ನ್ಯೂಜ್ ಡೆಸ್ಕ್:ಮುಂಗಾರು ಅಧಿವೇಶನದಲ್ಲಿ ಬುಧವಾರ ಸದನದಲ್ಲಿ ಮುಡಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ವಿಧಾನಸಭೆ ನಡೆಯುವ ಒಳಗಡೆಯೇ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ವಿಧಾನಸಭೆಯಿಂದ ತಾಳ ಬಡಿಯುತ್ತಾ ಭಜನೆ ಮಾಡುತ್ತಲೇ ವಿಧಾನ ಪರಿಷತ್ಗೆ ತೆರಳಿದ ಬಿಜೆಪಿ ವಿಧಾನ ಪರಿಷತ್ ಸದಸ್ಯರು, ವಿಧಾನಸೌಧದ ಕಾರಿಡಾರ್ಗಳಲ್ಲಿ ವಾದ್ಯಗಳನ್ನು ಬಾರಿಸುತ್ತ ಶ್ರೀರಾಮನ ಭಜನೆ,ವಿಠ್ಠಲ ಭಜನೆ ಭಾವಗೀತೆಗಳ ಗಾಯನ ಮಾಡುತ್ತ ವಿಪಕ್ಷ ನಾಯಕ ಆರ್.ಆಶೋಕ್ ಮತ್ತು ಸಿಟಿ ರವಿ ತಾಳಕ್ಕೆ ಶಾಸಕ ಪ್ರಭು ಚವ್ಹಾಣ್ ಹೆಜ್ಜೆ ಹಾಕಿದರೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮೂಕನಾದೆ ನಾನು ಮುಡ ಹಗರಣಕ್ಕೆ ಎಂದು ಹಾಡಿಗೆ ತಾಳ ಬಾರಿಸಿದರು, ಹನುಮಾನ್ ಚಾಲೀಸ್ ಪಠಣ ಮಾಡುವ ಮೂಲಕ ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಭಾಗೀರಥಿ ಮುರಳ್ಯ ಸದನದಲ್ಲಿ ಗಮನ ಸೆಳೆದರು ಇದಕ್ಕೆ ಇತರ ಸದಸ್ಯರು ಸಾಥ್ ನೀಡಿದರು.ಇನ್ನು ಭಜನೆ ಮೂಲಕವೇ ಕಾಂಗ್ರೆಸ್ ಸರ್ಕಾರಕ್ಕೆ ಲೆವಡಿ ಮಾಡಿದ ಬಿಜೆಪಿ, ‘ಸಮಾಜವಾದ ಅಂತಾರೆ ಮಜಾವನ್ನೇ ಮಾಡ್ತಾರೆ. ಸಮಾಜವಾದ ಅಂತಾರೆ ದಲಿತರ ಹಣವನ್ನು ನುಂಗ್ತಾರೆ ಎಂದು ಭಜನೆ ಮಾಡುತ್ತ ಕಾಂಗ್ರೆಸ್ ಸರ್ಕಾರಕ್ಕೆ ಟಾಂಗ್ ಕೊಟ್ಟರು.
ಹಗರಣದ ತನಿಖೆಗೆ ನ್ಯಾಯಮೂರ್ತಿಗಳ ನೇತೃತ್ವದ ತಂಡ ರಚಿಸಲಾಗಿದೆ. ಆದರೆ ಮುಖ್ಯಮಂತ್ರಿಯೇ ತನಿಖೆಗೆ ಆದೇಶ ಮಾಡಿದರೆ ನ್ಯಾಯ ಸಿಗುತ್ತದ ಹಾಗೆ ಸ್ಪೀಕರ್ ಸಹ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಭೋವಿ ನಿಗಮದ ಹಗರಣ ಚರ್ಚಿಸಲು ಅವಕಾಶ ನೀಡುತ್ತಾರೆ, ಆದರೆ ವಾಲ್ಮೀಕಿ ನಿಗಮದ ಹಗರಣ ಚರ್ಚೆಗೆ ಅವಕಾಶ ನೀಡುತ್ತಿಲ್ಲ.ಎಂದು ವಿಪಕ್ಷ ಶಾಸಕರ ಆರೋಪ.
ವಿಧಾನಸೌಧದಲ್ಲಿ ಆಹೋರಾತ್ರಿ ಧರಣಿಗೆ ಮುಂದಾಗಿರುವ ವಿಪಕ್ಷ ಶಾಸಕರಿಗೆ ಸ್ಪೀಕರ್ ಏರ್ಪಡಿಸಿದ್ದ ಊಟೋಪಚಾರವನ್ನು ಪ್ರತಿಪಕ್ಷ ನಾಯಕರು ತಿರಸ್ಕರಿಸಿ, ಸ್ವಂತ ಖರ್ಚಿನಲ್ಲೇ ವಿಧಾನಸೌಧಕ್ಕೆ ಊಟ ತರಿಸಿಕೊಂಡು ಊಟ ಮಾಡಿದ್ದಾರಂತೆ ಭ್ರಷ್ಟಾಚಾರದ ಹಣದಲ್ಲಿ ನಾವು ಊಟ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್,ಶಾಸಕರಾದ ಸುರೇಶ್ ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಹಲವು ನಾಯಕರು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೋಂಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಧರಣಿ ನಿಲ್ಲುವುದಿಲ್ಲ ಎಂದಿರುತ್ತಾರೆ.