- ಮಾವಿನಕಾಯಿ ಹಣ ಸ್ಕೂಟನಲ್ಲಿಟ್ಟಿದ್ದು
- ಊರಿಗೆ ಹೋಗುವಾಗ ಅಂಗಡಿ ಬಳಿ ನಿಲ್ಲಿಸಿದ್ದ
- ವಾಹನದಿಂದ ಹಣ ಕದ್ದಿರುವ ಕಳ್ಳರ ಗ್ಯಾಂಗ್
ಶ್ರೀನಿವಾಸಪುರ:ರೈತನೊಬ್ಬ ಮಾವಿನಕಾಯಿ ಹಣ ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಸ್ಕೂಟರನ ಡಿಕ್ಕಿಯಲ್ಲಿಟ್ಟು ಊರಿಗೆ ಹೊರಟವ ದಾರಿಯಲ್ಲಿ ಎಲೆಕ್ಟ್ರಿಕ್ ಅಂಗಡಿ ಬಳಿ ನಿಲ್ಲಿಸಿ ಮನೆಗೆ ಬೇಕಾದ ವಸ್ತುಗಳನ್ನು ಖರಿದಿಸಿ ವಾಪಸ್ಸು ಊರಿಗೆ ಹೋಗಿ ನೋಡಿದರೆ ಸ್ಕೂಟರನ ಡಿಕ್ಕಿಯಲ್ಲಿಟ್ಟ ಹಣ ನಾಪತ್ತೆ ಗಮನಕ್ಕೆ ಬಂದಿದೆ.
ಹಣ ಕಳೆದುಕೊಂಡ ವ್ಯಕ್ತಿ ಮಣಿಗಾನಹಳ್ಳಿ ಗ್ರಾಮದ ವೆಂಕಟೇಶಪ್ಪ,ಈತ ಮಾವಿನಕಾಯಿ ಹಾಕಿದ್ದ ಹಣ ಸುಮಾರು ಒಂದೂವರೆ ಲಕ್ಷ ಮಂಡಿ ಮಾಲಿಕ ನೀಡಿದ ಚೆಕ್ ಅನ್ನು ಕೆನರಾಬ್ಯಾಂಕಿನಲ್ಲಿ ಡ್ರಾ ಮಾಡಿಕೊಂಡು ಹೊರಗೆ ಬಂದು ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದಾನೆ ನಂತರ ವಾಹನ ಚಲಾಯಿಸಿಕೊಂಡು ಊರಿಗೆ ಹೋರಟವನು ಕೆಇಬಿ ಕಚೇರಿ ಮುಂಬಾಗದ ಎಲೆಕ್ಟ್ರಿಕ್ ಅಂಗಡಿ ಬಳಿ ವಾಹನ ನಿಲ್ಲಿಸಿ ಮನೆಗೆ ಬೇಕಾದಂತ ವಸ್ತುಗಳನ್ನು ಖರಿದಿಸಿರುತ್ತಾನೆ ವಸ್ತುಗಳ ಕವರ್ ಅನ್ನು ವಾಹನಕ್ಕೆ ತಗಲಾಕಿಕೊಂಡು ಊರಿಗೆ ಹೋಗಿ ಹಣ ತಗೆದುಕೊಳ್ಳಲು ಸ್ಕೂಟರ್ ಡಿಕ್ಕಿ ತೆರೆದಿದ್ದಾನೆ ಅಲ್ಲಿ ಹಣ ಇಲ್ಲದಿರುವುದನ್ನು ಕಂಡು ಗಾಬರಿಯಾಗಿದ್ದಾನೆ ನಂತರ ಪಟ್ಟಣಕ್ಕೆ ಬಂದು ಪೋಲಿಸರಿಗೆ ದೂರು ನೀಡಿದ್ದು ಅದರಂತೆ ಪೋಲಿಸರು ಬ್ಯಾಂಕ್ ಹಾಗು ಎಲೆಕ್ಟ್ರಿಕ್ ಅಂಗಡಿ ಬಳಿ ವಿಚಾರಿಸಲಾಗಿ ಅಂಗಡಿ ಸಿಸಿ ಟಿವಿಯ ದಾಖಲೆಯಂತೆ ಸುಮಾರು ನಾಲ್ಕೈದು ಮಂದಿ ಇದ್ದ ಖದಿಮರ ಗ್ಯಾಂಗ್ ಅಂಗಡಿ ಬಳಿ ಗಿರಾಕಿಗಳ ಸೋಗಿನಲ್ಲಿ ವ್ಯಾಪಾರಕ್ಕೆ ಬಂದಿದ್ದರೆ ಇನ್ನಿಬ್ಬರು ವಾಹನದ ಬಳಿ ಇದ್ದು ಸ್ಕೂಟರನಲ್ಲಿದ್ದ ಹಣ ಎಗರಿಸಿದ್ದಾರೆ ಎಂದು ಹೇಳಲಾಗಿದೆ.
ಪಟ್ಟಣದಲ್ಲಿ ಹೆಚ್ಚುತ್ತಿರುವ ಖದೀಮರ ಹಾವಳಿ!
ಇತ್ತಿಚಿಗೆ ಪಟ್ಟಣದಲ್ಲಿ ಹಾಡುಹಗಲೆ ಖತರ್ನಾಕ್ ಖದೀಮರ ಹಾವಳಿ ಹೆಚ್ಚಾಗಿದ್ದು ಮಹಿಳೆಯೊಬ್ಬರನ್ನು ಪೋಲಿಸರೆಂದು ನಂಬಿಸಿ ಬಂಗಾರ ಎಗರಿಸಿದ ಘಟನೆ ಮಾಸುವ ಮುನ್ನವೆ,ಸ್ಕೂಟರನಲ್ಲಿದ್ದ ಹಣ ಎಗರಿಸಿದ್ದಾರೆ ಪಟ್ಟಣದ ಜನಸಂದಣಿ ಪ್ರದೇಶದಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳ ಕಳ್ಳತನ ಆಗುತ್ತಿದೆ ಸಂತೆಯಲ್ಲಿ ಪಿಕ್ ಪಾಕೆಟ್ ಕಳ್ಳರ ಕಾಟ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.