- ಜಾಣ ಕುರುಡು ನೀತಿಯಲ್ಲಿ ಎಪಿಎಂಸಿ
- ಸಂತೆ ಸುಂಕ ಪಡೆಯುತ್ತಿರುವ ಪುರಸಭೆ
- ತಾಲೂಕು ಆಡಳಿತ ಸಂಬಂದವಿಲ್ಲದಂತಿದೆ
ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ವಾರದ ಸಂತೆಗೆ ಸೂಕ್ತ ಜಾಗವಿಲ್ಲದೆ ಹೆದ್ದಾರಿಯಲ್ಲೆ ನಡೆಯುತ್ತಿದೆ, ಇದು ಹಲವಾರು ಅನಾಹುತಗಳಿಗೆ ಕಾರಣವಾಗಿದ್ದು ಪೋಲಿಸರು ಪುರಸಭೆ ತಾಲೂಕು ಆಡಳಿತ ಕಣ್ಣು-ಕಿವಿ ಮುಚ್ಚಿಕೊಂಡು ಸಂತೆ ನಡೆಯಲು ಸಹಕಾರ ನೀಡಿದಂತಾಗಿದೆ ಎಂದು ಜನತೆ ಹೇಳುತ್ತಿದ್ದಾರೆ.
ಶ್ರೀನಿವಾಸಪುರ ಪಟ್ಟಣ ಆರಂಭಂದಿಂದಲು ಈಚಲಕುಂಟೆ ಕೆರೆಗೆ ಹೊಂದಿಕೊಂಡಿರುವ ಅಚ್ಚುಕಟ್ಟು ಪ್ರದೇಶದಲ್ಲಿ ಸಂತೆ ನಡೆಯುತಿತ್ತು, ಅಧಿಕಾರಕ್ಕೆ ಬರುವಂತ ಜನಪ್ರತಿನಿಧಿಗಳು ಸಂತೆ ಮೈದಾನದ ಜಾಗದಲ್ಲಿ ನಿವೇಶನ ರಹಿತರಿಗೆ ಒಂದಷ್ಟು ಜನಕ್ಕೆ ಗುಡಿಸಲು ಹಾಕಿಕೊಳ್ಳಲು ಪರೊಕ್ಷವಾಗಿ ಅವಕಾಶ ಕಲ್ಪಿಸಿದರು ಮುಂದೆ ಒಂದಷ್ಟರ ಜೊತೆಗೆ ಮತ್ತೊಂದಷ್ಟು ಆಯಿತು ಸಂತೆಗೆ ಜಾಗವಿಲ್ಲದಷ್ಟು ಗುಡಿಸಲುಗಳು ತಲೆ ಎತ್ತಿತು,ಮತ್ತೆ ರಾಜಕೀಯ ತಿರುವು ಪಡೆದುಕೊಂಡು ಗುಡಿಸಲು ವಾಸಿಗಳಿಗೆ ಬೃಹದಕಾರವಾಗಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದ್ದು, ಸಂತೆಗೆ ಜಾಗವಿಲ್ಲದಷ್ಟು ಬೃಹದಕಾರವಾಗಿ ಗುಡಿಸಲು ವಾಸಿಗಳಿಗೆ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದ್ದು, ಸಂತೆ ವಹಿವಾಟು ಅನಾಮತ್ ಮುಳಬಾಗಿಲು-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಗೆ ಬಂದು ಬಿಟ್ಟಿದೆ ಈಗ ನಡುರಸ್ತೆಯಲ್ಲೆ ಸಂತೆವ್ಯಾಪಾರ ನಡೆಯುತ್ತಿದೆ
ಹೈವೆ ರಸ್ತೆಯಲ್ಲಿ ನೂರಾರು ವ್ಯಾಪಾರಿಗಳು, ಗ್ರಾಹಕರು ಸಂತೆ ಕೂಡುವುದರಿಂದ ಪ್ರತಿ ಶನಿವಾರ ರಸ್ತೆಯಲ್ಲಿಯೇ ಜನಜಂಗುಳಿ ಸೇರುತ್ತದೆ. ಸಂತೆ ನಡೆಯುವ ದಿನ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗುತ್ತದೆ ಈ ಬಗ್ಗೆ ಕೆಳುವರು ಇಲ್ಲ ಹೇಳುವರು ಇಲ್ಲದಂತಾಗಿದ್ದು ವಾಹನಗಳು ಹೊಸ ಬಸ್ ನಿಲ್ದಾಣದ ಮೂಲಕ ರಾಷ್ಟ್ರೀಯ ಹೆದ್ದಾರಿ ತಲುಪುತ್ತವೆ.
ಮುಳಬಾಗಿಲು ವೃತ್ತವನ್ನು ಆವರಿಸಿಕೊಳ್ಳುತ್ತಿರುವ ಸಂತೆ.
ದಿನೆ ವ್ಯಾಪಾರಸ್ಥರ ಸಂಖ್ಯೆ ಹೆಚ್ಚುತ್ತಿದ್ದು ಸೊಪ್ಪು, ಹಣ್ಣುಹಂಪಲು ಮಾರುವಂತ, ವ್ಯಾಪಾರಿಗಳು ಶ್ರೀನಿವಾಸಪುರ-ಕೋಲಾರ ರಸ್ತೆ ಹಾದು ಹೋಗಿರುವ ಮುಳಬಾಗಿಲು ವೃತ್ತವನ್ನು ಆವರಿಸಿಕೊಳ್ಳುತ್ತಿದ್ದಾರೆ ವರ್ತಕರು ಹಣ್ಣು, ತರಕಾರಿ,ಸಿಹಿ ತಿಂಡಿಗಳು ಸೇರಿದಂತೆ ಅಗತ್ಯ ಪದಾರ್ಥವನ್ನು ಮಾರಟ ಮಾದಲು ಸಂತೆಗೆ ತಂದಿರುತ್ತಾರೆ. ರಸ್ತೆಯ ಬದಿಯೇ ತಾತ್ಕಾಲಿಕ ಟೆಂಟ್ ಹಾಕಿಕೊಂಡು ವ್ಯಾಪಾರ ಮಾಡಿದರೆ, ಮತ್ತೊಂದಿಷ್ಟು ಜನ ಸರಕು ಸಾಗಣೆ ಆಟೋ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವ ಹಿನ್ನಲೆಯಲ್ಲಿ ,ಮುಳಬಾಗಿಲು ವೃತ್ತದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಗ್ರಾಹಕರು ಅಷ್ಟೇ ಅನಿವಾರ್ಯ ಎಂಬಂತೆ ರಸ್ತೆಯಲ್ಲೇ ನಿಂತು ವ್ಯಾಪಾರ ಮಾಡುವಾಗ ವಾಹನ ಉಜ್ಜಿಕೊಂಡು ಹೋದರೂ ಲೆಕ್ಕಿಸದೆ ತಮಗೆ ಬೇಕಾದುದನ್ನು ಖರೀದಿಸುವಲ್ಲಿ ಮಗ್ನರಾಗಿರುತ್ತಾರೆ.ಲಕ್ಷಾಂತರ ರೂ.ವಹಿವಾಟು ನಡೆಯುವ, ಸಂತೆ ಸುಂಕವನ್ನು ಪುರಸಭೆ ಪಡೆದುಕೊಳ್ಳುತ್ತಿದೆ ಆದರೆ ಸಂತೆಗೆ ಪ್ರತ್ಯೇಕ ಸೂಕ್ತ ವ್ಯವಸ್ಥೆ ಕಲ್ಪಿಸದೆ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.ಸಹಸ್ರಾರು ಜನ ಸಂಚರಿಸುವ ವಾಹನಗಳು ಓಡಾಡುವ ಹೈವೆ ರಸ್ತೆಯಲ್ಲಿ ಸಂತೆ ನಡೆಸುವುದು ಎಷ್ಟು ಸಮಂಜಸ, ಸೂಕ್ತ ಎಂಬುದು ಜನತೆಯ ಪ್ರಶ್ನೆಯಾಗಿದೆ.
ಜಾಣ ಕುರುಡು ಅಸಮರ್ಥ ಎ.ಪಿ.ಎಂ.ಸಿ
ರೈತರ ವ್ಯಾಪರಕ್ಕೆ ಮಾರುಕಟ್ಟೆ ಒದಗಿಸಬೇಕಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹೈವೆ ರಸ್ತೆಯಲ್ಲಿ ರೈತರು ತಾವು ಬೆಳೆದ ಉತ್ಪನ್ನಗಳನ್ನು ತಂದು ಸಂತೆ ವ್ಯಾಪಾರ ಮಾಡುತ್ತಿದ್ದರು ಜಾಣ ಕುರಡು ನೀತಿ ಅನುಸರಿಸುತ್ತಿದೆ.ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ ನೂತನ ಸಂತೆ ನಿರ್ಮಾಣಕ್ಕೆ ಪ್ರತಿ ಎಪಿಎಂಸಿಗೆ ಒಂದು ಕೋಟಿ ಮಂಜೂರು ಮಾಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದಾಗ ಶ್ರೀನಿವಾಸಪುರ ಎ.ಪಿ.ಎಂ.ಸಿ ಯಲ್ಲಿ ಅಸಮರ್ಥರು ಆಡಳಿತ ನಡೆಸುತ್ತಿದ್ದ ಪರಿಣಾಮ ರಾಜ್ಯ ಸರ್ಕಾರದಿಂದ ಹಣ ತರುವಂತ ಶಕ್ತಿ ಇಲ್ಲದೆ ಆಡಳಿತ ಮಂಡಳಿ ವೈಫಲ್ಯದಿಂದ ನೂತನ ಸಂತೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿತ್ತು.ನೂತನ ಸಂತೆಗೆ ಸ್ಥಳ ಗುರುತಿಸುವ ಕಾರ್ಯ ಮಾಡಲಾಗದೆ ಅಸಮರ್ಥ ಆಡಳಿತಕ್ಕೆ ಸಾಕ್ಷಿ ಆಯಿತು ಶ್ರೀನಿವಾಸಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ.