ಶ್ರೀನಿವಾಸಪುರ: ಶ್ರೀನಿವಾಸಪುರದ ಗ್ರಾಮ ದೇವತೆ ಶ್ರೀಚೌಡೇಶ್ವರಿ ದೇವಾಲಯಕ್ಕೆ ತನ್ನದೆ ಆದ ಐತಿಹ್ಯ ಇದೆ ಇದರ ಕಲ್ಯಾಣಿ ಭೃಹದಕಾರವಾಗಿದ್ದು ನಿರ್ವಹಣೆ ಇಲ್ಲದೆ ಸೋರಗಿದೆ ಇಂತಹ ಕಲ್ಯಾಣಿಯನ್ನು ಇಂದು ಬೆಂಗಳೂರಿನ ಶಿವಭಕ್ತರ ತಂಡವೊಂದು ಭಾನುವಾರ ಇಲ್ಲಿಗೆ ಆಗಮಿಸಿ ಸ್ವಚ್ಚಮಾಡಿದ್ದು ಹೆಮ್ಮೆಯ ವಿಚಾರವಾಗಿದೆ.
ಊರಿನ ಕಲ್ಯಾಣಿ ಸ್ವಚ್ಚಮಾಡುವ ವಿಚಾರದಲ್ಲಿ ಸ್ಥಳೀಯವಾಗಿ ನೂರೆಂಟು ವಿಘ್ನಗಳು ಎಪ್ಪಾತ್ತಾರು ಅಡ್ಡಿಆತಂಕಗಳು ಇವೆಲ್ಲವೂ ಸಾಮನ್ಯವೆ ಸರಿ ಆದರೆ ಊರಿನ ಶ್ರೀಚೌಡೇಶ್ವರಿ ಕಲ್ಯಾಣಿ ಕ್ಲೀನ್ ಮಾಡಲು ಬೆಂಗಳೂರಿನ ಹಲಸೂರಿನಲ್ಲಿರುವ ಅಂಡರಸು ಉಳವರಪಾಣಿ ತಿರು ಕೂಟಂನ ಆರವತ್ತಕ್ಕೂ ಹೆಚ್ಚು ಸದಸ್ಯರು ಶ್ರೀನಿವಾಸಪುರಕ್ಕೆ ಆಗಮಿಸಿ ಕಲ್ಯಾಣಿಯಲ್ಲಿ ಹೂಳೆತ್ತುವುದು ಸೇರಿದಂತೆ ಬೆಳದಿದ್ದ ಗಿಡಗಂಟಿಗಳನ್ನು ಕಿತ್ತು ಕಸಕಡ್ದಿ ತಗೆದು ಹೋರಹಾಕಿದ್ದಾರೆ.
ಅರವತ್ತುಕ್ಕೂ ಹೆಚ್ಚು ಸದಸ್ಯರು ಆಗಮಿಸಿದ ತಂಡದಲ್ಲಿ ಯುವಕರು ಯುವತಿಯರು ಮದ್ಯವಯಸ್ಕ ಮಹಿಳೆಯರು ಪುರುಷರು ಹಿರಿಯರು ನಿವೃತ್ತ ಅಧಿಕಾರಿಗಳು ವಿವಿಧ ಹುದ್ದೆಗಳನ್ನು ಕಾರ್ಯನಿರ್ವಹಿಸುವರು ಇದ್ದು ಇವರೆಲ್ಲ ರಾಜ್ಯ ಸಾರಿಗೆ ಬಸ್ ಮಾಡಿಕೊಂಡು ಬೆಂಗಳೂರಿನಿಂದ ಅಗಮಿಸಿದ್ದು ಅವರೆಲ್ಲರು ಪಿಕಾಸಿ,ಸನಿಕೆ,ಹಾರೆ,ಗುದ್ದಲಿ,ಕೈಯಲ್ಲಿ ಹಿಡಿದುಕೊಂಡು ಕಲ್ಯಾಣಿಯಲ್ಲಿ ಬಿದ್ದಿದ್ದ ಕಸಕಡ್ಡಿ, ಬೆಳೆದಿದ್ದ ಮುಳ್ಳುಗಿಡ,ಪೊದೆಯನ್ನು ಕತ್ತರಿಸಿ ಸಂಪೂರ್ಣ ತೆರವು ಮಾಡಿ ಅವುಗಳನ್ನು ಬಾಂಡ್ಲಿಗಳಲ್ಲಿ ಹಾಕಿ ಸಾಗಿಸಿದರು.ಬರೋಬ್ಬರಿ ಏಳೆಂಟು ಗಂಟೆಗಳ ಕಾಲದ ಶ್ರಮದಾನದ ನಡೆಸಿ ಕಲ್ಯಾಣಿ ತಳದಲ್ಲಿನ ಊಳನ್ನೂ ಸಹ ತೆಗೆದು ಹೊರಹಾಕಿದರು.


ಹೂಳು ತೆಗೆಯಲು ಹರಸಾಹಸ
ಪುರುಷರು ಯುವಕರು ಕಲ್ಯಾಣಿ ತಳದ ಕೊಳಚೆ ನೀರಿನಲ್ಲಿ ಇಳಿದು ಊಳು ತೆಗೆದು ಕೊಟ್ಟರೆ ಮಹಿಳೆಯರು ಯಾವುದೆ ಮುಜಗರ ಇಲ್ಲದೆ ಗಬ್ಬುನಾರುತ್ತಿದ್ದ ನೀರಿನಲ್ಲಿದ್ದ ಕೊಳಕು ಬಟ್ಟೆ ಅಯ್ಯಮ್ಮ ಮಾಲೆ,ಗಾಜಿನ ತುಂಡುಗಳು ಹಾಗು ಇತರೆ ವಸ್ತುಗಳನ್ನು ಬಾಂಡ್ಲಿಯಲ್ಲಿ ತಗೆದುಕೊಂಡು ಹೋಗಿ ಹೊರಹಾಕುತ್ತಿದ್ದರು ನೀರಿನಲ್ಲಿ ಇಳಿದಿದ್ದ ಸಂದರ್ಭದಲ್ಲಿ ಒಡೆದ ಬಾಟಲಗಳು ಹಳೆಯ ಪೋಟೋ ಗಾಜುಗಳು ಮರದ ಕಬ್ಬಿಣದ ಫ್ರೇಮಗಳು ಇದ್ದು ಶ್ರಮಧಾನ ಮಾಡುತ್ತಿದ್ದವರಿಗೆ ಗಾಜು ಚುಚ್ಚಿ ಗಾಯವಾಗಿ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು.ಬೆಂಗಳೂರಿನಿಂದ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಊರಿನವರಿಗೆ ಮಾದರಿಯಾದರು.
ಸೇವೆ ದೃಷ್ಠಿಯಿಂದ ಮಾಡುತ್ತಿದ್ದೀವಿ
ಈ ಸಂದರ್ಭದಲ್ಲಿ ಮಾತನಾಡಿದ ಅಂಡರಸು ಉಳವರಪಾಣಿ ತಿರು ಕೂಟಂನ ಮುಖ್ಯಸ್ಥ ಮೂಲತಃ ಸಿವಿಲ್ ಇಂಜನಿಯರ್ ಆಗಿರುವ ಮದಿವಣನ್ ಹೇಳುವಂತೆ ನಮ್ಮ ತಂಡದಲ್ಲಿ ಹಲವಾರು ರೀತಿಯ ವೃತ್ತಿಪರರು ಉನ್ನತ ವಿದ್ಯಾಭ್ಯಾಸ ಮಾಡಿ ಉನ್ನತ ಪದವಿಗಳಲ್ಲಿ ಇರುವಂತವರು ಇದ್ದು,ಸುಮಾರು ನಾನೂರು ಐವತ್ತು ಜನ ಸಮಾನ ಮನಸ್ಕರೆಲ್ಲ ಒಗ್ಗೂಡಿ ಸೇವಾ ಭಾವನೆಯಿಂದ ತಂಡ ಕಟ್ಟಿಕೊಂಡು ಪ್ರತಿ ತಿಂಗಳು ಕೊನೆಯ ಭಾನುವಾರ ಎಲ್ಲೆಲ್ಲಿ ಕಲ್ಯಾಣಿ ಸ್ವಚ್ಚತೆ ಇಲ್ಲದೆ ಇರುತ್ತದೊ ಹಾಗೆ ಶಿಥಿಲವಾಗಿರುವಂತ ಶಿವನ ಮಂದಿರಗಳಲ್ಲಿನ ರೀಪೇರಿ ಸೇರಿದಂತೆ ಬಣ್ಣ ಹಚ್ಚುವ ಕಾರ್ಯಗಳಾದ ಸೇವಾ ಕಾರ್ಯಗಳನ್ನು ಹತ್ತಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇವೆ ನಾವು ಇದನ್ನು ಭಗವಂತನ ಸೇವೆ ಎಂದು ಮಾಡುತ್ತಿದ್ದು ಸ್ಥಳೀಯವಾಗಿ ಯಾವುದೆ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತ ಇದ್ದೀವಿ ಎಂದರು ಸ್ಥಳೀಯರಲ್ಲಿ ಊಟ ತಿಂಡಿ ಕಾಫಿಯನ್ನು ಪಡೆಯುವುದಿಲ್ಲ ಬೆಂಗಳೂರಿನಿಂದ ಬರುವಾಗಲೆ ನೀರು ಸೇರಿದಂತೆ ಊಟ ತಿಂಡಿ ವ್ಯವಸ್ಥೆ ಮಾಡಿಕೊಂಡು ಬರುತ್ತೇವೆ ಎಂದು ವಿವರಿಸಿದರು.