕಲ್ಯಾಣೋತ್ಸವ ಆಯೋಜಿಸಲಾಗಿತ್ತು,ದೇವಾಲಯದ ಪ್ರಧಾನ ಅರ್ಚಕರಾದ ರಾಜಕಸ್ತೂರಾಚಾರ್ಲು ಅವರ ನೇತೃತ್ವದಲ್ಲಿ ಮುಂಜಾನೆ ಐದು ಗಂಟೆಗೆ ಮೂಲ ದೇವರಿಗೆ ಪೂಜಾ ಪುಣ್ಯಾಹ ಅಭಿಷೇಕ ಹಾಗು ಹೋಮಗಳು ನಡೆಯಿತು ನಂತರದಲ್ಲಿ ಕಲ್ಯಾಣೋತ್ಸವ ನೇರವೇರಿಸಲಾಯಿತು.
ರಾಕ್ಷಸನನ್ನು ಸಂಹರಿಸಲು ವಿಷ್ಣು ನರಸಿಂಹಾವತಾರವಾದಲ್ಲಿ ಪ್ರತ್ಯಕ್ಷವಾದ ದಿನವನ್ನು ಪರಿಗಣಿಸಿ ನರಸಿಂಹ ಜಯಂತಿಯಂದು ಆಚರಿಸಿ ಅರಾಧಿಸಲಾಗುತ್ತದೆ.
ನರಸಿಂಹ ದೇವರನ್ನು ನಿಯಮಾನುಸಾರ ಪೂಜಿಸುವುದರಿಂದ ವ್ಯಕ್ತಿಯೊಳಗಿನ ಭಯ ದೂರವಾಗುತ್ತದೆ. ಅಷ್ಟೇ ಅಲ್ಲ, ಜೀವನದಲ್ಲಿ ಎದುರಾಗುವ ಎಲ್ಲಾ ರೀತಿಯ ಸಕಾರಾತ್ಮಕ ಶಕ್ತಿ ಮತ್ತು ಔದ್ಯೋಗಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಸಮೃದ್ಧಿ,ಉತ್ತಮ ಆರೋಗ್ಯ,ಸಂಪತ್ತು ಪಡೆಯಲು ಸಹಕಾರಿಯಾಗುತ್ತದೆ ಎಂದು ಅರ್ಚಕರು ತಿಳಿಸಿದರು.
ಸಂಜೆ ನಡೆದಂತ ದೇವರ ಉತ್ಸವದಲ್ಲಿ ಜಾನಪದ ಕಲಾವಿದರು ನಡೆಸಿದ ಚಕ್ಕಭಜನೆ ಮತ್ತು ಕೋಲಾಟ ಜನಮನ ತಣಿಸಿತು.